ಬೆಂಗಳೂರು: ಹಿರಿಯ ಸ್ಪಿನ್ನರ್ ರವಿಚಂದ್ರನ್ ಅವರನ್ನು ಸಾರ್ವಕಾಲಿಕ ಶ್ರೇಷ್ಠ ಬೌಲರ್ ಎಂದು ಕರೆಯುವುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಕಪಿಲ್ ದೇವ್ ಅವರ 434 ವಿಕೆಟ್ಗಳ ದಾಖಲೆಯನ್ನು ಅಶ್ವಿನ್ ಮುರದಿದ್ದರು. ಈ ವೇಳೆ ಅಶ್ವಿನ್ರನ್ನು ಪ್ರಶಂಸಿಸಿದ್ದ ರೋಹಿತ್ ಅವರನ್ನು ಸಾರ್ವಕಾಲಿಕ ಶ್ರೇಷ್ಠ ಬೌಲರ್ ಎಂದು ಕರೆದಿದ್ದರು. ಆದರೆ ಪಾಕಿಸ್ತಾನದ ಮಾಜಿ ಕ್ರಿಕೆಟರ್ ರಶೀದ್ ಲತೀಫ್ ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ರೋಹಿತ್ ಬಾಯಿ ತಪ್ಪಿ ಆ ರೀತಿ ಹೇಳಿರಬಹುದು ಎಂದು ಲತೀಫ್ ಹೇಳಿದ್ದರು.
ಆದರೆ 34 ವರ್ಷದ ಭಾರತೀಯ ನಾಯಕ ಮತ್ತೊಮ್ಮೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಹಿರಿಯ ಭಾರತೀಯ ಸ್ಪಿನ್ನರ್ ನನ್ನ ಕಣ್ಣಿಗೆ ಸಾರ್ವಕಾಲಿಕ ಶ್ರೇಷ್ಠ ಬೌಲರ್ ಆಗಿದ್ದಾರೆ ಎಂದು ಪಂದ್ಯದ ನಂತರ ತಿಳಿಸಿದ್ದಾರೆ.