ಕರ್ನಾಟಕ

karnataka

ETV Bharat / sports

Powerful ಭಾರತದ ವಿರುದ್ಧದ ಗೆಲುವು ​ವರ್ಷಪೂರ್ತಿ ನೆನಪಿನಲ್ಲಿಟ್ಟಿಕೊಳ್ಳುವಂತದ್ದು: ಮೆಕಲಮ್ - ಬ್ರೆಂಡನ್ ಮೆಕಲಮ್

ಈ ಹಿಂದಿನ ಎರಡು ಐಸಿಸಿ ವಿಶ್ವಕಪ್​ನಲ್ಲಿ ಫೈನಲ್ ಪ್ರವೇಶಿಸಿದರೂ ಚಾಂಪಿಯನ್​ ಆಗುವ ಅವಕಾಶ ವಂಚಿತರಾಗಿದ್ದರಿಂದ ಈ ಪಂದ್ಯದ ವೇಳೆ ತಾವೂ ಭಯಪಟ್ಟಿದ್ದಾಗಿ SEN ರೇಡಿಯೋ ಜೊತೆಗಿನ ಸಂಭಾಷಣೆಯಲ್ಲಿ ಮೆಕಲಮ್ ಹೇಳಿಕೊಂಡಿದ್ದಾರೆ.

ಬ್ರೆಂಡನ್ ಮೆಕಲಮ್
ಬ್ರೆಂಡನ್ ಮೆಕಲಮ್

By

Published : Jun 24, 2021, 6:14 PM IST

ಸೌತಾಂಪ್ಟನ್: ಅತ್ಯಂತ ಪ್ರಬಲವಾದ ಭಾರತ ತಂಡ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ನ್ಯೂಜಿಲ್ಯಾಂಡ್​ ತಂಡ ಉನ್ನತ ಮಟ್ಟದ ವೃತ್ತಿಪರತೆ ತೋರಿಸಿದೆ ಎಂದು ನ್ಯೂಜಿಲ್ಯಾಂಡ್ ತಂಡದ ಮಾಜಿ ನಾಯಕ ಬ್ರೆಂಡನ್ ಮೆಕಲಮ್ ತಿಳಿಸಿದ್ದಾರೆ. ಪ್ರಸ್ತುತ ಸನ್ನಿವೇಶದಲ್ಲಿ ಭಾರತ ತಂಡವನ್ನು ಮಣಿಸಿರುವುದು ವಿಶೇಷ ಸಾಧನೆ ಎಂದು 39 ವರ್ಷದ ಆಟಗಾರ ಹೇಳಿದ್ದಾರೆ.

ಈ ಹಿಂದಿನ ಎರಡು ಐಸಿಸಿ ವಿಶ್ವಕಪ್​ನಲ್ಲಿ ಫೈನಲ್ ಪ್ರವೇಶಿಸಿದರೂ ಚಾಂಪಿಯನ್​ ಆಗುವ ಅವಕಾಶ ವಂಚಿತರಾಗಿದ್ದರಿಂದ ಈ ಪಂದ್ಯದ ವೇಳೆ ತಾವೂ ಭಯಪಟ್ಟಿದ್ದಾಗಿ SEN ರೇಡಿಯೋ ಜೊತೆಗಿನ ಸಂಭಾಷಣೆಯಲ್ಲಿ ಹೇಳಿಕೊಂಡಿದ್ದಾರೆ.

ಇದು ಹೇಗೆ ನಡೆದಿದೆ ಎಂಬುದರ ಬಗ್ಗೆ ಇನ್ನೂ ನನಗೆ ಖಾತ್ರಿಯಿಲ್ಲ. ನನಗೆ ಹಿಂದಿನ ಎರಡು ವಿಶ್ವಕಪ್​ಗಳ ಫೈನಲ್​ ಅಂತಾಗಬಹುದು ಎಂಬ ಭಾವನೆ ನನ್ನದಾಗಿತ್ತು. ಹಿಂದೆ ತುಂಬಾ ಹತ್ತಿರ ಬಂದಿದ್ದೆವು, ಆದರೆ ಗೆಲುವಿನ ಗಡಿ ದಾಟಲು ಆಗಿರಲಿಲ್ಲ. ಆದರೆ, ಇಂತಹ ದೊಡ್ಡ ವೇದಿಕೆಯಲ್ಲಿ ಹವಾಮಾನ ಮತ್ತು ಅಸಾಧಾರಣ ಭಾರತ ತಂಡದ ವಿರುದ್ಧ ಫಲಿತಾಂಶವನ್ನು ಪಡೆಯಲು ಸಮರ್ಥವಾಗಿರುವುದು ಹೆಚ್ಚು ಮಹತ್ವಪೂರ್ಣವಾಗಿದೆ ಎಂದು ನ್ಯೂಜಿಲ್ಯಾಂಡ್ ತಂಡದ ಸಾಧನೆಯನ್ನು ಮೆಕಲಮ್ ಕೊಂಡಾಡಿದ್ದಾರೆ.

ಮುಂಬರುವ ದಿನಗಳು, ವಾರಗಳು ಅಥವಾ ಒಂದು ವರ್ಷ ಹಿಂತಿರುಗಿ ನೋಡಿದಾಗ ಕೇನ್​ ವಿಲಿಯಮ್ಸನ್​ ಹುಡುಗರ ಈ ಸಾಧನೆ ತುಂಬಾ ಹೆಮ್ಮೆ ಅನ್ನಿಸುತ್ತದೆ. ತುಂಬಾ ಸೀಮಿತ ಸಂಪನ್ಮೂಲವನ್ನು ಹೊಂದಿರುವ ದೇಶ ಕ್ರಿಕೆಟ್​ನ ಪವರ್ ಹೌಸ್ ಆಗಿರುವ ಭಾರತದ ವಿರುದ್ಧ ದೊಡ್ಡ ವೇದಿಕೆಯಲ್ಲಿ ಜಯಿಸುವುದು ಒಂದು ವಿಶೇಷ ಮತ್ತು ತೃಪ್ತಿದಾಯಕ ಎನಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಇದನ್ನು ಓದಿ:ವಿಲಿಯಮ್ಸ್​ ನೇತೃತ್ವದ ಈ ತಂಡ ನ್ಯೂಜಿಲ್ಯಾಂಡ್ ಇತಿಹಾಸದಲ್ಲೇ ಅತ್ಯುತ್ತಮವಾದದ್ದು: ಹ್ಯಾಡ್ಲಿ ಮೆಚ್ಚುಗೆ

ABOUT THE AUTHOR

...view details