ಮುಂಬೈ(ಮಹಾರಾಷ್ಟ್ರ):ವಿರಾಟ್ ಕೊಹ್ಲಿ ಅವರ ಟೀಂ ಇಂಡಿಯಾ ನಾಯಕತ್ವ ಕುರಿತಂತೆ ಆಯ್ಕೆ ಸಮಿತಿಯ ಪರವಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಅಭಿಪ್ರಾಯ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಟೀಂ ಇಂಡಿಯಾದ ಮಾಜಿ ನಾಯಕ ದಿಲೀಪ್ ವೆಂಗ್‌ಸರ್ಕಾರ್ ಹೇಳಿದ್ದು, ವಿವಾದಕ್ಕೆ ನಾಂದಿ ಹಾಡಿದೆ.
ದಕ್ಷಿಣ ಆಫ್ರಿಕಾ ಪ್ರವಾಸದ ಮುನ್ನ ವಿರಾಟ್ ಕೊಹ್ಲಿ ಮಾಧ್ಯಮಗೋಷ್ಟಿಯೊಂದರಲ್ಲಿ ಮಾತನಾಡುತ್ತಾ, ಬಿಸಿಸಿಐನಿಂದ ಯಾರೂ ಟಿ-20 ನಾಯಕತ್ವವನ್ನು ತೊರೆಯಬೇಡಿ ಎಂದು ಹೇಳಲಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಈಗ ಈ ವಿಚಾರದಲ್ಲಿ ಮಾತನಾಡಲು ಗಂಗೂಲಿಗೆ ಅಧಿಕಾರವಿಲ್ಲ ಎಂದು ವೆಂಕಸರ್ಕರ್ ಹೇಳಿದ್ದಾರೆ.
ಗಂಗೂಲಿಗೆ ಆಯ್ಕೆ ಸಮಿತಿಯ ಪರವಾಗಿ ಮಾತನಾಡುವುದು ಸರಿಯಲ್ಲ. ಅವರು ಬಿಸಿಸಿಐ ಅಧ್ಯಕ್ಷರಾಗಿದ್ದಾರೆ. ಆಯ್ಕೆ ಅಥವಾ ನಾಯಕತ್ವದ ಬಗ್ಗೆ ಯಾವುದೇ ಸಮಸ್ಯೆಯಿದ್ದರೂ, ಆಯ್ಕೆ ಸಮಿತಿಯ ಅಧ್ಯಕ್ಷ ಚೇತನ್ ಶರ್ಮಾ ಮಾತನಾಡಬೇಕು ಎಂದು ವೆಂಗ್‌ಸರ್ಕರ್ ಅಭಿಪ್ರಾಯಪಟ್ಟಿದ್ದಾರೆ.