ಮುಂಬೈ:ಟೀಮ್ ಇಂಡಿಯಾದ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ 50ನೇ ಏಕದಿನ ಶತಕ ಸಿಡಿಸಿ ವಿಶ್ವದಾಖಲೆ ಬರೆದಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಕೊಹ್ಲಿ, ವಿಶ್ವದಾಖಲೆಯ ಶತಕ ಸಿಡಿಸಿ ಅಬ್ಬರಿಸಿದರು. ವಿರಾಟ್ ಶ್ರೇಷ್ಠ ಸಾಧನೆಯನ್ನು ವಿಶ್ವದೆಲ್ಲೆಡೆ ಕೊಂಡಾಡಲಾಗುತ್ತಿದೆ.
ನ್ಯೂಜಿಲೆಂಡ್ ವಿರುದ್ಧ ವಿಶ್ವಕಪ್ 2023 ರ ಸೆಮಿ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ ಏಕದಿನ ಕ್ರಿಕೆಟ್ನ ಐವತ್ತನೇ ಶತಕ ಸಿಡಿಸುವ ಮೂಲಕ ಶ್ರೇಷ್ಠ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿದರು. ಕೊಹ್ಲಿಯ ಈ ಅಸಾಮಾನ್ಯ ಸಾಧನೆ ಮತ್ತು ವಿಶೇಷ ಉತ್ಸಾಹವನ್ನು ಟೆನಿಸ್ ದಿಗ್ಗಜ ನೊವಾಕ್ ಜೊಕೊವಿಕ್ ಸೇರಿದಂತೆ ಕ್ರಿಕೆಟ್ ಜಗತ್ತು ಒಗ್ಗಟ್ಟಿನಿಂದ ಶ್ಲಾಘಿಸಿದೆ.
ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಹಂಚಿಕೊಂಡ ನೊವಾಕ್ ಜೊಕೊವಿಕ್ ಅವರು ಕೊಹ್ಲಿಗೆ ಅಭಿನಂದನೆಯ ಸಂದೇಶ ರವಾನಿಸಿದ್ದಾರೆ. "ಅಭಿನಂದನೆಗಳು ವಿರಾಟ್, ಲೆಜೆಂಡರಿ" ಎಂದು ಬರೆದುಕೊಂಡಿದ್ದಾರೆ. ಲಿಟಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಕೂಡ ಸೂಪರ್ ಹ್ಯೂಮನ್ ವಿರಾಟ್ ಕೊಹ್ಲಿಯನ್ನು ಶ್ಲಾಘಿಸಿದ್ದಾರೆ.
ಟೀಮ್ ಇಂಡಿಯಾದ ದಿಗ್ಗಜ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಕೂಡ ವಿರಾಟ್ ಕೊಹ್ಲಿ ಸಾಧನೆಯ ಬಗ್ಗೆ ಭಾರಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಈ ಸಂದರ್ಭದಲ್ಲಿ ಕೊಹ್ಲಿಯ ಅಗಲಿದ ತಂದೆ ಈ ಸಾಧನೆಯಿಂದ ಸಂತೋಷಗೊಂಡಿರುತ್ತಾರೆ ಎಂದಿದ್ದಾರೆ.