ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್, ಬ್ಯಾಟ್ಸ್ಮನ್ ಪಾರ್ಥೀವ್ ಪಟೇಲ್ ಅವರ ತಂದೆ ಅಜಯ್ಭಾಯ್ ಬಿಪಿನ್ಚಂದ್ರ ಪಟೇಲ್ ಭಾನುವಾರ ನಿಧನರಾಗಿದ್ದಾರೆ. ಹಾಲಿ-ಮಾಜಿ ಕ್ರಿಕೆಟಿಗರು ಸಂತಾಪ ಸೂಚಿಸಿದ್ದಾರೆ.
"ನನ್ನ ತಂದೆ ಶ್ರೀ ಅಜಯಭಾಯ್ ಬಿಪಿನ್ಚಂದ್ರ ಪಟೇಲ್ ಅವರು ಇಂದು ನಿಧನರಾಗಿದ್ದಾರೆ ಎನ್ನುವುದನ್ನು ನಿಮ್ಮೊಂದಿಗೆ ಅತೀವ ದುಃಖ ಮತ್ತು ನೋವಿನೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಅವರು ಸೆಪ್ಟೆಂಬರ್ 26 ರಂದು ನಮ್ಮನ್ನೆಲ್ಲ ಅಗಲಿದ್ದಾರೆ. ನಿಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಅವರ ಮೇಲಿರಲಿ ಎಂದು ವಿನಂತಿಸಿಕೊಳ್ಳುತ್ತೇನೆ. ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಪಾರ್ಥೀವ್ ಟ್ವೀಟ್ ಮಾಡಿದ್ದಾರೆ.