ಮುಂಬೈ:ಕಳಪೆ ಆಟದ ಹೊರತಾಗಿಯೂ ರುತುರಾಜ್ ಗಾಯಕ್ವಾಡ್ ಅವರನ್ನು ಮತ್ತೆ ತಂಡದಲ್ಲಿ ಆಡಿಸುವ ತೀರ್ಮಾನ ತೆಗೆದುಕೊಳ್ಳಲು ತಾವೂ ಹಿಂದಿನಿಂದಲೂ ಅನುಸರಿಸುವ ಸೈಕಾಲಜಿ ಅಭ್ಯಾಸವು ನೆರವಾಯಿತು ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಬುಧವಾರ ಹೇಳಿದ್ದಾರೆ.
ಮೊದಲ ಮೂರು ಪಂದ್ಯಗಳಿಂದ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಗಾಯಕ್ವಾಡ್ ಬುಧವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ 42 ಎಸೆತಗಳಲ್ಲಿ 62 ರನ್ ಬಾರಿಸಿ ಸಿಎಸ್ಕೆ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
" ರುತು ಕಳೆದ ಐಪಿಎಲ್ನಲ್ಲಿ ತಮ್ಮ ಅತ್ಯುತ್ತಮ ಆಟವನ್ನು ತೋರಿದ್ದಾರೆ. ಹಾಗಾಗಿ ಅವರ ಮಾನಸಿಕ ಸ್ಥಿತಿ ಎಲ್ಲಿದೆ ಎನ್ನುವುದನ್ನು ನಿರ್ಣಯಿಸಬೇಕಾಗುತ್ತದೆ. ಅವರನ್ನು ಈ ದಿನ ಹೇಗಿದ್ದೀರಾ ಎಂದು ನಾನು ಕೇಳಿದೆ. ಆ ಪ್ರಶ್ನೆಯನ್ನು ನೀವು ಕೇಳಿದ ನಂತರ ಅವರ ಪ್ರತಿಕ್ರಿಯೆಗೆ ಕಾಯುತ್ತಿರಿತ್ತೀರಾ, ಆಗ ಆತನ ಕಣ್ಣಲ್ಲಿ ಏನಿದೆ ಎಂಬುದು ನಿಮಗೆ ತಿಳಿಯುತ್ತದೆ" ಎಂದು ಧೋನಿ ಪಂದ್ಯದ ನಂತರ ತಿಳಿಸಿದ್ದಾರೆ.