ಬೆಂಗಳೂರು: ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ನ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಮೊದಲ ದಿನವೇ 90+ ಪ್ಲೇಯರ್ ಸೇಲ್ ಆಗಿದ್ದು, 10 ಫ್ರಾಂಚೈಸಿಗಳಿಂದ ತಮ್ಮಗೆ ಅಗತ್ಯವಿರುವ ಆಟಗಾರರ ಖರೀದಿ ಮಾಡಿಕೊಂಡಿದೆ. ಮೊದಲ ದಿನವೇ ವಿಕೆಟ್ ಕೀಪರ್ ಬ್ಯಾಟರ್ ಇಶನ್ ಕಿಶನ್ ದಾಖಲೆಯ 15.25 ಕೋಟಿ ರೂ.ಗೆ ಸೇಲ್ ಆಗಿದ್ದು, 14 ಕೋಟಿ ರೂ.ಗೆ ಆಲ್ರೌಂಡರ್ ದೀಪಕ್ ಚಹರ್ ಸಿಎಸ್ಕೆ ಪಾಲಾಗಿದ್ದಾರೆ.
ಹಾಗಾದ್ರೆ ಮೊದಲ ದಿನ ಯಾವ ತಂಡಕ್ಕೆ ಯಾರೆಲ್ಲ ಸೇರಿಕೊಂಡಿದ್ದಾರೆಂಬ ಮಾಹಿತಿ ಇಲ್ಲಿದೆ...
10 ಫ್ರಾಂಚೈಸಿಗಳಿಂದ ಆಟಗಾರರ ಖರೀದಿಗಾಗಿ 3,88,10,00,000 ಕೋಟಿ ರೂ. ಖರ್ಚು ಮಾಡಿದ್ದು, ಇಲ್ಲಿಯವರೆಗೆ 97 ಆಟಗಾರರು ಖರೀದಿಯಾಗಿದ್ದಾರೆ. ಮುಂಬೈ ಇಂಡಿಯನ್ಸ್ 15.25 ಕೋಟಿ ರೂ ನೀಡಿ ಇಶನ್ ಕಿಶನ್ಗೆ ಖರೀದಿ ಮಾಡಿದ್ದು, ಈ ದಿನದ ಪ್ರಮುಖ ಹೈಲೇಟ್ಸ್
ಚೆನ್ನೈ ಸೂಪರ್ ಕಿಂಗ್ಸ್:ಆಟಗಾರರ ಖರೀದಿಗೆ 69.55 ಕೋಟಿ ಖರ್ಚು, ಉಳಿದ ಹಣ 20.45 ಕೋಟಿ ರೂ
ಖರೀದಿ ಮಾಡಿದ್ದು ಆರು ಪ್ಲೇಯರ್ಸ್, ನಾಲ್ವರು ರಿಟೈನ್
- ಮಹೇಂದ್ರ ಸಿಂಗ್ ಧೋನಿ(12 ಕೋಟಿ ರೂ)
- ಋತುರಾಜ್ ಗಾಯಕ್ವಾಡ್(6 ಕೋಟಿ ರೂ)
- ರವೀಂದ್ರ ಜಡೇಜಾ(16 ಕೋಟಿ ರೂ)
- ಅಂಬಟಿ ರಾಯುಡು(6.75 ಕೋಟಿ ರೂ)
- ರಾಬಿನ್ ಉತ್ತಪ್ಪ (2 ಕೋಟಿ ರೂ)
- ದೀಪಕ್ ಚಹಾರ್ (14 ಕೋಟಿ ರೂ)
- ಡ್ವೇನ್ ಬ್ರಾವೋ (4.40 ಕೋಟಿ ರೂ)
- ಮೊಯಿನ್ ಅಲಿ (8 ಕೋಟಿ ರೂ)
- ಕೆಎಂ ಆಸಿಫ್ (20 ಲಕ್ಷ ರೂ)
- ತುಷಾರ್ ದೇಶಪಾಂಡೆ (8 ಕೋಟಿ ರೂ)
ದೆಹಲಿ ಕ್ಯಾಪಿಟಲ್ಸ್
ಖರೀದಿಗೆ ಬಳಿಕೆ ಮಾಡಿರುವ ಮೊತ್ತ: ರೂ 73.50 ಕೋಟಿ, ಉಳಿದ ಮೊತ್ತ: ರೂ 16.50 ಕೋಟಿ
9 ಪ್ಲೇಯರ್ಸ್ ಖರೀದಿ, 4 ಪ್ಲೇಯರ್ಸ್ ರಿಟೈನ್
- ಪೃಥ್ವಿ ಶಾ(7.50 ಕೋಟಿ ರೂ)
- ಅನ್ರಿಚ್ ನೋರ್ಟ್ಜೆ (6.50 ಕೋಟಿ ರೂ)
- ಅಕ್ಷರ್ ಪಟೇಲ್(9 ಕೋಟಿ ರೂ)
- ರಿಷಬ್ ಪಂತ್ (16 ಕೋಟಿ ರೂ)
- ಡೇವಿಡ್ ವಾರ್ನರ್(6.25 ಕೋಟಿ ರೂ)
- ಮಿಚೆಲ್ ಮಾರ್ಷ್ (6.50 ಕೋಟಿ ರೂ)
- ಮುಸ್ತಾಫಿಜುರ್ ರೆಹಮಾನ್(2 ಕೋಟಿ ರೂ)
- ಶಾರ್ದೂಲ್ ಠಾಕೂರ್(10.75 ಕೋಟಿ ರೂ)
- ಕುಲ್ದೀಪ್ ಯಾದವ್ (2 ಕೋಟಿ ರೂ)
- ಅಶ್ವಿನ್ ಹೆಬ್ಬಾರ್(20 ಲಕ್ಷ ರೂ)
- ಕಮಲೇಶ್ ನಾಗರಕೋಟಿ(1.10 ಕೋಟಿ ರೂ)
- ಸರ್ಫರಾಜ್ ಖಾನ್ (20 ಲಕ್ಷ ರೂ)
- ಕೆಎಸ್ ಭರತ್(2 ಕೋಟಿ ರೂ)
ರಾಯಲ್ ಚಾಲೆಂಜರ್ಸ್ ಬೆಂಗಳೂರು
ಆಟಗಾರರ ಖರೀದಿಗೆ 80.75 ಕೋಟಿ ಬಳಕೆ, ಬಾಕಿ ಇರುವ ಮೊತ್ತ 9.25 ಕೋಟಿ ರೂ.
8 ಪ್ಲೇಯರ್ಸ್ ಖರೀದಿ, 3 ಪ್ಲೇಯರ್ಸ್ ರಿಟೈನ್
- ವಿರಾಟ್ ಕೊಹ್ಲಿ(15 ಕೋಟಿ ರೂ)
- ಗ್ಲೆನ್ ಮ್ಯಾಕ್ಸ್‌ವೆಲ್ (11 ಕೋಟಿ ರೂ)
- ಮೊಹಮ್ಮದ್ ಸಿರಾಜ್(7 ಕೋಟಿ ರೂ)
- ಜೋಶ್ ಹ್ಯಾಜಲ್‌ವುಡ್(7.75 ಕೋಟಿ ರೂ)
- ದಿನೇಶ್ ಕಾರ್ತಿಕ್ (5.50 ಕೋಟಿ ರೂ)
- ಹರ್ಷಲ್ ಪಟೇಲ್(10.75 ಕೋಟಿ ರೂ)
- ಫಾಫ್ ಡು ಪ್ಲೆಸಿಸ್ (7 ಕೋಟಿ ರೂ)
- ವನಿಂಡು ಹಸರಂಗ(10.75 ಕೋಟಿ ರೂ)
- ಶಹಬಾಜ್ ಅಹ್ಮದ್(2.40 ಕೋಟಿ ರೂ)
- ಅನುಜ್ ರಾವತ್(3.4 ಕೋಟಿ ರೂ)
- ಆಕಾಶ್ ದೀಪ್(20 ಲಕ್ಷ ರೂ)
ಕೋಲ್ಕತ್ತಾ ನೈಟ್ ರೈಡರ್ಸ್
77.35 ಕೋಟಿ ರೂ ಖರ್ಚು, ಬಾಕಿ ಮೊತ್ತ: ರೂ 12.65 ಕೋಟಿ
ಐವರು ಪ್ಲೇಯರ್ಸ್ ಖರೀದಿ, 4 ಪ್ಲೇಯರ್ಸ್ ರಿಟೈನ್
- ಆಂಡ್ರೆ ರಸೆಲ್(12 ಕೋಟಿ ರೂ)
- ಸುನಿಲ್ ನರೈನ್(6 ಕೋಟಿ ರೂ)
- ವರುಣ್ ಚಕ್ರವರ್ತಿ(8 ಕೋಟಿ ರೂ)
- ವೆಂಕಟೇಶ್ ಅಯ್ಯರ್ (8 ಕೋಟಿ ರೂ)
- ಶ್ರೇಯಸ್ ಅಯ್ಯರ್(12.25 ಕೋಟಿ ರೂ)
- ಪ್ಯಾಟ್ ಕಮಿನ್ಸ್ (7.25 ಕೋಟಿ ರೂ)
- ನಿತೀಶ್ ರಾಣಾ (12.25 ಕೋಟಿ ರೂ)
- ಶಿವಂ ಮಾವಿ(7.25 ಕೋಟಿ ರೂ)
- ಶೆಲ್ಡನ್ ಜಾಕ್ಸನ್ (60 ಲಕ್ಷ ರೂ)
ಮುಂಬೈ ಇಂಡಿಯನ್ಸ್
ಖರ್ಚು ಮಾಡಿದ ಮೊತ್ತ: ರೂ 62.15 ಕೋಟಿ, ಬಾಕಿ ಮೊತ್ತ: ರೂ 27.85 ಕೋಟಿ