ಕರ್ನಾಟಕ

karnataka

ETV Bharat / sports

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್​ ಆಗಿ ಅಜಿತ್ ಅಗರ್ಕರ್​ ನೇಮಕ

ಇಎಸ್​ಪಿನ್​ ವರದಿಯ ಪ್ರಕಾರ ರಿಕಿ ಪಾಂಟಿಂಗ್ ಜೊತೆಗೆ ಸಹಾಯಕರಾಗಿ ಮತ್ತು ನಾಯಕ ರಿಷಭ್ ಪಂತ್ , ಬ್ಯಾಟಿಂಗ್ ಕೋಚ್​ ಪ್ರವೀಣ್ ಆಮ್ರೆ, ಬೌಲಿಂಗ್ ಕೋಚ್​ ಜೇಮ್ಸ್​ ಹೋಪ್ಸ್​ ಇರುವ ಲೀಡರ್​ಶಿಪ್​ ತಂಡದಲ್ಲೂ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

former India pacer Ajit Agarkar to join Delhi Capitals as assistant coach: report
ಅಜಿತ್ ಅಗರ್ಕರ್​ ಡೆಲ್ಲಿ ತಂಡದ ಸಹಾಯಕ ಕೋಚ್​

By

Published : Feb 22, 2022, 10:25 PM IST

ಮುಂಬೈ: ಭಾರತ ತಂಡದ ಮಾಜಿ ವೇಗಿ ಅಜಿತ್​ ಅಗರ್ಕರ್​ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಸಹಾಯಕ ಕೋಚ್​ ಆಗಿ ನೇಮಕಗೊಂಡಿದ್ದಾರೆ ಎಂದು ವರದಿಗಳಿಂದ ತಿಳಿದು ಬಂದಿದೆ.

ಇಎಸ್​ಪಿನ್​ ವರದಿಯ ಪ್ರಕಾರ ರಿಕಿ ಪಾಂಟಿಂಗ್ ಜೊತೆಗೆ ಸಹಾಯಕರಾಗಿ ಮತ್ತು ನಾಯಕ ರಿಷಭ್ ಪಂತ್ , ಬ್ಯಾಟಿಂಗ್ ಕೋಚ್​ ಪ್ರವೀಣ್ ಆಮ್ರೆ, ಬೌಲಿಂಗ್ ಕೋಚ್​ ಜೇಮ್ಸ್​ ಹೋಪ್ಸ್​ ಇರುವ ಲೀಡರ್​ಶಿಪ್​ ತಂಡದಲ್ಲೂ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಇದೇ ಸಂದರ್ಭದಲ್ಲಿ ಫೀಲ್ಡಿಂಗ್ ಕೋಚ್, ಸಹಾಯಕ ಕೋಚ್​ ಆಗಿರುವ ಮೊಹಮ್ಮದ್ ಕೈಫ್​ ಮತ್ತು ಅಜಯ್ ರಾತ್ರಾ ಅವರ ಒಪ್ಪಂದವನ್ನು ನವೀಕರಿಸಲಾಗಿಲ್ಲ ಎಂದು ತಿಳಿದು ಬಂದಿದೆ. ಕೈಫ್​ 2019ರಿಂದ 2021ರವರೆಗೆ ಮತ್ತು ರಾತ್ರಾ 2021ರ ಆವೃತ್ತಿಗಾಗಿ ಫ್ರಾಂಚೈಸಿಗಾಗಿ ಕಾರ್ಯ ನಿರ್ವಹಿಸಿದ್ದರು.

ಪ್ರಸ್ತುತ ಸ್ಟಾರ್ ಸ್ಪೋರ್ಟ್ಸ್​ ಬ್ರಾಡ್​ಕಾಸ್ಟಿಂಗ್​ ತಂಡದಲ್ಲಿರುವ ಅಗರ್ಕರ್​ ಶ್ರೀಲಂಕಾ- ಭಾರತ ಸರಣಿ ಮುಗಿಯುತ್ತಿದ್ದಂತೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ.

2007ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಅಗರ್ಕರ್​ 2013ರಲ್ಲಿ ನಿವೃತ್ತಿಯಾಗಿದ್ದರು. 44 ವರ್ಷದ ಅಗರ್ಕರ್​ಗೆ ಕೋಚ್​ ಆಗಿ ಇದೇ ಮೊದಲ ಅಸೈನ್​ಮೆಂಟ್​ ಆಗಿದೆ. ಮುಂಬೈ ವೇಗಿ ಭಾರತದ ಪರ 58 ಟೆಸ್ಟ್​ ವಿಕೆಟ್​ ಮತ್ತು 288 ಏಕದಿನ ವಿಕೆಟ್ ಪಡೆದಿದ್ದಾರೆ. 2013ರ ರಣಜಿ ಟ್ರೋಫಿಯಲ್ಲಿ ಮುಂಬೈ ತಂಡವನ್ನು ಮುನ್ನಡೆಸಿ ಚಾಂಪಿಯನ್ ಪಟ್ಟಕ್ಕೇರಿಸಿ ಸ್ಪರ್ಧಾತ್ಮಕ ಕ್ರಿಕೆಟ್​ಗೆ ತೆರೆ ಎಳೆದಿದ್ದರು.

ಇದನ್ನೂ ಓದಿ:U19 ವಿಶ್ವಕಪ್ ವೇಳೆ ಭಾರತದ ಯುವಕರು ಎದುರಿಸಿದ ಕಷ್ಟಗಳನ್ನು ಬಿಚ್ಚಿಟ್ಟ ಟೀಮ್ ಮ್ಯಾನೇಜರ್

ABOUT THE AUTHOR

...view details