ಕರ್ನಾಟಕ

karnataka

ETV Bharat / sports

ಮಹಿಳಾ ತಂಡದ ಬ್ಯಾಟಿಂಗ್​ ಕೋಚ್​ ಆಗಿ ಶಿವ ಸುಂದರ್ ದಾಸ್​​.. ಯಾರಿದು ಗೊತ್ತಾ? - ಮಹಿಳಾ ಕ್ರಿಕೆಟ್​​ ತಂಡದ ಬ್ಯಾಟಿಂಗ್​ ಕೋಚ್​

ಟೀಂ ಇಂಡಿಯಾ ಟೆಸ್ಟ್ ತಂಡದ ಮಾಜಿ ಓಪನರ್​​ ಶಿವ ಸುಂದರ್ ದಾಸ್​ಗೆ ಇದೀಗ ಮಹಿಳಾ ತಂಡದ ಬ್ಯಾಟಿಂಗ್​​ ಕೋಚ್​​ ಆಗಿ ಆಯ್ಕೆ ಮಾಡಿದ್ದು, ಇಂಗ್ಲೆಂಡ್​ ವಿರುದ್ಧದ ಸರಣಿಯಲ್ಲಿ ತಂಡ ಸೇರಿಕೊಳ್ಳಲಿದ್ದಾರೆ.

Shiv Sunder Das
Shiv Sunder Das

By

Published : May 17, 2021, 10:58 PM IST

ಮುಂಬೈ:ಟೀಂ ಇಂಡಿಯಾ ಮಹಿಳಾ ಕ್ರಿಕೆಟ್​​ ತಂಡದ ಬ್ಯಾಟಿಂಗ್​ ಕೋಚ್​ ಆಗಿ ಶಿವ ಸುಂದರ್ ದಾಸ್​​ ಆಯ್ಕೆಯಾಗಿದ್ದು, ಭಾರತೀಯ ಕ್ರಿಕೆಟ್​ ಮಂಡಳಿ ಟೆಸ್ಟ್ ಕ್ರಿಕೆಟ್​ನ ಮಾಜಿ ​ಆರಂಭಿಕ ಬ್ಯಾಟ್ಸಮನ್​ಗೆ ಮಣೆ ಹಾಕಿದೆ.

ಈಗಾಗಲೇ ಮಹಿಳಾ ತಂಡಕ್ಕೆ ಮುಖ್ಯ ಕೋಚ್​ ಆಗಿ ರಮೇಶ್ ಪೊವಾರ್​ ಆಯ್ಕೆಯಾಗಿದ್ದು, ಇದರ ಬೆನ್ನಲ್ಲೇ ಬ್ಯಾಟಿಂಗ್​ ಕೋಚ್​ ಆಗಿ ಶಿವಸುಂದರ್​ ದಾಸ್​ ನೇಮಕವಾಗಿದ್ದಾರೆ.

ಇಂಗ್ಲೆಂಡ್​ ವಿರುದ್ಧದ ಏಕದಿನ, ಟೆಸ್ಟ್​ ಹಾಗೂ ಟಿ-20 ಕ್ರಿಕೆಟ್​​ ಸರಣಿಗಾಗಿ ಮಹಿಳಾ ತಂಡ ಈಗಾಗಲೇ ಆಯ್ಕೆಯಾಗಿರುವ ಕಾರಣ, ಬ್ಯಾಟಿಂಗ್​ ಕೋಚ್​, ಫಿಲ್ಡಿಂಗ್​ ಕೋಚ್​ಗಳಿಗೆ ಬಿಸಿಸಿಐ ಆಯ್ಕೆ ಮಾಡಿದೆ. ಡೆಲ್ಲಿ ತಂಡದ ವಿಕೆಟ್ ಕೀಪರ್ ಬ್ಯಾಟ್ಸಮನ್​ ಅಭಯ್​ ಶರ್ಮಾ ಫೀಲ್ಡಿಂಗ್​ ಕೋಚ್​ ಆಗಿ ಸೇವೆ ನೇಮಕಗೊಂಡಿದ್ದಾರೆ.

ಶಿವ ಸುಂದರ್ ದಾಸ್​​ ಟೀಂ ಇಂಡಿಯಾ ಪರ 2000 ರಿಂದ 2002ರ ಅವಧಿಯಲ್ಲಿ 23 ಟೆಸ್ಟ್​ ಪಂದ್ಯಗಳನ್ನಾಡಿದ್ದು, 2 ಶತಕ ಸೇರಿದಂತೆ 1,326ರನ್​ಗಳಿಕೆ ಮಾಡಿದ್ದಾರೆ. ಶಿವ ಸುಂದರ್ ದಾಸ್​ ಈಗಾಗಲೇ ಇಂಡಿಯಾ ಮಹಿಳಾ ಎ ತಂಡದೊಂದಿಗೆ ಕೆಲಸ ಮಾಡಿದ್ದು, ಇದೀಗ ಹಿರಿಯರ ತಂಡ ಸೇರಿಕೊಳ್ಳಲಿದ್ದಾರೆ. ಇಂಡಿಯಾ ಎ ತಂಡದ ಕ್ಯಾಪ್ಟನ್​ ಆಗಿ ಶಿವ ಸುಂದರ್ ದಾಸ್​​ ಬ್ಯಾಟಿಂಗ್​ನಲ್ಲಿ ಗಮನ ಸೆಳೆದಿದ್ದರು.

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ಮಹಿಳಾ ತಂಡವನ್ನ ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಕೆಲಸ ಮಾಡುವುದಾಗಿ ಹೇಳಿದ್ದು, ನನಗೆ ಇದೊಂದು ಉತ್ತಮ ಚಾಲೆಂಜ್​​ ಆಗಿದೆ ಎಂದಿದ್ದಾರೆ. ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಜೂನ್ ತಿಂಗಳಲ್ಲಿ ಟೆಸ್ಟ್​ ಹಾಗೂ ಏಕದಿನ ಕ್ರಿಕೆಟ್​ ಪಂದ್ಯಗಳನ್ನು ಆಡಲಿದೆ. ಇದಾದ ಬಳಿಕ ಜುಲೈನಲ್ಲಿ ಟಿ-20 ಕ್ರಿಕೆಟ್​ನಲ್ಲಿ ಉಭಯ ತಂಡಗಳು ಸೆಣಸಾಟ ನಡೆಸಲಿವೆ.

ABOUT THE AUTHOR

...view details