ನವದೆಹಲಿ:ದುಬೈನಲ್ಲಿ ಆಯೋಜನೆಗೊಂಡಿರುವ ಐಸಿಸಿ ಟಿ-20 ವಿಶ್ವಕಪ್ ನಂತರ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ನಾಯಕ ಸ್ಥಾನದಿಂದ ಕೆಳಗಿಳಿಯುವ ಘೋಷಣೆ ಮಾಡಿದ್ದಾರೆ. ಆದರೆ, ಅಲ್ಪ ಅವಧಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಕೊಹ್ಲಿ ಅನೇಕ ಸ್ಮರಣೀಯ ಗೆಲುವಿಗೆ ಕಾರಣರಾಗಿದ್ದಾರೆ. ಅವುಗಳ ಕಿರುನೋಟ ಇಂತಿದೆ.
- ಭಾರತ vs ಆಸ್ಟ್ರೇಲಿಯಾ: 2020ರಲ್ಲಿ 2ನೇ ಟಿ-20 (ಸಿಡ್ನಿ)
ಭಾರತವು ಆಸ್ಟ್ರೇಲಿಯಾವನ್ನು ಆರು ವಿಕೆಟ್ಗಳಿಂದ ಸೋಲಿಸಿ ಟಿ-20 ಸರಣಿಯನ್ನು ವಶಪಡಿಸಿಕೊಂಡಿತ್ತು. ಇನ್ನು ಈ ಪಂದ್ಯದಲ್ಲಿ ಕೊಹ್ಲಿ 24 ಎಸೆತಗಳಲ್ಲಿ 40 ರನ್ ಸಿಡಿಸಿ ಗೆಲುವಿಗೆ ಕಾರಣರಾಗಿದ್ದರು. ಆಸ್ಟ್ರೇಲಿಯಾ 195 ರನ್ಗಳ ಗುರಿಯನ್ನು ನೀಡಿತ್ತು. ಭಾರತ ಪ್ರಾರಂಭದಲ್ಲಿ ನಿಧಾನಗತಿಯಿಂದ ಆಡಿದರೂ ನಾಯಕ ಕೊಹ್ಲಿ ಫೀಲ್ಡ್ಗಿಳಿದ ಬಳಿಕ ರನ್ಗಳ ಸುರಿಮಳೆ ಹರಿಸಿದ್ದರು. ಈ ಮೂಲಕ ಟೀಂ ಇಂಡಿಯಾ ಮುನ್ನಡೆ ಸಾಧಿಸಿತ್ತು.
- ಭಾರತ vs ನ್ಯೂಜಿಲ್ಯಾಂಡ್: 2020ರಲ್ಲಿ 3ನೇ ಟಿ-20 (ಹ್ಯಾಮಿಲ್ಟನ್)
ಬ್ಯಾಟಿಂಗ್ ಆಯ್ದುಕೊಂಡ ಭಾರತ 11 ಓವರ್ಗಳಲ್ಲಿ 96ರನ್ಗೆ 3 ವಿಕೆಟ್ ಕಳೆದುಕೊಂಡಿತು. ಆದರೆ, ಕೊಹ್ಲಿ 27 ಎಸೆತಗಳಲ್ಲಿ 38 ರನ್ ಗಳಿಸಿ ಭಾರತ 179 ರನ್ ತಲುಪುವಂತೆ ಮಾಡಿದರು. ಇನ್ನು ಈ ಸಂದರ್ಭದಲ್ಲಿ ನ್ಯೂಜಿಲ್ಯಾಂಡ್ ಸಹ 20 ಓವರ್ಗಳಲ್ಲಿ 179 ರನ್ ಗಳಿಸಿತ್ತು. ಬಳಿಕ ಆಟವು ಸೂಪರ್ ಓವರ್ಗೆ ಹೋಯಿತು. ಇದರಲ್ಲಿ ಗೆದ್ದ ಭಾರತವು ವಿಜಯ ಶಾಲಿಯಾಗಿ ಹೊರಹೊಮ್ಮಿತು.
- ಭಾರತ vs ನ್ಯೂಜಿಲ್ಯಾಂಡ್: 2020ರಲ್ಲಿ 3ನೇ ಟಿ 20 (ವೆಲ್ಲಿಂಗ್ಟನ್)
ಮೂರು ದಿನಗಳ ನಂತರ ಭಾರತ ಮತ್ತು ನ್ಯೂಜಿಲ್ಯಾಂಡ್ ಮತ್ತೆ T-2Oನಲ್ಲಿ ಮುಖಾಮುಖಿಯಾದವು. ಇದರಲ್ಲಿ ನ್ಯೂಜಿಲ್ಯಾಂಡ್ 20 ಓವರ್ಗಳಲ್ಲಿ 165 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ಕೊಹ್ಲಿ ಉತ್ತಮವಾಗಿ ರನ್ ಗಳಿಸದಿದ್ದರೂ ಅವರ ಆಟ ಎಲ್ಲರಿಗೂ ರೋಮಾಂಚನ ಮೂಡುವಂತೆ ಮಾಡಿತ್ತು. ಇನ್ನು ಈ ಪಂದ್ಯ ಸಹ ಸೂಪರ್ ಓವರ್ಗೆ ತಲುಪಿ ಭಾರತ ಗೆಲುವು ಸಾಧಿಸಿತು.
- ಭಾರತ vs ಇಂಗ್ಲೆಂಡ್: 2018 ರಲ್ಲಿ 3ನೇ ಟಿ 20 (ಬ್ರಿಸ್ಟಲ್)