ಕರಾಚಿ(ಪಾಕಿಸ್ತಾನ): ಐಸಿಸಿ ಟಿ20 ವಿಶ್ವಕಪ್ ಟೂರ್ನಾಮೆಂಟ್ಗೂ ಮೊದಲು ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದೆ. ಈ ವಿಷಯವನ್ನಿಟ್ಟುಕೊಂಡು ಅನೇಕರು ತಮ್ಮದೇ ರೀತಿಯಲ್ಲಿ ಹೇಳಿಕೆ ನೀಡ್ತಿದ್ದು, ಆ ಸಾಲಿಗೆ ಇದೀಗ ಪಾಕ್ ತಂಡದ ಮಾಜಿ ನಾಯಕ ಸಲ್ಮಾನ್ ಭಟ್ ಸಹ ಸೇರಿಕೊಂಡಿದ್ದಾರೆ.
ತಂಡದ ಆಟಗಾರರ ಫಿಟ್ನೆಸ್ ಬಗ್ಗೆ ಸಲ್ಮಾನ್ ಪ್ರಶ್ನೆ: ಭಾರತ ತಂಡದ ಫಿಟ್ನೆಸ್ ಬಗ್ಗೆ ಪ್ರಶ್ನೆ ಮಾಡಿರುವ ಸಲ್ಮಾನ್ ಭಟ್, ತಂಡದಲ್ಲಿರುವ ಕೆಲ ಆಟಗಾರರು ಹೆಚ್ಚಿನ ತೂಕ ಹೊಂದಿದ್ದಾರೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಂಡದಲ್ಲಿ 37 ವರ್ಷದ ಕೆಲ ಆಟಗಾರರಿದ್ದು, ಅವರು ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡದ ಪ್ಲೇಯರ್ಸ್ಗೆ ಹೋಲಿಕೆ ಮಾಡಿದಾಗ ಭಾರತದ ಆಟಗಾರರು ಈ ಸಮಸ್ಯೆ ಹೆಚ್ಚಾಗಿ ಹೊಂದಿದ್ದಾರೆಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ಆಟಗಾರರು ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದುಕೊಳ್ಳುವ ಕ್ರಿಕೆಟಿಗರಾಗಿದ್ದಾರೆ. ಗರಿಷ್ಠ ಸಂಖ್ಯೆಯ ಪಂದ್ಯಗಳಲ್ಲಿ ಭಾಗಿಯಾಗ್ತಾರೆ. ಆದರೆ, ಅವರು ಫಿಟ್ ಆಗಿಲ್ಲ. ಭಾರತೀಯ ಪ್ಲೇಯರ್ಸ್ ದೇಹ ರಚನೆಗೆ ಹೋಲಿಕೆ ಮಾಡಿದರೆ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಪ್ಲೇಯರ್ಸ್ ಉತ್ತಮವಾಗಿದ್ದಾರೆ ಎಂದಿದ್ದಾರೆ.