ಕರ್ನಾಟಕ

karnataka

ETV Bharat / sports

ದ.ಆಫ್ರಿಕಾದಲ್ಲಿ ಹುಟ್ಟಿ ಇಂಗ್ಲೆಂಡ್​ ಪರ ಆಡಿದ್ದ ಈ ವೇಗಿ ಇನ್ಮುಂದೆ ಇಟಲಿ ಪರ ಆಡ್ತಾರಂತೆ!!

ಇಟಲಿ ಅಕ್ಟೋಬರ್​ 15-21ರವರೆಗೆ ಸ್ಪೇನ್​ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್​ ಯೂರೋಪ್​ ಕ್ವಾಲಿಫೈಯರ್​ ಟೂರ್ನಿಯಲ್ಲಿ ಜೆರ್ಸಿ, ಜರ್ಮನಿ ಮತ್ತು ಡೆನ್ಮಾರ್ಕ್​ ತಂಡಗಳೊಂದಿಗೆ ಪೈಪೋಟಿ ನಡೆಸಲಿದೆ. ಇಲ್ಲಿ ಗೆಲ್ಲುವ ಟಾಪ್ 2 ತಂಡ ಗ್ಲೋಬಲ್​ ಕ್ವಾಲಿಫೈಯರ್​ಗೆ ಅರ್ಹತೆ ಪಡೆಯಲಿವೆ..

Jade Dernbach
ಜೇಡ್​ ಡರ್ನ್​ಬೇಚ್​

By

Published : Sep 21, 2021, 10:19 PM IST

ನವದೆಹಲಿ :ಇಂಗ್ಲೆಂಡ್​​ನ ಮಾಜಿ ವೇಗದ ಬೌಲರ್​ ಜೇಡ್​ ಡರ್ನ್​ಬೇಚ್ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಆಡುವ ಮನಸ್ಸು ಮಾಡಿದ್ದಾರೆ. ಈಗಷ್ಟೆ ಕ್ರಿಕೆಟ್​ನಲ್ಲಿ ಕಣ್ಣು ಬಿಡುತ್ತಿರುವ ಇಟಲಿ ರಾಷ್ಟ್ರೀಯ ತಂಡದ ಪರ ಆಡುವುದಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.

ಡರ್ನ್​ಬೇಚ್ ಜೋಹನ್ಸ್​ ಬರ್ಗ್​ನಲ್ಲಿ ಜನಿಸಿದ್ದರು. ತಮ್ಮ 14ನೇ ವಯಸ್ಸಿನಲ್ಲಿ ಇಂಗ್ಲೆಂಡ್​​ಗೆ ತೆರಳಿ ಅಲ್ಲಿನ ನಾಗರಿಕತ್ವ ಪಡೆದು ಕ್ರಿಕೆಟ್​ ಜೀವನ ಆರಂಭಿಸಿದ್ದ ಅವರು, 2011ರಿಂದ 2014ರವರೆಗೆ ಇಂಗ್ಲೆಂಡ್​ 58 ಸೀಮಿತ ಓವರ್​ಗಳ ಪಂದ್ಯಗಳನ್ನಾಡಿದ್ದರು. ನಿವೃತ್ತಿ ನಂತರ ಸರ್ರೆ ಕ್ಲಬ್​ ಪರ ಆಡಿದ್ದರು.

ಇದೀಗ ಅವರ ತಾಯಿಯ ತವರೂರಾದ ಇಟಲಿಯನ್ನು ಪ್ರತಿನಿಧಿಸುವುದಕ್ಕೆ ಅರ್ಹತೆ ಪಡೆದಿರುವ ಅವರು, ಮುಂದಿನ ತಿಂಗಳಿನಿಂದ ಆರಂಭವಾಗಲಿರುವ 2022ರ ಟಿ20 ವಿಶ್ವಕಪ್​ ಅರ್ಹತಾ ಟೂರ್ನಿಯಲ್ಲಿ ಇಟಲಿ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ಇಟಲಿ ತಂಡವನ್ನು ಮಾಜಿ ಇಂಗ್ಲೆಂಡ್​ ಕೌಂಟಿ ಆಟಗಾರ ಗೆರಾತ್ ಬರ್ಗ್​ ಮುನ್ನಡೆಸುತ್ತಿದ್ದಾರೆ. ಇವರು ತಂಡದ ಮುಖ್ಯ ಕೋಚ್​ ಕೂಡ ಆಗಿದ್ದು, ಇವರಿಗೆ ಮಾಜಿ ಇಂಗ್ಲೆಂಡ್ ಆಲ್​ರೌಂಡರ್ ಒವಾಯಿಸ್ ಶಾ ಅಸಿಸ್ಟೆಂಟ್​ ಕೋಚ್​ ಆಗಿದ್ದಾರೆ​. ಡರ್ನ್​ಬೇಚ್​ ಇಟಲಿ ಸೇರುವುದರಲ್ಲಿ ಬರ್ಗ್​ ಪಾತ್ರ ಮಹತ್ವವಾಗಿದೆ.

ಇಟಲಿ ಅಕ್ಟೋಬರ್​ 15-21ರವರೆಗೆ ಸ್ಪೇನ್​ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್​ ಯೂರೋಪ್​ ಕ್ವಾಲಿಫೈಯರ್​ ಟೂರ್ನಿಯಲ್ಲಿ ಜೆರ್ಸಿ, ಜರ್ಮನಿ ಮತ್ತು ಡೆನ್ಮಾರ್ಕ್​ ತಂಡಗಳೊಂದಿಗೆ ಪೈಪೋಟಿ ನಡೆಸಲಿದೆ. ಇಲ್ಲಿ ಗೆಲ್ಲುವ ಟಾಪ್ 2 ತಂಡ ಗ್ಲೋಬಲ್​ ಕ್ವಾಲಿಫೈಯರ್​ಗೆ ಅರ್ಹತೆ ಪಡೆಯಲಿವೆ.

ಇದನ್ನು ಓದಿ:ಟಿ20 ವಿಶ್ವಕಪ್​ನಲ್ಲಿ ಕೆಕೆಆರ್ ತಂಡದ ಈ ಬೌಲರ್​ ಭಾರತದ ಪ್ರಮುಖ ಅಸ್ತ್ರ : ಇರ್ಫಾನ್‌ ಪಠಾಣ್​

ABOUT THE AUTHOR

...view details