ಕರ್ನಾಟಕ

karnataka

ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಫುಟ್​ಬಾಲರ್ ಫಾರ್ಚುನಾಟೋ ಫ್ರಾಂಕೊ ನಿಧನ

By

Published : May 10, 2021, 6:02 PM IST

ಫಾರ್ಚುನಾಟೊ ಫ್ರಾಂಕೊ ಇನ್ನಿಲ್ಲ ಎಂಬ ಸುದ್ದಿಯನ್ನು ಕೇಳುವುದಕ್ಕೆ ತುಂಬಾ ದುಃಖವಾಗುತ್ತಿದೆ. ಅವರು 1962 ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಚಿನ್ನದ ಪದಕ ಗೆಲ್ಲಲು ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತೀಯ ಫುಟ್‌ಬಾಲ್‌ನ ಸುವರ್ಣ ಯುಗದ ಸದಸ್ಯರಾಗಿದ್ದರು. ಭಾರತೀಯ ಫುಟ್‌ಬಾಲ್‌ಗೆ ಅವರು ನೀಡಿದ ಕೊಡುಗೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ..

ಫಾರ್ಚುನಾಟೋ ಫ್ರಾಂಕೊ ನಿಧನ
ಫಾರ್ಚುನಾಟೋ ಫ್ರಾಂಕೊ ನಿಧನ

ಗೋವಾ : ಭಾರತ ಫುಟ್​ಬಾಲ್ ತಂಡದ ಮಾಜಿ ಮಿಡ್​ ಫೀಲ್ಡರ್​ ಫಾರ್ಚುನಾಟೋ ಫ್ರಾಂಕೊ ಸೋಮವಾರ ನಿಧನರಾಗಿದ್ದಾರೆಂದು ಆಲ್​ ಇಂಡಿಯಾ ಫುಟ್​ಬಾಲ್​ ಫೆಡೆರೇಷನ್​ ಖಚಿತಪಡಿಸಿದೆ.

1959ರಲ್ಲಿ ಪಾಕಿಸ್ತಾನ ವಿರುದ್ಧ ಪದಾರ್ಪಣೆ ಮಾಡಿದ್ದ ಅವರು 26 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. 1962ರ ಏಷ್ಯನ್ ಗೇಮ್ಸ್​ನಲ್ಲಿ ಭಾರತ ತಂಡ ಚಿನ್ನದ ಪದಕ ಪಡೆಯುವಲ್ಲಿ ಫ್ರಾಂಕೋ ಅವಿಭಾಜ್ಯ ಅಂಗವಾಗಿದ್ದರು.

ಭಾರತ ತಂಡ ಜಕಾರ್ತದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ 2-1ರಲ್ಲಿ ಗೆಲುವು ಸಾಧಿಸಿತ್ತು. ಇದರ ಜೊತೆಗೆ ಫ್ರಾಂಕೊ 1960ರ ಒಲಿಂಪಿಕ್ಸ್​ನಲ್ಲೂ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ರನ್ನರ್ ಆಫ್ ಪ್ರಶಸ್ತಿ ಪಡೆದಿದ್ದ 1962 ಏಷ್ಯಾ ಕಪ್, 1964ರ ಮರ್ಡೇಕಾ ಕಪ್ ತಂಡದಲ್ಲೂ ಅವಕಾಶ ಪಡೆದಿದ್ದರು.

"ಫಾರ್ಚುನಾಟೊ ಫ್ರಾಂಕೊ ಇನ್ನಿಲ್ಲ ಎಂಬ ಸುದ್ದಿಯನ್ನು ಕೇಳುವುದಕ್ಕೆ ತುಂಬಾ ದುಃಖವಾಗುತ್ತಿದೆ. ಅವರು 1962 ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಚಿನ್ನದ ಪದಕ ಗೆಲ್ಲಲು ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಭಾರತೀಯ ಫುಟ್‌ಬಾಲ್‌ನ ಸುವರ್ಣ ಯುಗದ ಸದಸ್ಯರಾಗಿದ್ದರು. ಭಾರತೀಯ ಫುಟ್‌ಬಾಲ್‌ಗೆ ಅವರು ನೀಡಿದ ಕೊಡುಗೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ನಾನು ಅವರ ಕುಟುಂಬದ ದುಃಖವನ್ನು ಹಂಚಿಕೊಳ್ಳುತ್ತೇನೆ​" ಎಂದು ಎಐಎಫ್​ಎಫ್​ ಅಧ್ಯಕ್ಷ ಪ್ರಫುಲ್ ಪಟೇಲ್ ಸಂತಾಪ ಸೂಚಿಸಿದ್ದಾರೆ.

ಇದನ್ನು ಓದಿ:ಕೋವಿಡ್​ ಹೋರಾಟಕ್ಕೆ 30 ಕೋಟಿ ರೂ ದೇಣಿಗೆ ನೀಡಿದ ಎಸ್​ಆರ್​​ಹೆಚ್​ ಸಂಸ್ಥೆ

ABOUT THE AUTHOR

...view details