ಕರ್ನಾಟಕ

karnataka

ETV Bharat / sports

ಭ್ರಷ್ಟಾಚಾರ ನೀತಿ ಸಂಹಿತೆ ಉಲ್ಲಂಘನೆ : ಲಂಕಾದ ಮಾಜಿ ಕ್ರಿಕೆಟಿಗನಿಗೆ 8 ವರ್ಷ ನಿಷೇಧ ಹೇರಿದ ಐಸಿಸಿ - ಶ್ರೀಲಂಕಾದ ​ ದಿಲ್ಹಾರ ಲೋಕುಹಟ್ಟಿಗೆ ನಿಷೇಧ

ಹಿಂದೆ ಭ್ರಷ್ಟಾಚಾರ ಆರೋಪದ ಮೇಲೆ 2019ರಲ್ಲಿ ಲೋಕುಹಟ್ಟಿಗೆಯುನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿತ್ತು. ಇದೀಗ ಲಿಖಿತ ಮತ್ತು ಮೌಖಿಕ ವಾದದ ಪೂರ್ಣ ವಿಚಾರಣೆಯನ್ನು ಅನುಸರಿಸಿ, ಐಸಿಸಿ ನ್ಯಾಯಮಂಡಳಿ ಲೋಕುಹಟ್ಟಿಗೆ ಅವರನ್ನು ತಪ್ಪಿತಸ್ಥರೆಂದು ಗುರುತಿಸಿ 8 ವರ್ಷಗಳ ಕಾಲ ನಿಷೇಧ ಹೇರಿದೆ..

ಲಂಕಾದ ಮಾಜಿ ವೇಗದ ಬೌಲರ್​ ದಿಲ್ಹಾರ ಲೋಕುಹಟ್ಟಿಗೆಲಂಕಾದ ಮಾಜಿ ವೇಗದ ಬೌಲರ್​ ದಿಲ್ಹಾರ ಲೋಕುಹಟ್ಟಿಗೆ
ಲಂಕಾದ ಮಾಜಿ ವೇಗದ ಬೌಲರ್​ ದಿಲ್ಹಾರ ಲೋಕುಹಟ್ಟಿಗೆ

By

Published : Apr 19, 2021, 5:02 PM IST

ನವದೆಹಲಿ :ಐಸಿಸಿ ಭ್ರಷ್ಟಾಚಾರ ನಿಗ್ರಹ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಶ್ರೀಲಂಕಾದ ಮಾಜಿ ವೇಗದ ಬೌಲರ್​ ದಿಲ್ಹಾರ ಲೋಕುಹಟ್ಟಿಗೆ ಅವರನ್ನು ಐಸಿಸಿ 8 ವರ್ಷಗಳ ಕಾಲ ಯಾವುದೇ ಕ್ರಿಕೆಟ್ ಚಟುವಟಿಕೆಯಲ್ಲಿ ಪಾಲ್ಗೊಳ್ಳದಿರದಂತೆ ನಿಷೇಧ ಹೇರಿದೆ.

ಲೋಕುಹಟ್ಟಿಗೆ ಮೇಲೆ ಐಸಿಸಿ 3 ನಿಯಮಗಳನ್ನು ಉಲ್ಲಂಘಿಸಿರುವ ಆರೋಪ ಕೇಳಿ ಬಂದಿದೆ. ಅವರು ಅಂತಾರಾಷ್ಟ್ರೀಯ ಪಂದ್ಯಕ್ಕೆ ಸಂಬಂಧಿಸಿದ ಮಾಹಿತಿ ಬಹಿರಂಗ ಆರ್ಟಿಕಲ್ 2.1.1 ಉಲ್ಲಂಘನೆ, ಭ್ರಷ್ಟಾಚಾರ ನಡೆಸಲು ಶ್ರೀಲಂಕಾದ ಒಬ್ಬ ಆಟಗಾರನಿಗೆ ನೇರ ಪ್ರಚೋಧನೆ ಅಥವಾ ಪ್ರೋತ್ಸಾಹ ನೀಡುವ ಮೂಲಕ ಆರ್ಟಿಕಲ್ 2.1.4 ಉಲ್ಲಂಘನೆ ಹಾಗೂ ಭ್ರಷ್ಟಾಚಾರಕ್ಕೆ (ಬುಕ್ಕಿಗಳು) ಪ್ರಚೋಧಿಸಿದ ವಿಚಾರವನ್ನು ಐಸಿಸಿ ಭ್ರಷ್ಟಾಚಾರ ನಿಗ್ರಹ ಘಟಕದ ಮುಂದೆ ಬಹಿರಂಗಪಡಿಸದೇ ಆರ್ಟಿಕಲ್​ 2.4.4 ನಿಯಮ ಉಲ್ಳಂಘಿಸಿದ್ದಾರೆ ಎಂದು ತಿಳಿದು ಬಂದಿದೆ.

ಹಿಂದೆ ಭ್ರಷ್ಟಾಚಾರ ಆರೋಪದ ಮೇಲೆ 2019ರಲ್ಲಿ ಲೋಕುಹಟ್ಟಿಗೆಯುನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿತ್ತು. ಇದೀಗ ಲಿಖಿತ ಮತ್ತು ಮೌಖಿಕ ವಾದದ ಪೂರ್ಣ ವಿಚಾರಣೆಯನ್ನು ಅನುಸರಿಸಿ, ಐಸಿಸಿ ನ್ಯಾಯಮಂಡಳಿ ಲೋಕುಹಟ್ಟಿಗೆ ಅವರನ್ನು ತಪ್ಪಿತಸ್ಥರೆಂದು ಗುರುತಿಸಿ 8 ವರ್ಷಗಳ ಕಾಲ ನಿಷೇಧ ಹೇರಿದೆ.

ಇಂತಹದ್ದೇ ಪ್ರಕರಣದಲ್ಲಿ ವಾರದ ಹಿಂದೆಯಷ್ಟೇ ಜಿಂಬಾಬ್ವೆಯೆ ಮಾಜಿ ನಾಯಕ ಹೀತ್ ಸ್ಟ್ರೀಕ್​ ಅವರನ್ನು ಕೂಡ ಐಸಿಸಿ 8 ವರ್ಷಗಳ ಕಾಲ ನಿಷೇಧ ಹೇರಿತ್ತು.

ಇದನ್ನು ಓದಿ:ಸ್ಟ್ರೈಕ್ ರೇಟ್ ಹೆಚ್ಚಿಸಿಕೊಳ್ಳುವತ್ತ ಗಮನಹರಿಸಿದ್ದೇನೆ: ಧವನ್

ABOUT THE AUTHOR

...view details