ಕರ್ನಾಟಕ

karnataka

ETV Bharat / sports

ಪಾಕಿಸ್ತಾನ ತಂಡದಲ್ಲಿ ಅಂತದೇನೂ ವಿಶೇಷತೆ ಇಲ್ಲ.. ಅವರಿಬ್ಬರನ್ನೂ ಕಟ್ಟಿ ಹಾಕಿದ್ರೆ ಸಾಕು: ಇರ್ಫಾನ್ ಪಠಾಣ್ - ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಅಜಮ್

ಪಾಕಿಸ್ತಾನ ತಂಡದಲ್ಲಿ ವಿಶೇಷತೆ ಏನೂ ಇಲ್ಲ. ಆದರೆ ಆ ಇಬ್ಬರು ಆಟಗಾರರನ್ನು ಕಟ್ಟಿ ಹಾಕಿದರೆ ಸಾಕು ಎಂದು ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್ ಇರ್ಫಾನ್​ ಪಠಾಣ್​ ತಂಡಕ್ಕೆ ಸಲಹೆ ನೀಡಿದ್ದಾರೆ.

How To Tackle Babar Azam and Mohammad Rizwan  Former India allrounder Irfan  India vs Pakistan match in T20 world cup  T20 world cup 2022  ಪಾಕಿಸ್ತಾನ ತಂಡದಲ್ಲಿ ಅಂತದೇನೂ ವಿಶೇಷತೆ ಇಲ್ಲ  ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್ ಇರ್ಫಾನ್​ ಪಠಾಣ್​ ಇರ್ಫಾನ್​ ಪಠಾಣ್​ ತಂಡಕ್ಕೆ ಸಲಹೆ  ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಅಜಮ್  ಟಿ20 ವಿಶ್ವಕಪ್‌ನಲ್ಲಿ ಭಾರತ ಪಾಕಿಸ್ತಾನ ಪಂದ್ಯ
ಅವರಿಬ್ಬರನ್ನೂ ಕಟ್ಟಿ ಹಾಕಿದ್ರೆ ಸಾಕು: ಇರ್ಫಾನ್ ಪಠಾಣ್

By

Published : Oct 15, 2022, 6:53 AM IST

ಪಾಕಿಸ್ತಾನ ತಂಡದಲ್ಲಿ ಅಂತದೇನೂ ವಿಶೇಷತೆ ಇಲ್ಲ. ಆರಂಭಿಕ ಆಟಗಾರರಾದ ರಿಜ್ವಾನ್​ ಮತ್ತು ಬಾಬರ್​ನನ್ನು ಕಟ್ಟಿ ಹಾಕಿದರೆ ಸಾಕು. ಉಳಿದ ಬ್ಯಾಟ್ಸ್​ಮನ್​ಗಳು ಹೇಳಿಕೊಳ್ಳುವಂತಹ ಪ್ರದರ್ಶನ ನೀಡುತ್ತಿಲ್ಲ ಎಂದು ಇರ್ಫಾನ್​ ಪಠಾಣ್​ ಹೇಳಿದ್ದಾರೆ.

ಪಾಕಿಸ್ತಾನದ ಆರಂಭಿಕರಾದ ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಅಜಮ್ ಟಿ20 ಮಾದರಿಯಲ್ಲಿ ಅಗ್ರ ಬ್ಯಾಟ್ಸ್‌ಮನ್‌ಗಳ ಜೋಡಿಯಲ್ಲಿ ಅವರು ಸಹ ಇದ್ದಾರೆ. ಇವರಿಬ್ಬರೂ ಪಾಕಿಸ್ತಾನದ ಇತ್ತೀಚಿನ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಆರಂಭಿಕ ಜೋಡಿಯಲ್ಲಿ ಅವರು ಎದುರಾಳಿಗಳ ಬೌಲರ್​ಗಳ ಬೇವರಿಳಿಸುತ್ತಿದ್ದಾರೆ. ಆದರೆ, ಇತ್ತೀಚೆಗೆ ಒಂದು ಪಂದ್ಯ ಹೊರತುಪಡಿಸಿ ಉಳಿದೆಲ್ಲ ಪಂದ್ಯಗಳಲ್ಲಿ ವಿಫಲರಾಗಿ ಸರಣಿ ಕೈಬಿಟ್ಟಿರುವುದು ಗೊತ್ತಿರುವ ಸಂಗತಿ.

ಟಿ20 ವಿಶ್ವಕಪ್‌ನಲ್ಲಿ ಭಾರತ - ಪಾಕಿಸ್ತಾನ ಪಂದ್ಯ ಅಕ್ಟೋಬರ್ 23 ರಂದು ನಡೆಯಲಿದೆ. ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಡಿಸಿದ ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್, ಪಾಕಿಸ್ತಾನ ಕ್ರಿಕೆಟ್​ ತಂಡವೂ ಈ ಇಬ್ಬರು ಆಟಗಾರರ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಈ ಕ್ರಮದಲ್ಲಿ ಪಠಾಣ್ ಭಾರತದ ಬೌಲರ್​ಗಳಿಗೆ ಹಲವು ಸೂಚನೆಗಳನ್ನು ನೀಡಿದರು.

ಪಾಕಿಸ್ತಾನದ ಆರಂಭಿಕ ಆಟಗಾರರಿಗೆ ಮುಕ್ತವಾಗಿ ಬ್ಯಾಟಿಂಗ್ ಮಾಡುವ ಅವಕಾಶ ನೀಡಬಾರದು. ಮುಖ್ಯವಾಗಿ ರಿಜ್ವಾನ್‌ಗೆ.. ಏಕೆಂದರೆ ಅವರು ಪವರ್‌ಪ್ಲೇನಲ್ಲಿ ಹೆಚ್ಚಿನ ಸ್ಟ್ರೈಕಿಂಗ್ ಹೊಂದಿದ್ದಾರೆ. ಬಾಬರ್ ಸಮಯ ತೆಗೆದುಕೊಳ್ಳುವ ಬ್ಯಾಟ್ಸ್‌ಮನ್. ಅದಕ್ಕಾಗಿಯೇ ಪರಿಸ್ಥಿತಿಗಳಿಗೆ ಅನುಗುಣವಾಗಿ ಬ್ಯಾಟರ್‌ಗಳನ್ನು ಕಟ್ಟಿಹಾಕುವ ರೀತಿಯಲ್ಲಿ ಬೌಲಿಂಗ್​ ಮಾಡಬೇಕು ಎಂದು ಹೇಳಿದರು.

ವಿಕೆಟ್‌ಗಳಿಗೆ ಗುರಿಯಿಟ್ಟು ಬೌಲ್ ಮಾಡಿ. ಲೆಂತ್​ ವಿಷಯದಲ್ಲಿ ಇಬ್ಬರಿಗೂ ಬೇರೆ ರೀತಿಯಲ್ಲಿ ಬೌಲ್​ ಮಾಡಬೇಕು. ರಿಜ್ವಾನ್‌ಗೆ ಸ್ಟಂಪ್‌ ಗುರಿಯಾಗಿಸಿ ಫುಲ್ಲರ್​ ಬೌಲ್​ ಎಸೆಯಬೇಕು. ಲೈನ್​ ಅಂಡ್​​​ ಲೆಂತ್​ನೊಂದಿಗೆ ಮೊಣಕಾಲಿನ ಮೇಲೆ ಬೌಲ್​ ಎಸೆಯಬೇಕು ಎಂದರು.

ಬಾಬರ್​ ಅನ್ನು ಎಲ್​ಬಿಡಬ್ಲ್ಯೂ ಮಾಡುವ ಮೂಲಕ ವಿಕೆಟ್​ ಸಾಧಿಸಬಹುದು. ಆದರೆ, ಬಾಬರ್ ತನ್ನ ಮುಂಭಾಗದ ಕಾಲಿನ ಬದಲಿಗೆ ಬ್ಯಾಕ್‌ಫೂಟ್‌ಗೆ ಬಂದರೆ ಮಾತ್ರ ವಿಕೆಟ್‌ಗಳ ಮುಂದೆ ಸಿಕ್ಕಿಬೀಳುತ್ತಾರೆ. ಸ್ವಿಂಗ್ ಬೌಲಿಂಗ್ ಮೂಲಕ ಬಾಬರ್​ನ್ನು ಅರ್ಷದೀಪ್ ಮತ್ತು ಭುವನೇಶ್ವರ್ ಕುಮಾರ್ ಕಟ್ಟಿಹಾಕಬೇಕು.

ಅಲ್ಲದೇ ಪಾಕಿಸ್ತಾನ ಬ್ಯಾಟರ್‌ಗಳು ಸ್ಪಿನ್‌ ಬೌಲಿಂಗ್​ ಎದುರಿಸಲು ಸ್ವಲ್ಪ ಕಷ್ಟಪಡುತ್ತಾರೆ ಎಂಬುದನ್ನು ನೆನಪಿನಲ್ಲಿಟ್ಟಕೊಳ್ಳಬೇಕು. ಅದಕ್ಕಾಗಿಯೇ ಪವರ್‌ಪ್ಲೇ ಓವರ್‌ಗಳಲ್ಲಿ ಸ್ಪಿನ್ನರ್‌ಗಳಿಗೆ ಹೆಚ್ಚುವರಿ ಓವರ್‌ಗಳನ್ನು ನೀಡಬೇಕೋ ಅಥವಾ ಬೇಡವೋ ಎಂಬುದು ತಿಳಿದುಕೊಳ್ಳಬೇಕು. ಈ ನಿಟ್ಟಿನಲ್ಲಿ ಟೀಂ ಇಂಡಿಯಾ ಮ್ಯಾನೇಜ್ಮೆಂಟ್​ ಏನು ಮಾಡಲಿದೆ ಎಂಬ ಕುತೂಹಲ ನನ್ನಲ್ಲಿದೆ ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.

ಓದಿ:41ನೇ ವಸಂತಕ್ಕೆ ಕಾಲಿಟ್ಟ ಗಂಭೀರ್.. ಹಲವು ಬಾರಿ ಭಾರತ ತಂಡವನ್ನು ಜಯದ ದಡಕ್ಕೆ ಸೇರಿದ ಶ್ರೇಯಸ್ಸು ಇವರದ್ದು

ABOUT THE AUTHOR

...view details