ನವದೆಹಲಿ: 2023ರ ಟೆಸ್ಟ್ ಚಾಂಪಿಯನ್ಶಿಪ್ ಸೋಲಿನ ನಂತರ ಪರಾಜಯಕ್ಕೆ ಒಂದೊಂದೇ ಕಾರಣಗಳನ್ನು ಹುಡುಕಲಾಗುತ್ತಿದೆ. ಬ್ಯಾಟಿಂಗ್ ವೈಫಲ್ಯದ ಜೊತೆಗೆ ಹನ್ನೊಂದರ ಬಳಗದಲ್ಲಿ ರವಿಚಂದ್ರನ್ ಅಶ್ವಿನ್ ಅವರನ್ನು ಆಡಿಸದೇ ಇರುವುದು ಸಹ ಸೋಲಿಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಟಾಸ್ ಗೆದ್ದು ತಂಡ ಪ್ರಕಟಗೊಂಡ ಕೂಡಲೇ ಹಿರಿಯ ಆಟಗಾರರು ಅಶ್ವಿನ್ ಕೈಬಿಟ್ಟಿದ್ದು ತಪ್ಪು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಸೋಲಿನ ನಂತರ ಈಗ ಮತ್ತೆ ಇದೇ ಮಾತು ಚರ್ಚೆಗೆ ಕಾರಣವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಅಶ್ವಿನ್ ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನದಲ್ಲಿದ್ದರೂ ಅವರನ್ನು ಆಡಿಸಿಲ್ಲ ಎಂಬುದು. ಅಲ್ಲದೇ ಐಪಿಎಲ್ ಸಮಯದಲ್ಲಿ ಅಶ್ವಿನ್ ಡ್ಯೂಕ್ ಬಾಲ್ನಲ್ಲಿ ಅಭ್ಯಾಸವನ್ನು ಮಾಡುತ್ತಿದ್ದರು. ಅಲ್ಲದೇ ಇಂಗ್ಲೆಂಡ್ನ ಸಮಯಕ್ಕೆ ಆಹಾರ ಸೇವನೆ, ನಿದ್ರೆ ಮಾಡಿ ಅನಾರೋಗ್ಯಕ್ಕೆ ತುತ್ತಾಗ ರೀತಿಯನ್ನು ಮೊದಲೇ ಪೂರ್ವ ತಯಾರಿಯನ್ನೂ ಮಾಡಿಕೊಂಡಿದ್ದರು. ಎಲ್ಲರೂ ಐಪಿಎಲ್ ಗುಂಗಿನಲ್ಲಿದ್ದರೆ ಅಶ್ವಿನ್ ಮಾತ್ರ ಡಬ್ಲ್ಯೂಟಿಸಿ ತಯಾರಿಯಲ್ಲಿದ್ದರು.
ಈಗಿನ ಕ್ರಿಕೆಟ್ ಕಾಲಘಟ್ಟದಲ್ಲಿ ಅಶ್ವಿನ್ ಜೊತೆ ನಡೆದುಕೊಂಡಂತೆ ಬೇರಾವ ಆಟಗಾರನ್ನು ನಡೆಸಿಕೊಂಡಿಲ್ಲ. ಒಂದು ವೇಳೆ ತಂಡದಲ್ಲಿ ನಂ.1 ಶ್ರೇಯಾಂಕ್ ಬ್ಯಾಟರ್ ಇದ್ದಲ್ಲಿ ಅವರನ್ನು ತಂಡದಿಂದ ಹೊರಗಿಟ್ಟು ಆಡಿಸಲು ಸಾಧ್ಯವಾಗುತ್ತಿತ್ತೇ? ಬ್ಯಾಟರ್ ಹಿಂದೆ ಯಾವ ರೀತಿಯ ಪಿಚ್ನಲ್ಲಿ ರನ್ಗಳಿಸಿದ್ದಾನೆ ಎಂದು ನೋಡಿ ಕಣಕ್ಕಿಳಿಸುತ್ತಾರಾ? ಇಲ್ಲ ಇದು ಖಂಡಿತಾ ನಡೆಯುವುದಿಲ್ಲ ಎಂದು ಪತ್ರಿಕೆ ಒಂದರ ಲೇಖನದಲ್ಲಿ ಬರೆದಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತವು ಅಶ್ವಿನ್ ಅವರನ್ನು ಹೊರಗಿಟ್ಟು ನಾಲ್ವರು ವೇಗದ ಬೌಲರ್‌ಗಳಿಗೆ ಆದ್ಯತೆ ನೀಡಿತು. ಆದರೆ ಅಶ್ವಿನ್ ಅವರ ರೆಕಾರ್ಡ್ನಲ್ಲಿ ಅತಿ ಹೆಚ್ಚ ಎಡಗೈ ಬ್ಯಾಟರ್ಗಳನ್ನು ಕಾಡಿದ ದಾಖಲೆ ಇದೆ. ಆದರೆ ಇದು ಲೆಕ್ಕಕ್ಕೆ ಬರಲಿಲ್ಲ. ಆಸ್ಟ್ರೇಲಿಯಾ ಐವರು ಎಡಗೈ ಬ್ಯಾಟರ್ಗಳೊಂಡಿಗೆ ಕಣಕ್ಕಿಳಿದಿತ್ತು, ಅಶ್ವಿನ್ ಇದ್ದಿದ್ದರೆ ವೇಗಿಗಳಿಗಿಂತೆ ಹೆಚ್ಚು ಪರಿಣಾಮಕಾರಿಯಾಗುತ್ತಿದ್ದರು. ಅಲ್ಲದೇ ಎರಡನೇ ಇನ್ನಿಂಗ್ಸ್ನ ಕೊನೆಯಲ್ಲಿ ಸಾರ್ಕ್ 43 ರನ್ ಗಳಿಸಿ 93 ರನ್ನ ಜೊತೆಯಾಟ ಮಾಡಿದ್ದರು. ಇದು ಎರಡನೇ ಇನ್ನಿಂಗ್ಸ್ನ ಬೃಹತ್ ಮೊತ್ತಕ್ಕೆ ಕಾರಣವಾಯತು.
ಅಶ್ವಿನ್ 92 ಪಂದ್ಯದಲ್ಲಿ 174 ಇನ್ನಿಂಗ್ಸ್ ಆಡಿದ್ದು, 51.8 ಸ್ಟ್ರೈಕ್ ರೇಟ್‌ನಲ್ಲಿ 474 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಏಳು ಬಾರಿ 10 ವಿಕೆಟ್ ಮತ್ತು 32 ಬಾರಿ ಐದು ವಿಕೆಟ್ ಪಡೆದುಕೊಂಡಿದ್ದಾರೆ. ಇಷ್ಟು ಉತ್ತಮ ರೆಕಾರ್ಡ್ ಇದ್ದರೂ ಅಶ್ವಿನ್ ಅವರನ್ನು ಪಿಚ್ನ ಕಾರಣಕ್ಕೆ ಆಡಿಸಿಲ್ಲ ಎಂದರೆ ನಿಜಕ್ಕೂ ಬೇಸರದ ಸಂಗತಿ ಎಂದಿದ್ದಾರೆ.
ಬ್ಯಾಟಿಂಗ್ ಬಗ್ಗೆಯೂ ಬರೆದಿರುವ ಗವಾಸ್ಕರ್ ನಾಯಕ ರೋಹಿತ್ ಶರ್ಮಾ ಮತ್ತು ಅನುಭವಿ ಚೇತೇಶ್ವರ ಪೂಜಾರ ಔಟ್ ಆಎದ ಬಾಲ್ಗೆ ಆವರು ಆಡಿದ ಶಾಟ್ನ್ನು ಪ್ರಶ್ನಿಸಿದ್ದಾರೆ. ಇಂತಹ ಮಹತ್ವದ ಪಂದ್ಯದಲ್ಲಿ ತಾಳ್ಮೆಯಿಂದ ಬಾಲ್ನ್ನು ಸಮಗ್ರವಾಗಿ ಗಮನಿಸಿ ಆಡಬೇಕಾದ ಆಟಗಾರರೇ ನಿರ್ಲಕ್ಷ್ಯದ ರೀತಿಯ ಶಾಟ್ ಸೆಲೆಕ್ಟ್ ಮಾಡಿದ್ದಾರೆ ಎಂದು ಬರೆದಿದ್ದಾರೆ.
ಇದನ್ನೂ ಓದಿ:Sourav Ganguly: ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವ ಯಾಕೆ ಬಿಟ್ರು ಎಂಬುದೇ ಪ್ರಶ್ನೆ: ಸೌರವ್ ಗಂಗೂಲಿ