ಕರ್ನಾಟಕ

karnataka

ETV Bharat / sports

ಗೋವಾ ಸರ್ಕಾರದಿಂದ ಮಾಜಿ ಕ್ರಿಕೆಟಿಗ ಯುವರಾಜ್​ ಸಿಂಗ್​ಗೆ ನೋಟಿಸ್​ ಜಾರಿ - ಟೂರಿಸ್ಟ್ ಟ್ರೇಡ್ ಆಕ್ಟ್ 1982

ಭಾರತ ಕ್ರಿಕೆಟ್‌ ತಂಡದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ವಿವಾದದಲ್ಲಿ ಸಿಲುಕಿದ್ದಾರೆ. ಗೋವಾ ಪ್ರವಾಸೋದ್ಯಮ ಇಲಾಖೆ ಅವರಿಗೆ ನೋಟಿಸ್ ಜಾರಿ ಮಾಡಿದೆ.

former cricketer Yuvraj Singh  Yuvraj Singh Gets Notice From Goa Government  former cricketer Yuvraj Singh Gets Notice  ಸರ್ಕಾರದಿಂದ ಯುವರಾಜ್​ ಸಿಂಗ್​ಗೆ ನೋಟಿಸ್​ ಜಾರಿ  ಯುವರಾಜ್​ ಸಿಂಗ್​ಗೆ ನೋಟಿಸ್​ ಜಾರಿ  ಟೀಂ ಇಂಡಿಯಾದ ಮಾಜಿ ಸ್ಟಾರ್ ಆಲ್ ರೌಂಡರ್ ಯುವರಾಜ್ ಸಿಂಗ್  ಗೋವಾ ಪ್ರವಾಸೋದ್ಯಮ ಇಲಾಖೆ ನೋಟಿಸ್ ಜಾರಿ  ಗೋವಾ ಸರ್ಕಾರ ನೋಟಿಸ್ ಜಾರಿ  ಟೂರಿಸ್ಟ್ ಟ್ರೇಡ್ ಆಕ್ಟ್ 1982
ಗೋವಾ ಸರ್ಕಾರದಿಂದ ಯುವರಾಜ್​ ಸಿಂಗ್​ಗೆ ನೋಟಿಸ್​ ಜಾರಿ

By

Published : Nov 23, 2022, 9:32 AM IST

ಪಣಜಿ(ಗೋವಾ): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ಇಲ್ಲಿನ ಮೊರ್ಜಿಮ್‌ನಲ್ಲಿ ತಮ್ಮ ವಿಲ್ಲಾವನ್ನು(ನಿವಾಸ) ನೋಂದಾಯಿಸದೇ 'ಹೋಮ್‌ಸ್ಟೇ' ಆಗಿ ನಿರ್ವಹಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಅವರಿಗೆ ಗೋವಾ ಸರ್ಕಾರ ನೋಟಿಸ್ ಜಾರಿ ಮಾಡಿದ್ದು, ಡಿಸೆಂಬರ್ 8 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ವಾಣಿಜ್ಯ ಪ್ರವಾಸೋದ್ಯಮ ಕಾಯ್ದೆ 1982ರ ಪ್ರಕಾರ, ಗೋವಾದಲ್ಲಿ ಹೋಮ್ ಸ್ಟೇ ನೀಡಲು ನೋಂದಣಿ ಕಡ್ಡಾಯವಾಗಿದೆ.

ನವೆಂಬರ್ 18 ರಂದು ಉತ್ತರ ಗೋವಾದ ಮೋರ್ಜಿಮ್ ಪ್ರದೇಶದಲ್ಲಿರುವ 'ಕಾಸಾ ಸಿಂಗ್' ಹೆಸರಿನ ಯುವರಾಜ್ ಸಿಂಗ್​ ಅವರ ವಿಲ್ಲಾದ ವಿಳಾಸಕ್ಕೆ ಪ್ರವಾಸೋದ್ಯಮ ಉಪ ನಿರ್ದೇಶಕ ರಾಜೇಶ್ ಕಾಳೆ ಅವರು ನೋಟಿಸ್ ನೀಡಿದ್ದಾರೆ. ಡಿ.8ರಂದು ಬೆಳಗ್ಗೆ 11 ಗಂಟೆಗೆ ಖುದ್ದು ಹಾಜರಾಗಿ ವಿವರಣೆ ನೀಡಬೇಕು ಎಂದು ನೋಟಿಸ್​ನಲ್ಲಿ ಉಲ್ಲೇಖಿಸಿದ್ದಾರೆ.

ಗೋವಾ ಪ್ರವಾಸೋದ್ಯಮ ಇಲಾಖೆಯ ಅನುಸಾರ ಹೋಟೆಲ್/ಅತಿಥಿ ಗೃಹವನ್ನು ನಿರ್ವಹಿಸಲು ಬಯಸುವ ಪ್ರತಿಯೊಬ್ಬ ವ್ಯಕ್ತಿಯು ನೋಂದಣಿ ಮಾಡಿಸಲೇಬೇಕಿದೆ.

ಇದನ್ನೂ ಓದಿ:ಮೂರನೇ ಟಿ20 ಪಂದ್ಯ ಟೈ: ಟೀಂ ಇಂಡಿಯಾ ಪಾಲಾದ ಸರಣಿ

ABOUT THE AUTHOR

...view details