ಕರ್ನಾಟಕ

karnataka

ETV Bharat / sports

ಧೋನಿ ಶಿಮ್ಲಾ ಪ್ರವಾಸ.. ಕುಟುಂಬದೊಂದಿಗೆ ಸಮಯ ಕಳೆಯುತ್ತಿರುವ ಮಾಹಿ - ಶಿಮ್ಲಾದಲ್ಲಿ ಧೋನಿ ಫ್ಯಾಮಿಲಿ

ಹಿಮಾಚಲ ಪ್ರದೇಶದಲ್ಲಿ ಲಾಕ್​ಡೌನ್​ ಓಪನ್​ ಆಗಿರುವ ಕಾರಣ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್​ ಧೋನಿ ಕುಟುಂಬದೊಂದಿಗೆ ಶಿಮ್ಲಾ ಪ್ರವಾಸ ಕೈಗೊಂಡಿದ್ದಾರೆ.

MS Dhoni in shimla
MS Dhoni in shimla

By

Published : Jun 19, 2021, 6:24 PM IST

ಶಿಮ್ಲಾ(ಹಿಮಾಚಲ ಪ್ರದೇಶ): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್​ ಧೋನಿ ಸದ್ಯ ಫ್ಯಾಮಿಲಿ ಜತೆ ಶಿಮ್ಲಾದಲ್ಲಿ ಕಾಲಕಳೆಯುತ್ತಿದ್ದು, ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದಾರೆ. ಕೊರೊನಾ ಸೋಂಕಿನ ಪ್ರಕರಣಗಳು ಕಡಿಮೆಯಾಗಿರುವ ಕಾರಣ ಹಿಮಾಚಲ ಪ್ರದೇಶದಲ್ಲಿ ಈಗಾಗಲೇ ಪ್ರವಾಸೋದ್ಯಮ ಪುನಾರಂಭಿಸಲಾಗಿದೆ. ಹೀಗಾಗಿ ಪತ್ನಿ ಸಾಕ್ಷಿ, ಮಗಳು ಝಿವಾ ಸೇರಿದಂತೆ ಸಂಬಂಧಿಕರೊಂದಿಗೆ ಶಿಮ್ಲಾ ತಲುಪಿದ್ದಾರೆ.

ಧೋನಿ ಜತೆಗೆ 12 ಜನರು ಶಿಮ್ಲಾದಲ್ಲಿದ್ದು, ಮುಂದಿನ ಕೆಲ ದಿನಗಳ ಕಾಲ ವಿವಿಧ ಸ್ಥಳಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ. ವಿಶೇಷವೆಂದರೆ ಕಳೆದ ಮೂರು ವರ್ಷಗಳಲ್ಲಿ ಧೋನಿ ಶಿಮ್ಲಾಗೆ ಎರಡನೇ ಸಲ ಭೇಟಿ ನೀಡಿದ್ದಾರೆ. ಈ ಹಿಂದೆ 2018ರಲ್ಲಿ ಜಾಹೀರಾತಿಗೋಸ್ಕರ ಅವರು ಶಿಮ್ಲಾಗೆ ತೆರಳಿದ್ದರು.

ಇದನ್ನೂ ಓದಿರಿ: ಎತ್ತುಗಳಿಲ್ಲದೇ 10 ವರ್ಷದಿಂದ ತಾವೇ ಉಳುಮೆ ಮಾಡುತ್ತಿದ್ದಾರೆ ಈ ಅಣ್ಣ-ತಂಗಿಯರು!!

ಕೋವಿಡ್​ ಎರಡನೇ ಅಲೆ ಕಾರಣ ಎಲ್ಲ ರಾಜ್ಯಗಳು ಸಂಪೂರ್ಣವಾಗಿ ಲಾಕ್​ ಆಗಿದ್ದರಿಂದ ಧೋನಿ ರಾಂಚಿಯಲ್ಲಿ ಕಾಲ ಕಳೆದಿದ್ದಾರೆ. ಇದೀಗ ಅನ್​ಲಾಕ್​ ಪ್ರಕ್ರಿಯೆ ಶುರುವಾಗುತ್ತಿದ್ದಂತೆ ಪ್ರವಾಸೋದ್ಯಮ ಆರಂಭಗೊಳ್ಳುತ್ತಿದ್ದು, ವಿವಿಧ ರಾಜ್ಯಗಳಿಗೆ ಜನರು ಭೇಟಿ ನೀಡುತ್ತಿದ್ದಾರೆ.

ABOUT THE AUTHOR

...view details