ನವದೆಹಲಿ:ಏಷ್ಯಾ ಕಪ್ಗೆ ಭಾರತ ಪಾಕಿಸ್ತಾನಕ್ಕೆ ಪ್ರವಾಸ ಮಾಡುವುದಿಲ್ಲ ಎಂದು ಹೇಳಿದ ನಂತರ ಪಾಕಿಸ್ತಾನ ಹೈಬ್ರಿಡ್ ಕ್ರಿಕೆಟ್ ಮಾದರಿ ಸೂಚಿಸಿದ್ದು, ಅದರಂತೆ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಪಂದ್ಯಗಳನ್ನು ಆಯೋಜಿಸಲು ಸಿದ್ಧತೆಗಳು ನಡೆದಿದೆ. ಇನ್ನು ಕೆಲವೇ ದಿನಗಳಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಟೂರ್ನಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಮುಂದಿನ ವಾರದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಸಹ ವಿಶ್ವಕಪ್ನ ವೇಳಾಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಆದರೆ ಪಾಕಿಸ್ತಾನದ ಅನುಭವಿ ಆಟಗಾರ ಜಾವೇದ್ ಮಿಯಾಂದಾದ್ ರೈಲು ಹೋದ ನಂತರ ಟಿಕೆಟ್ ಖರೀದಿಸಿದ್ದಾರೆ. ಏಕೆಂದರೆ ಪಾಕಿಸ್ತಾನ ಭಾರತಕ್ಕೆ ವಿಶ್ವಕಪ್‌ಗಾಗಿ ಪ್ರವಾಸ ಮಾಡುವ ಸಾಧ್ಯತೆಗಳು ಹೆಚ್ಚಿದೆ. ಐಸಿಸಿ ಕಳುಹಿಸಿದ ಕರಡು ವೇಳಾಪಟ್ಟಿಗೆ ಕೇವಲ ಎರಡು ಮೈದಾನದಲ್ಲಿ ಆಡುವ ಬಗ್ಗೆ ತಕರಾರು ತೆಗೆದಿದ್ದೇ ವಿನಃ ಪ್ರವಾಸ ನಿರಾಕರಣೆ ಮಾಡಿಲ್ಲ. ಇಷ್ಟೆಲ್ಲ ಬೆಳವಣಿಗೆಗಳ ನಂತರ ಮಾಜಿ ಆಟಗಾರ ಭಾರತ ಏಷ್ಯಾ ಕಪ್ಗೆ ಪಾಕಿಸ್ತಾನಕ್ಕೆ ಬಾರದಿದ್ದರೆ, ಪಾಕ್ ಸಹ ಪ್ರವಾಸ ಮಾಡಬಾರದು ಎಂದು ರಾಗ ತೆಗೆದಿದ್ದಾರೆ.
ಈಗ ಇವರ ಹೇಳಿಕೆ ಎಷ್ಟು ಮಹತ್ವ ಪಡೆಯುತ್ತದೆ ಎಂದು ತಿಳಿದಿಲ್ಲ. ಆದರೆ ಪಾಕಿಸ್ತಾನಕ್ಕೆ ಭಾರತ ಪ್ರವಾಸ ಮಾಡದಿರುವುದಕ್ಕೆ ಇತರ ಏಷ್ಯಾ ರಾಷ್ಟ್ರಗಳೂ ಬೆಂಬಲ ಸೂಚಿಸಿ ಹೈಬ್ರಿಡ್ ಮಾದರಿಗೆ ಒಪ್ಪಿಕೊಂಡಿವೆ. ಅಲ್ಲದೇ ಶ್ರೀಲಂಕಾ ಸಹ ಪಾಕಿಸ್ತಾನ ಪ್ರವಾಸವನ್ನು ಏಷ್ಯಾ ಕಪ್ ವೇಳೆ ಬಹುತೇಕ ಮಾಡುವುದಿಲ್ಲ. ಈ ಕಾರಣದಿಂದ ಏಷ್ಯಾಕಪ್ನ ಕೇವಲ ನಾಲ್ಕು ಪಂದ್ಯಗಳು ಮಾತ್ರ ಪಾಕಿಸ್ತಾನದಲ್ಲಿ ನಡೆಯಲಿದೆ. ಪಂದ್ಯಗಳು ಶ್ರೀಲಂಕಾದಲ್ಲೇ ನಡೆಯುತ್ತವೆ. ಅಲ್ಲದೇ ಭಾರತ ಅಂತಿಮ ಹಂತಗಳನ್ನು ಪ್ರವೇಶಿಸಿದಲ್ಲಿ ಫೈನಲ್ ಸಹ ಲಂಕಾದಲ್ಲೇ ನಡೆಯಲಿದೆ.
ಇದನ್ನೂ ಓದಿ:ODI World Cup: ಏಕದಿನ ವಿಶ್ವಕಪ್ ಕ್ರಿಕೆಟ್- ಚೆನ್ನೈ, ಬೆಂಗಳೂರಿನಲ್ಲಿ ಪಂದ್ಯ ಆಡಲ್ಲ ಎಂದ ಪಾಕಿಸ್ತಾನ!