ನವದೆಹಲಿ:ಸುರೇಶ್ ರೈನಾ ಮಗಳು ಗ್ರೇಸಿಯಾಗಾಗಿ ಹಾಡು ಹಾಡಿದ್ದಾರೆ. ಮೈದಾನದಲ್ಲಿ ಆಡುವುದರ ಜೊತೆಗೆ ಭಾರತ ತಂಡದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಗಾಯನದಲ್ಲೂ ನಿಪುಣರು. ರೈನಾ ತಮ್ಮ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ತಮ್ಮ ಮಗಳಿಗಾಗಿ ಹಾಡನ್ನು ಹಾಡಿದ್ದಾರೆ. ಜನರು ಈ ವಿಡಿಯೋವನ್ನು ತುಂಬಾ ಇಷ್ಟಪಡುತ್ತಿದ್ದಾರೆ.
ಅನೇಕ ಹಾಡುಗಳನ್ನು ಹಾಡಿದ್ದ ರೈನಾ:ಭಾರತದ ಮಾಜಿ ಸ್ಟಾರ್ ಆಟಗಾರ ಸುರೇಶ್ ರೈನಾ ಅವರಿಗೆ ಹಾಡುವುದೆಂದರೆ ತುಂಬಾ ಇಷ್ಟ. ಹೌದು, ಇತ್ತೀಚಿಗೆ ಅವರ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಟ್ರೆಂಡಿಂಗ್ನಲ್ಲಿದೆ. ಇದರಲ್ಲಿ ರೈನಾ ತಮ್ಮ ಮಗಳು ಗ್ರೇಸಿಯಾಗಾಗಿ ವಿಶಿಷ್ಟವಾದ ಹಾಡನ್ನು ಹಾಡಿದ್ದಾರೆ. ಇದಕ್ಕೂ ಮುನ್ನ ರೈನಾ ಹಲವು ಬಾರಿ ತಮ್ಮ ಪ್ರತಿಭೆ ತೋರಿದ್ದಾರೆ. ಕ್ರಿಕೆಟ್ ಆಡುವುದರ ಹೊರತಾಗಿ, ಅವರು ಅನೇಕ ಹಾಡುಗಳನ್ನು ಹಾಡಿದ್ದಾರೆ. ಅವರ ಒಂದಿಲ್ಲೊಂದು ವೀಡಿಯೊಗಳನ್ನು ರೈನಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ತಮ್ಮ ಮಗಳಿಗಾಗಿ ಹಾಡಿರುವ ಹಾಡು ರೈನಾ ಅವರ ಹೃದಯಕ್ಕೆ ತುಂಬಾ ಹತ್ತಿರವಾಗಿದೆ. ಅವರು ಈ ಹಾಡನ್ನು 2018ರಲ್ಲಿ ಹಾಡಿದ್ದಾರೆ.
ಈ ವಿಡಿಯೋಗೆ 6 ಸಾವಿರಕ್ಕೂ ಹೆಚ್ಚು ಲೈಕ್‌ಗಳು:ಭಾರತದ ಮಾಜಿ ಆಟಗಾರ ಸುರೇಶ್ ರೈನಾ ತಮ್ಮ ಟ್ವಿಟರ್ ಹ್ಯಾಂಡಲ್‌ನಿಂದ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ರೈನಾ ಹಾಡನ್ನು ಹಾಡುತ್ತಿರುವುದನ್ನು ಕಾಣಬಹುದು. ಅವರ ಈ ಪ್ರತಿಭೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಈ ಹಾಡಿಗೆ ಅಭಿಮಾನಿಗಳು ತಲೆದೂಗುತ್ತಿದ್ದಾರೆ. ಜನರು ರೈನಾ ಅವರ ವಿಡಿಯೋಗೆ ನಿರಂತರವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋಗೆ 6 ಸಾವಿರಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ.