ಕರ್ನಾಟಕ

karnataka

ETV Bharat / sports

ನಿರ್ಣಾಯಕ ಪಂದ್ಯದಲ್ಲಿ ಭಾರತಕ್ಕೆ ಆಘಾತ: ಆರಂಭದಲ್ಲೇ 5 ವಿಕೆಟ್ ಕಳೆದುಕೊಂಡ ಧವನ್​ ಪಡೆ - ಟೀಂ ಇಂಡಿಯಾ

ಕೊನೆಯ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದ್ದು, ಇವತ್ತಿನ ಪಂದ್ಯದಲ್ಲಿ ಮತ್ತೆ ಲಂಕಾ ಸ್ಪಿನ್ನರ್​ಗಳ ಎದುರು ತತ್ತರಿಸಿದ್ದಾರೆ.

Sri Lanka
Sri Lanka

By

Published : Jul 29, 2021, 8:58 PM IST

ಕೊಲಂಬೊ:ಆರ್​.ಪ್ರೇಮದಾಸ ಮೈದಾನದಲ್ಲಿ ನಡೆಯುತ್ತಿರುವ ಕೊನೆಯ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಆಘಾತಕ್ಕೊಳಗಾಗಿದ್ದು, 5 ವಿಕೆಟ್ ಕಳೆದುಕೊಂಡಿದೆ. ಮೊದಲ 4 ಓವರ್​ನಲ್ಲೇ ಪ್ರಮುಖ 4 ವಿಕೆಟ್​ ಕಳೆದುಕೊಂಡು ಸರಣಿ ಸೋಲುವ ಭೀತಿಗೊಳಗಾಗಿದೆ.

ಶ್ರೀಲಂಕಾ ಆಟಗಾರರ ಸಂಭ್ರಮ

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​​​ ಆಯ್ದುಕೊಂಡ ಟೀಂ ಇಂಡಿಯಾ ಆರಂಭದ 4 ಓವರ್​ಗಳಲ್ಲೇ ಪ್ರಮುಖ ನಾಲ್ಕು ವಿಕೆಟ್​ ಕಳೆದುಕೊಂಡಿತು. ಆರಂಭಿಕ ಓವರ್​ನಲ್ಲಿ ಶಿಖರ್ ಧವನ್ ​(0) ವಿಕೆಟ್ ಒಪ್ಪಿಸಿದರೆ, ಇವರ ಬೆನ್ನಲ್ಲೇ ಗಾಯ್ಕವಾಡ(14), ಪಡಿಕ್ಕಲ್​(9) ಹಾಗೂ ಸಂಜು ಸ್ಯಾಮನ್ಸ್​​​(0) ವಿಕೆಟ್​ ಒಪ್ಪಿಸಿದರು.

ಒಂದೇ ಓವರ್​ನಲ್ಲಿ ಎರಡು ವಿಕೆಟ್​ ಪಡೆದುಕೊಳ್ಳುವ ಮೂಲಕ ಹಸರಂಗ ತಂಡಕ್ಕೆ ಮೆಲುಗೈ ತಂದುಕೊಟ್ಟರು. ಹಸರಂಗ ಎಸೆದ 4ನೇ ಓವರ್​ನಲ್ಲಿ ಗಾಯ್ಕವಾಡ ಹಾಗೂ ಸಂಜು ಸ್ಯಾಮನ್ಸ್​ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ನಿತೀಶ್ ರಾಣಾ ಕೂಡ 6ರನ್​ಗಳಿಕೆ ಮಾಡಿ ಔಟ್​ ಆದರು. ಸದ್ಯ ಟೀಂ ಇಂಡಿಯಾ ಉಪನಾಯಕ ಭುವನೇಶ್ವರ್ ಕುಮಾರ್ ಹಾಗೂ ಕುಲ್ದೀಪ್​ ಯಾದವ್​​ ಮೈದಾನದಲ್ಲಿದ್ದಾರೆ.

ಇದೀಗ ಬಂದಿರುವ ಮಾಹಿತಿಯಂತೆ, 12 ಓವರ್‌ ಮುಕ್ತಾಯಕ್ಕೆ ಟೀಂ ಇಂಡಿಯಾ 45 ರನ್ ಗಳಿಸಿದ್ದು 5 ವಿಕೆಟ್‌ ಕಳೆದುಕೊಂಡಿದೆ. ಬೌಲರ್‌ಗಳಾದ ಭುವನೇಶ್ವರ್ ಕುಮಾರ್ ಹಾಗು ಕುಲ್ದೀಪ್ ಯಾದವ್ ಕ್ರೀಸ್‌ನಲ್ಲಿದ್ದಾರೆ.

ABOUT THE AUTHOR

...view details