ಲಂಡನ್:ಇಂಗ್ಲೆಂಡ್‌ನ ತಂಡದ ಮತ್ತು ಸಸೆಕ್ಸ್ ಆಡಿದ್ದ ಮಾಜಿ ವಿಕೆಟ್ ಕೀಪರ್ ಮತ್ತು ಬ್ಯಾಟರ್ ಜಿಮ್ ಪಾರ್ಕ್ಸ್(90) ಇಂದು ನಿಧನರಾದರು. ಪಾರ್ಕ್ಸ್ ಅವರು ಕಳೆದ ವಾರ ತಮ್ಮ ಮನೆಯಲ್ಲಿ ಬಿದ್ದು ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ನಿಧನರಾಗಿದ್ದಾರೆ. 90 ನೇ ವಯಸ್ಸಿನಲ್ಲಿ ಜಿಮ್ ಪಾರ್ಕ್ಸ್ ಅವರ ನಿಧನವನ್ನು ಘೋಷಿಸಲು ತೀವ್ರ ದುಃಖವಾಗುತ್ತಿದೆ ಎಂದು ಸಸೆಕ್ಸ್ ಕ್ರಿಕೆಟ್ ಟ್ವೀಟ್ ಮಾಡಿದೆ.
ಜಿಮ್ ಅವರು 1930 ರಲ್ಲಿ ಹೇವರ್ಡ್ಸ್ ಹೀತ್‌ನಲ್ಲಿ ಜನಿಸಿದರು. ಹೋವ್ ಕೌಂಟಿ ಗ್ರಾಮರ್ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ಅವರು 1949 ರಲ್ಲಿ ಸಸೆಕ್ಸ್‌ಗೆ ಪಾದಾರ್ಪಣೆ ಮಾಡಿದರು. ಸಸೆಕ್ಸ್ನಲ್ಲಿ ಅವರು ಒಟ್ಟು 739 ಪ್ರಥಮ ದರ್ಜೆ ಪಂದ್ಯಗಳನ್ನು ಮತ್ತು 132 ಲಿಸ್ಟ್ ಎ ಆಟಗಳನ್ನು ಆಡಿದ್ದಾರೆ.