ಲಂಡನ್: ಇಂಗ್ಲೆಂಡ್ ತಂಡದ ಮಾಜಿ ನಾಯಕ ಟೆಡ್ ಡೆಕ್ಸ್ಟರ್ ತಮ್ಮ 86ನೇ ವಯಸ್ಸಿನಲ್ಲಿ ವಯೋ ಸಹಜ ಅನಾರೋಗ್ಯದ ಕಾರಣ ಗುರುವಾರ ನಿಧನರಾಗಿದ್ದಾರೆಂದು ಮರಿಲೆಬೋನ್ ಕ್ರಿಕೆಟ್ ಕ್ಲಬ್(ಎಂಸಿಸಿ) ಖಚಿತಪಡಿಸಿದೆ.
ಲಾರ್ಡ್ ಟೆಡ್ ಎಂದು ಅಡ್ಡ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದ ಡಿಕ್ಸ್ಟೆರ್ ಸ್ಫೋಟಕ ಬ್ಯಾಟ್ಸ್ಮನ್ ಮತ್ತು ಅರೆಕಾಲಿಕ ವೇಗಿಯಾಗಿದ್ದರು. ಅವರು ಇಂಗ್ಲೆಂಡ್ ಪರ 62 ಟೆಸ್ಟ್ ಪಂದ್ಯಗಳನ್ನಾಡಿದ್ದು. 9 ಶತಕ ಮತ್ತು 27 ಅರ್ಧಶತಕಗಳ ಸಹಿತ 4,502 ರನ್ಗಳಿಸಿದ್ದರು. 66 ವಿಕೆಟ್ ಕೂಡ ಪಡೆದಿದ್ದರು. ಟೆಡ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 1956 ರಿಂದ 1968ರ ವರೆಗೆ ಆಡಿದ್ದು, 21,000ಕ್ಕೂ ಹೆಚ್ಚು ರನ್, 419 ವಿಕೆಟ್ ದಾಖಲೆ ಹೊಂದಿದ್ದಾರೆ.
ಇಂಗ್ಲೆಂಡ್ ಮತ್ತು ಸಸೆಕ್ಸ್ ತಂಡಗಳಿಗೆ ನಾಯಕರಾಗಿದ್ದ ಅವರು ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರು ಕಾಂಪ್ಟನ್ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ನಿಧನರಾಗಿದ್ದಾರೆ ಎಂದು ಎಂಸಿಸಿ ಹೇಳಿಕೆ ಬಿಡುಗಡೆ ಮಾಡಿದೆ.