ಬೆಂಗಳೂರು: ಲೀಗ್ ಹಂತದ ಪಂದ್ಯಗಳನ್ನು ಮುಗಿಸಿರುವ ಮಹಾರಾಜ ಟಿ20 ಕ್ರಿಕೆಟ್ ಟ್ರೋಫಿ 2022 ಟೂರ್ನಿಯು ಕೊನೆಯ ಹಂತಕ್ಕೆ ಬಂದಿದೆ. ಎಲಿಮಿನೇಟರ್ ಹಾಗೂ ಕ್ವಾಲಿಫೈಯರ್ ಹಾಗು ಫೈನಲ್ ಪಂದ್ಯವನ್ನು ನೋಡಲು ಅಭಿಮಾನಿಗಳು ಸಹ ಕಾತರದಿಂದ ಕಾಯುತ್ತಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಈ ನಿಟ್ಟಿನಲ್ಲಿ ಸಿಹಿಸುದ್ದಿ ನೀಡಿದೆ. ಮುಂದಿನ ಪಂದ್ಯಗಳನ್ನು ಅಭಿಮಾನಿಗಳು ಉಚಿತ ಪ್ರವೇಶ ಪಡೆದು ಎಂಜಾಯ್ ಮಾಡಬಹುದು ಎಂದು ಸಂಸ್ಥೆ ಘೋಷಿಸಿದೆ.
ಆಗಸ್ಟ್ 23ರಿಂದ (ಇಂದಿನಿಂದ) ಆರಂಭವಾಗಲಿರುವ ಎಲಿಮಿನೇಟರ್ ಹಾಗೂ 26ರಂದು ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ಫೈನಲ್ ಪಂದ್ಯಕ್ಕೆ ಕ್ರಿಕೆಟ್ ಅಭಿಮಾನಿಗಳಿಗೆ ಫ್ರೀ ಎಂಟ್ರಿ ಇರಲಿದೆ. ಕ್ರೀಡಾಂಗಣದ 'ಬಿ ಅಪ್ಪರ್ ಸ್ಟ್ಯಾಂಡ್ ಅಭಿಮಾನಿಗಳಿಗೆ ಮೀಸಲಿರಲಿದೆ. ಗೇಟ್ ನಂಬರ್ 2ರಲ್ಲಿ ಪ್ರವೇಶಾವಕಾಶವಿದೆ. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು ಎಂದು ಕೆಎಸ್‌ಸಿಎ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.