ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಭಾರತ ತಂಡದ ಮಾಜಿ ಎಡಗೈ ಬ್ಯಾಟ್ಸ್‌ಮನ್ ಮತ್ತು ಬಿಜೆಪಿ ಸಂಸದ ಗೌತಮ್ ಗಂಭೀರ್ ಕೂಡ ತಮ್ಮ ಟ್ವಿಟರ್ ಖಾತೆಯಿಂದ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ಕಪಿಲ್ ದೇವ್ ಅವರ ಬಾಯಿಗೆ ಬಟ್ಟೆ ಕಟ್ಟಿ ಕೋಣೆಗೆ ಕರೆದೊಯ್ದಿದ್ದಾರೆ. ಈ ವಿಡಿಯೋ ನೋಡಿದರೆ ಯಾರೋ ಕಪಿಲ್ ದೇವ್ ಅವರನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ಅನಿಸುತ್ತಿದೆ.
ಗೌತಮ್ ಗಂಭೀರ ವಿಡಿಯೋವನ್ನು ಹಂಚಿಕೊಂಡಿದ್ದಾರೆ: ಎಕ್ಸ್ ಆ್ಯಪ್ನಲ್ಲಿ ಗೌತಮ್ ಗಂಭೀರ್ ಹಂಚಿಕೊಂಡು, ಬೇರೆ ಯಾರಾದರೂ ಈ ಕ್ಲಿಪ್ ಅನ್ನು ಸ್ವೀಕರಿಸಿದ್ದಾರೆಯೇ? ಇದು ನಿಜವಾಗಿಯೂ ಸಂಭವಿಸುವುದಿಲ್ಲ ಎಂದು ಭಾವಿಸುತ್ತೇವೆ ಮತ್ತು ಕಪಿಲ್ ಪಾಜಿ ಚೆನ್ನಾಗಿದ್ದಾರೆ ಎಂದು ಭಾವಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಮೂಲದ ಬಗ್ಗೆ ಯಾರಿಗೂ ಇನ್ನೂ ಮಾಹಿತಿ ತಿಳಿದು ಬಂದಿಲ್ಲ. ಮಾಜಿ ಕ್ರಿಕೆಟಿಗರಾಗಿ ಗಂಭೀರ್ ವಿಡಿಯೋ ಶೇರ್ ಮಾಡಿದ ನಂತರ ಟ್ವಿಟರ್ನಲ್ಲಿ ಇನ್ನಷ್ಟೂ ವೈರಲ್ ಆಯಿತು.
ಇದಕ್ಕೆ ಹಲವರು ಜಾಹೀರಾತಿಗಾಗಿ ಮಾಡಿರುವ ವಿಡಿಯೋದಂತಿದೆ ಎಂದಿದ್ದಾರೆ. ನೀಲಂ ಚೌಧರಿ ಎಂಬುವವರು, ನೀವು ಕೂಡ ಈ ವಿಡಿಯೋವನ್ನು ಯಾವುದೇ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ನೋಡುತ್ತಿದ್ದರೆ, ಈ ಕ್ರಿಕೆಟಿಗ ಕಪಿಲ್ ಅಲ್ಲ ಎಂದು ನಾನು ನಿಮಗೆ ಹೇಳುತ್ತೇನೆ, ಆದ್ದರಿಂದ ದಯವಿಟ್ಟು ವಿಡಿಯೋವನ್ನು ತಪ್ಪಾಗಿ ವೈರಲ್ ಮಾಡಬೇಡಿ? ಎಂದಿದ್ದಾರೆ. ಅಜೀಂ ಕಾಶಿ ಎಂಬುವವರು, ಲಾಲ್ಸಲಾಮ್ ಶೂಟಿಂಗ್ ಸ್ಪಾಟ್ ವಿಡಿಯೋ ಲೀಕ್! ಮೊಯ್ದೀನ್ ಭಾಯ್ ಅವರು ಕಪಿಲ್‌ದೇವ್ ಅವರನ್ನು ರಕ್ಷಿಸಲಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.