ಕರ್ನಾಟಕ

karnataka

ETV Bharat / sports

IPL 2021 Qualifier 1: ದುಬೈನಲ್ಲಿಂದು ಡೆಲ್ಲಿ ಕ್ಯಾಪಿಟಲ್ಸ್ vs ಚೆನ್ನೈ ಸೂಪರ್​ ಕಿಂಗ್ಸ್​ ಹಣಾಹಣಿ - ಚೆನ್ನೈ ಮತ್ತು ದೆಹಲಿ ಕಾದಾಟ

DC vs CSK: ಎಂ.ಎಸ್.ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡ ಸತತ ಮೂರು ಸೋಲುಗಳಿಂದ ಕಂಗೆಟ್ಟಿದ್ದು ಇದೀಗ ಮೈಕೊಡವಿ ಎದ್ದು ನಿಲ್ಲಲು ಹವಣಿಸುತ್ತಿದೆ. ಈ ನಿಟ್ಟಿನಲ್ಲಿ ಇಂದು ಸಂಜೆ ದುಬೈನಲ್ಲಿ ನಡೆಯುವ ಡೆಲ್ಲಿ ಕ್ಯಾಪಿಟಲ್ಸ್‌ vs ಚೆನ್ನೈ ಸೂಪರ್ ಕಿಂಗ್ಸ್‌ ನಡುವಿನ ಮೊದಲ ಕ್ವಾಲಿಫೈಯರ್‌ ಕ್ರಿಕೆಟ್‌ ಪ್ರೇಮಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

first Qualifier match between CSK and DC today
IPL 2021 Qualifier : ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ನಡುವೆ ಹಣಾಹಣಿ

By

Published : Oct 10, 2021, 12:50 PM IST

ದುಬೈ: 2021ರ ಐಪಿಎಲ್‌ ಟೂರ್ನಿಯಲ್ಲಿ ಸತತ ಮೂರು ಸೋಲು ಅನುಭವಿಸಿರುವ ಎಂ.ಎಸ್‌.ಧೋನಿ ನಾಯಕತ್ವದ ಸಿಎಸ್‌ಕೆ ಇಂದು ಜಯದ ಹಾದಿಗೆ ಮರಳಿ ಫೈನಲ್‌ ಪ್ರವೇಶಿಸುವ ಅದಮ್ಯ ಉತ್ಸಾಹದಲ್ಲಿದೆ.

ಲೀಗ್ ಹಂತದ ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಸಿಎಸ್‌ಕೆಗೆ, ತಾನು ಅನುಭವಿಸಿದ ಸತತ ಸೋಲುಗಳಿಂದ ಕೊಂಚಮಟ್ಟಿಗೆ ನಿರಾಶೆ ಆಗಿದೆ. ರಾಜಸ್ಥಾನ ರಾಯಲ್ಸ್‌(ಆರ್‌ಆರ್‌), ಡಿಸಿ ಹಾಗು ಪಂಜಾಬ್‌ ಕಿಂಗ್ಸ್‌ ತಂಡಗೆಳೆದುರು ಬಲಿಷ್ಟ ಚೆನ್ನೈ ಮಂಡಿಯೂರಿತ್ತು.

ಆದ್ರೆ, ಇಂದು ದುಬೈ ಅಂಗಳದಲ್ಲಿ ನಡೆಯುವ ಪಂದ್ಯ ರೋಚಕತೆ ಹೆಚ್ಚಿಸಿದೆ. ಮೊದಲ ಕ್ವಾಲಿಫೈಯರ್‌ನಲ್ಲಿ ಗೆದ್ದು ಫೈನಲ್ ಹಂತಕ್ಕೇರಲು ಉಭಯ ತಂಡಗಳು ತುದಿಗಾಲಲ್ಲಿ ನಿಂತಿವೆ.

ಕಳೆದ ಮೂರು ಪಂದ್ಯಗಳನ್ನು ಸೋತರೂ ತಂಡದಲ್ಲಿರುವ ಆಟಗಾರರ ಸಾಮರ್ಥ್ಯವನ್ನು ಗಣನೆಗೆ ತೆಗೆದುಕೊಂಡರೆ ಧೋನಿ ಟೀಂ ಪುಟಿದೇಳುವುದು ನಿಸ್ಸಂಶಯ. ಆರಂಭಿಕ ಬ್ಯಾಟರ್‌ಗಳಾದ ರುತುರಾಜ್ ಗಾಯಕ್‌ವಾಡ್ ಹಾಗು ಫಾಪ್ ಡು ಪ್ಲೆಸಿಸ್‌ ಅತ್ಯುತ್ತಮ ಲಯದಲ್ಲಿದ್ದು, ತಂಡದ ಬ್ಯಾಟಿಂಗ್‌ ಲೈನ್‌ಅಪ್‌ ಭದ್ರವಾಗಿದೆ.

ಮೊಯಿನ್ ಅಲಿ, ರವೀಂದ್ರ ಜಡೇಜಾ, ಅಂಬಾಟಿ ರಾಯಡು, ಧೋನಿ, ಸುರೇಶ್ ರೈನಾ ಹಾಗು ಬ್ರಾವೋ ಸೇರಿದಂತೆ ತಂಡದ ಇನ್ನಿತರೆ ಸದಸ್ಯರು ಸಾಕಷ್ಟು ಅನುಭವಿಗಳಾಗಿದ್ದಾರೆ. ಇದೇ ವೇಳೆ ಬೌಲಿಂಗ್ ವಿಭಾಗದಲ್ಲಿ ಜೋಶ್ ಹ್ಯಾಜಲ್‌ವುಡ್‌ ಬೌಲಿಂಗ್‌ನಲ್ಲಿ ಪ್ರಧಾನ ಪಾತ್ರ ನಿರ್ವಹಿಸಬಲ್ಲರು.

ದೆಹಲಿ ಕ್ಯಾಪಿಟಲ್ಸ್‌ ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು, ಕಳೆದ ಬಾರಿಯ ಪ್ರದರ್ಶನಕ್ಕಿಂತ ಒಂದು ಹೆಜ್ಜೆ ಮುಂದಿಡಲು ಎದುರು ನೋಡುತ್ತಿದೆ. ಕಳೆದ ಬಾರಿ ತಂಡ ರನ್ನರ್‌ ಅಪ್‌ಗೆ ತೃಪ್ತಿಪಟ್ಟುಕೊಂಡಿತ್ತು. ಲೀಗ್ ಹಂತದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ ವಿರುದ್ಧ ಕೊನೆಯ ಎಸೆತದಲ್ಲಿ ಸೋಲು ಕಂಡರೂ ರಿಷಭ್ ಪಂತ್‌ ನಾಯಕತ್ವದ ತಂಡ ಚೆನ್ನೈಗಿಂತ ಯಾವುದೇ ವಿಭಾಗದಲ್ಲೂ ಕಡಿಮೆ ಇಲ್ಲ.

ಈ ಸೀಸನ್ನಿನ ಎರಡು ಪಂದ್ಯಗಳಲ್ಲಿ ಸಿಎಸ್‌ಕೆಗೆ ಸೋಲಿನ ರುಚಿ ತೋರಿಸಿರುವ ಡೆಲ್ಲಿ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಪೃಥ್ವಿ ಶಾ, ಶಿಖರ್ ಧವನ್, ಹೆಟ್ಮಯರ್ ಹಾಗು ತಂಡದ ಇತರೆ ಸದಸ್ಯರು ಅದ್ಭುತ ಬ್ಯಾಟಿಂಗ್ ಲಯದಲ್ಲಿದ್ದಾರೆ. ಇದು ಚೆನ್ನೈ ತಂಡದ ನಿದ್ದೆಗೆಡಿಸಬಲ್ಲದು.

ಆ್ಯನಿಚ್ ನಾಕಿಯಾ, ಕಗಿಸೋ ರಬಾಡಾ, ಅವೇಶ್ ಖಾನ್, ಅಶ್ವಿನ್ ಹಾಗು ಅಕ್ಸರ್ ಪಟೇಲ್‌ ಸೇರಿದ ಬೌಲಿಂಗ್‌ ಬ್ರಿಗೇಡ್ ಚೆನ್ನೈಗೆ ಯಾವುದೇ ಸಂದರ್ಭದಲ್ಲೂ ಅಪಾಯಕಾರಿಯಾಗಬಲ್ಲದು.

ಇದನ್ನೂ ಓದಿ:ಮಾರಕ ಬೌಲರ್​ಗೆ ಟೀಂ ಇಂಡಿಯಾ ಮಣೆ.. T-20 ವಿಶ್ವಕಪ್​​ ನೆಟ್​​ ಬೌಲರ್​ ಆಗಿ ಉಮ್ರಾನ್ ಮಲಿಕ್​ ಆಯ್ಕೆ

ABOUT THE AUTHOR

...view details