ಕೋಲ್ಕಾತ್ತಾ: ಭಾರತದ ಮಾಜಿ ಕ್ರಿಕೆಟಿಗ ಹಾಗೂ ಬೆಂಗಾಲ್ ಕ್ರಿಕೆಟ್ ತಂಡದ ಕೋಚ್ ಅರುಣ್ ಲಾಲ್ ತಮ್ಮ ದೀರ್ಘ ಕಾಲದ ಗೆಳತಿ ಬುಲ್ಬುಲ್ ಸಾಹಾ ಅವರೊಂದಿಗೆ ಇಂದು 2ನೇ ವಿವಾಹವಾಗಿದ್ದಾರೆ.
ಕೋಲ್ಕತ್ತಾದ ಹೋಟೆಲ್ ಒಂದರಲ್ಲಿ ಸಾಂಪ್ರದಾಯಿಕ ಸಾಮಾರಂಭದಲ್ಲಿ ವಿವಾಹವಾಗಿದ್ದಾರೆ. ಬುಲ್ಬುಲ್ ಸಾಹಾ ತಮ್ಮ ಪತಿ ಅರುಣ್ ಲಾಲ್ ಅವರೊಂದಗಿನ ಸರಣಿ ಫೋಟೋಗಳನ್ನು ತಮ್ಮ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ. ಬುಲ್ಬುಲ್ ಬಿಳಿ ಬಣ್ಣದ ಸೀರೆ, ದೊಡ್ಡದಾದ ನೆಕ್ಲೆಸ್ ಧರಿಸಿದ್ದರೆ, ಲಾಲ್ ಬಿಳಿಬಣ್ಣದ ಕುರ್ತ ಮತ್ತು ನೆಹರು ಜಾಕೆಟ್ ಧರಿಸಿದ್ದರು. ಈ ವಿವಾಹ ಕಾರ್ಯಕ್ರಮಕ್ಕೆ ಬೆಂಗಾಲ್ ತಂಡದ ಕ್ರಿಕೆಟಿಗರು ಮತ್ತು ಅಸೋಸಿಯೇಸನ್ ಆಧಿಕಾರಿಗಳು ಸೇರಿದಂತೆ ಹತ್ತಿರದ ಸಂಬಂಧಿಗಳು ಉಪಸ್ಥಿತರಿದ್ದರು.
ಅರುಣ್ ಲಾಲ್ ಎರಡನೇ ವಿವಾಹಕ್ಕೆ ಸಾಕ್ಷಿಯಾದ ಬಂಧು ಬಳಗ 66 ವರ್ಷದ ಅರುಣ್ ಲಾಲ್, ವೃತ್ತಿಯಲ್ಲಿ ಶಿಕ್ಷಕಿಯಾಗಿರುವ 38 ವರ್ಷದ ಬುಲ್ಬುಲ್ರನ್ನು ವಿವಾಹವಾಗಲು ತಮ್ಮ ಮೊದಲ ಪತ್ನಿ ರೀನಾರ ಒಪ್ಪಿಗೆ ಪಡೆದಿದ್ದಾರೆ. ರೀನಾ ಮತ್ತು ಲಾಲ್ ಪರಸ್ಪರ ಒಪ್ಪಿಗೆಯ ನಂತರ ವಿಚ್ಛೇದನ ಪಡೆದುಕೊಂಡಿದ್ದಾರೆ.
38 ವರ್ಷದ ಬುಲ್ಬುಲ್ ಸಾಹಾ ಜೊತೆ ಅರುಣ್ ಲಾಲ್ ವಿವಾಹ ಅರುಣ್ ಲಾಲ್ ಒಂದು ತಿಂಗಳ ಹಿಂದೆ 38 ವರ್ಷದ ಬುಲ್ಬುಲ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಲಾಲ್ ತನ್ನ ಮೊದಲ ಪತ್ನಿ ರೀನಾದಿಂದ ವಿಚ್ಛೇದನ ಪಡೆದಿದ್ದರೂ, ರೀನಾ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ, ಕೆಲವು ದಿನಗಳಿಂದ ಅವರ ಜೊತೆಯಲ್ಲಿಯೇ ವಾಸಿಸುತ್ತಿದ್ದಾರೆಂದು ತಿಳಿದು ಬಂದಿದೆ. ಅಲ್ಲದೇ ಬುಲ್ಬುಲ್ ಅವರೊಂದಿಗೆ ವಿವಾಹದ ಬಳಿಕವೂ ಅನಾರೋಗ್ಯ ಪೀಡಿತೆ ಹಿರಿಯ ಪತ್ನಿಯನ್ನು ನವದಂಪತಿ ನೋಡಿಕೊಳ್ಳಲಿದ್ದಾರೆ ಎಂಬ ಮಾಹಿತಿಯಿದೆ.
38 ವರ್ಷದ ಬುಲ್ಬುಲ್ ಸಾಹಾ ಜೊತೆ ಅರುಣ್ ಲಾಲ್ ವಿವಾಹ ಅರುಣ್ ಲಾಲ್ ಆಗಸ್ಟ್ 1, 1955 ರಂದು ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ಜನಿಸಿದರು. ಅವರು ಭಾರತ ತಂಡದ ಪರ 16 ಟೆಸ್ಟ್ ಮತ್ತು 13 ODI ಪಂದ್ಯಗಳನ್ನಾಡಿದ್ದು, ಕ್ರಮವಾಗಿ 729 ಮತ್ತು 122 ರನ್ ಗಳಿಸಿದರು. ಅರುಣ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಯಶಸ್ವಿಯಾಗದಿದ್ದರೂ, ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 156 ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ ಅವರು 30 ಶತಕಗಳ ಸಹಿತ 10,421 ರನ್ ಗಳಿಸಿದ್ದಾರೆ. ನಿವೃತ್ತಿ ನಂತರ ಕಾಮೆಂಟೇಟರ್ ಆಗಿದ್ದ ಅವರಿಗೆ 6 ವರ್ಷಗಳ ಹಿಂದೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಅದಕ್ಕೆ ಕಾಮೆಂಟರಿ ಬಿಟ್ಟಿದ್ದ ಅವರು, ಇದೀಗ ಚೇತರಿಸಿಕೊಂಡು ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅರುಣ್ ಲಾಲ್ ಬುಲ್ಬುಲ್ ಸಾಹಾ ವಿವಾಹ 38 ವರ್ಷದ ಬುಲ್ಬುಲ್ ಸಾಹಾ ಜೊತೆ ಅರುಣ್ ಲಾಲ್ ವಿವಾಹ 38 ವರ್ಷದ ಬುಲ್ಬುಲ್ ಸಾಹಾ ಜೊತೆ ಅರುಣ್ ಲಾಲ್ ವಿವಾಹ ಇದನ್ನೂ ಓದಿ:'ಆತನಿಗೂ ಒಂದು ಚಾನ್ಸ್ ನೀಡಿ'.. ಜೂನಿಯರ್ ತೆಂಡೂಲ್ಕರ್ ಪರ ಫ್ಯಾನ್ಸ್ ಬ್ಯಾಟ್!