ವಾರಾಣಸಿ ( ಉತ್ತರ ಪ್ರದೇಶ ) :ಮಂಗಳವಾರದಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವೆಂಕಟೇಶ್ ಪ್ರಸಾದ್ ( Venkatesh Prasad ) ಅವರು ವಾರಾಣಸಿಗೆ ಭೇಟಿ ಕೊಟ್ಟಿದ್ದರು. ದಶಾಶ್ವಮೇಧ ಘಾಟ್‌ನಲ್ಲಿ ವಿಶ್ವ ವಿಖ್ಯಾತ ಗಂಗಾ ಮಾತೆಯ ದೈನಂದಿನ ಆರತಿಯಲ್ಲಿ ತಮ್ಮ ಪತ್ನಿಯೊಂದಿಗೆ ಭಾಗಿ ಆದರು. ವೈದಿಕ ವಿಧಿ ವಿಧಾನಗಳ ಪ್ರಕಾರ, ಗಂಗಾಮಾತೆಯನ್ನು ಪೂಜಿಸಿದ ಅವರು ಇಲ್ಲಿ ಗಂಗಾ ಆರತಿಯನ್ನು ಕಂಡು ಬಹಳ ಹರ್ಷ ವ್ಯಕ್ತಪಡಿಸಿದರು.
ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವೆಂಕಟೇಶ್ ಪ್ರಸಾದ್ ತಮ್ಮ ವೇಗದ ಮತ್ತು ತೀಕ್ಷ್ಣವಾದ ಬೌಲಿಂಗ್‌ಗೆ ಹೆಸರುವಾಸಿ ಆಗಿದ್ದಾರೆ. ಮಂಗಳವಾರ ವಾರಾಣಸಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಾಜಿ ಆಟಗಾರನನ್ನು ನೋಡಲು ಅಭಿಮಾನಿಗಳು ಸಹ ಬಂದು ಸೇರಿದ್ದರು. ಆರತಿ ಸಮಯದಲ್ಲಿ, ಅವರು ತಮ್ಮ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು ಮತ್ತು ಕೆಲವೊಮ್ಮೆ ವಿಡಿಯೋಗಳನ್ನು ಮಾಡುತ್ತಿದ್ದರು.
ವಾರಾಣಸಿಯಲ್ಲಿ, ವೆಂಕಟೇಶ್ ಪ್ರಸಾದ್ ಅವರನ್ನು ಗಂಗಾ ಸೇವಾ ನಿಧಿ ಅಧ್ಯಕ್ಷ ಸುಶಾಂತ್ ಮಿಶ್ರಾ, ಖಜಾಂಚಿ ಆಶಿಶ್ ತಿವಾರಿ, ಕಾರ್ಯದರ್ಶಿ ಹನುಮಾನ್ ಯಾದವ್ ಸ್ವಾಗತಿಸಿದರು. ಪೂಜೆ ಬಳಿಕ ಮಾಜಿ ಆಟಗಾರನಿಗೆ ಪ್ರಸಾದ ವಿತರಿಸಿದರು. ವಾರಾಣಸಿಯಲ್ಲಿ ನಡೆದ ಗಂಗಾ ಆರತಿಯಲ್ಲಿ ಭಾರತ ತಂಡದ ಮಾಜಿ ಆಟಗಾರರು ಇದ್ದಾರೆ ಎಂಬುದನ್ನು ತಿಳಿದ ಭಕ್ತರು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದರು. ಫೋಟೋ ಕ್ಲಿಕ್ಕಿಸಿಕೊಳ್ಳಲು ಜನರಲ್ಲಿ ಪೈಪೋಟಿ ಏರ್ಪಟ್ಟಿತ್ತು.
ವೆಂಕಟೇಶ್ ಪ್ರಸಾದ್ ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ. ಪ್ರಸಾದ್ ತಮ್ಮ ಕಾಲದಲ್ಲಿ ಭಾರತ ತಂಡಕ್ಕಾಗಿ ಟೆಸ್ಟ್ ಮತ್ತು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡುತ್ತಿದ್ದರು. ಅವರು ವೇಗದ ಮತ್ತು ತೀಕ್ಷ್ಣವಾದ ಬೌಲಿಂಗ್ನಿಂದ ಭಾರತೀಯ ಅಭಿಮಾನಿಗಳ ಅಭಿಮಾನ ಸಂಪಾದಿಸಿದ್ದಾರೆ. ಅವರು 33 ಟೆಸ್ಟ್ ಪಂದ್ಯಗಳಲ್ಲಿ 96 ವಿಕೆಟ್ ಪಡೆದಿದ್ದಾರೆ. 161 ODIಗಳಲ್ಲಿ 196 ವಿಕೆಟ್ಗಳನ್ನು ಪಡೆದರು. 1996ರಲ್ಲಿ ಇಂಗ್ಲೆಂಡ್ ವಿರುದ್ಧ, ವೆಂಕಟೇಶ್ ಬರ್ಮಿಂಗ್ಹ್ಯಾಮ್ನಲ್ಲಿ ಮೊದಲ ಟೆಸ್ಟ್ ಪಂದ್ಯ ಆಡಿದರು.