ಕರ್ನಾಟಕ

karnataka

ETV Bharat / sports

ಆಗಸ್ಟ್​​ 30 ರಿಂದ ಯುಪಿಟಿ 20 ಲೀಗ್.. ಉದ್ಘಾಟನಾ ಪಂದ್ಯಕ್ಕೆ ಕಾನ್ಪುರ ಮೈದಾನ ಸಜ್ಜು - ಲಕ್ನೋ ಫಾಲ್ಕನ್ಸ್

UP T20 League: ಐಪಿಎಲ್​ ಮಾದರಿಯ ಟಿ-20 ಲೀಗ್​ನ್ನು ಉತ್ತರ ಪ್ರದೇಶ ಕ್ರಿಕೆಟ್​ ಸಂಸ್ಥೆ ಈ ವರ್ಷದಿಂದ ಆರಂಭಿಸಿದ್ದು, ಇದೇ ತಿಂಗಳ 30ರಂದು ನೋಯ್ಡಾ ಸೂಪರ್ ಕಿಂಗ್ಸ್ ಮತ್ತು ಕಾನ್ಪುರ ಸೂಪರ್ ಸ್ಟಾರ್ಸ್ ನಡುವಿನ ಪಂದ್ಯದ ಮೂಲಕ ಚಾಲನೆ ದೊರೆಯಲಿದೆ.

T20 league
T20 league

By ETV Bharat Karnataka Team

Published : Aug 25, 2023, 1:04 PM IST

ಕಾನ್ಪುರ (ಉತ್ತರ ಪ್ರದೇಶ): ಟಿ-20 ಈಗ ಕ್ರಿಕೆಟ್​ನಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವ ಮಾದರಿ ಆಗಿದೆ. ಭಾರತದಲ್ಲಿ ನಡೆಯುವ ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​) ಈಗಾಗಲೇ ವಿಶ್ವದಾದ್ಯಂತ ಮನ್ನಣೆ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ರಾಜ್ಯ ಕ್ರಿಕೆಟ್​ ಸಂಸ್ಥೆಗಳು ಟಿ20 ಮಾದರಿಯ ಲೀಗ್​ ಕ್ರಿಕೆಟ್​ ಅನ್ನು ಆಯೋಜಿಸಲು ಮುಂದಾಗಿದೆ. ಈಗಾಗಲೇ ಕರ್ನಾಟಕ, ತಮಿಳುನಾಡು ಸೇರಿದಂತೆ ಕೆಲ ರಾಜ್ಯಗಳು ಟಿ20 ಲೀಗ್​ನ್ನು ನಡೆಸುತ್ತಿವೆ. ಆದರೆ, ಈ ವರ್ಷದಿಂದ ಉತ್ತರ ಪ್ರದೇಶ ಟಿ20 ಲೀಗ್​​ ಆರಂಭವಾಗಲಿದೆ.

ಉತ್ತರ ಪ್ರದೇಶ ರಾಜ್ಯದಲ್ಲಿ ಮೊದಲ ಬಾರಿಗೆ ಐಪಿಎಲ್ ಮಾದರಿಯ ಟಿ20 ಲೀಗ್‌ ಆಯೋಜನೆ ಗೊಂಡಿದ್ದು, ಇದರ ಉದ್ಘಾಟನಾ ಪಂದ್ಯ ನೋಯ್ಡಾ ಸೂಪರ್ ಕಿಂಗ್ಸ್ ಮತ್ತು ಕಾನ್ಪುರ ಸೂಪರ್ ಸ್ಟಾರ್ಸ್ ನಡುವೆ ನಡೆಯಲಿದೆ. ಆಗಸ್ಟ್ 30 ರಂದು ಈ ಲೀಗ್​ಗೆ ಅಧಿಕೃತ ಚಾಲನೆ ಸಿಗಲಿದೆ. ರಾತ್ರಿ 7.30ಕ್ಕೆ ಆರಂಭವಾಗಲಿರುವ ಈ ಪಂದ್ಯಕ್ಕೆ ಯುಪಿ ಕ್ರಿಕೆಟ್ ಸಂಸ್ಥೆ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ನಟರಾದ ಕಾರ್ತಿಕ್ ಆರ್ಯನ್, ದಿಶಾ ಪಟಾನಿ ಸೇರಿದಂತೆ ಹಲವು ತಾರೆಯರು ಉದ್ಘಾಟನಾ ಸಮಾರಂಭಕ್ಕೆ ಆಗಮಿಸಲಿದ್ದಾರೆ.

ಕಾನ್ಪುರ ಸೂಪರ್ ಸ್ಟಾರ್ಸ್, ನೋಯ್ಡಾ ಸೂಪರ್ ಕಿಂಗ್ಸ್, ಗೋರಖ್‌ಪುರ ಲಯನ್ಸ್, ಲಕ್ನೋ ಫಾಲ್ಕನ್ಸ್, ಕಾಶಿ ರುದ್ರಾಸ್​ ಮತ್ತು ಮೀರತ್ ಮೇವರಿಕ್ಸ್ ತಂಡಗಳ ನಡುವೆ ಲೀಗ್‌ನಲ್ಲಿ ಒಟ್ಟು 33 ಪಂದ್ಯಗಳು ನಡೆಯಲಿವೆ. ಇಂದು (ಶುಕ್ರವಾರ) ಕಾನ್ಪುರಕ್ಕೆ ತಂಡಗಳು ಅಭ್ಯಾಸಕ್ಕೆ ಆಗಮಿಸಲಿವೆ. ಅನುಭವಿ ಆಟಗಾರರಾದ ಭುವನೇಶ್ವರ್ ಕುಮಾರ್, ರಿಂಕು ಸಿಂಗ್, ನಿತೀಶ್ ರಾಣಾ, ಅಂಕಿತ್ ರಜಪೂತ್ ಈ ಲೀಗ್​ ಪಂದ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂದು ಉತ್ತರ ಪ್ರದೇಶ ಕ್ರಿಕೆಟ್​ ಅಸೋಸಿಯೇಶನ್ (UPCA) ಟಿಕೆಟ್​ ಶುಲ್ಕ ಮತ್ತು ಉದ್ಘಾಟನಾ ಕಾರ್ಯಕ್ರಮದ ಅತಿಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಮೂಲಗಳು ತಿಳಿಸಿರುವ ಪ್ರಕಾರ ಟಿಕೆಟ್​ ದರ 100 ರೂಪಾಯಿ ಇರಲಿದೆ. ಯುಪಿ ಟಿ20 ಲೀಗ್‌ನ ಸೆಮಿಫೈನಲ್ 15 ರಂದು ಮತ್ತು ಫೈನಲ್ ಸೆಪ್ಟೆಂಬರ್ 16 ರಂದು ನಡೆಯಲಿದೆ.

ಐಪಿಎಲ್​ ಸ್ಟಾರ್​ ಆಟಗಾರರಾದ ರಿಂಕು ಸಿಂಗ್ ಮೀರತ್, ನಿತೀಶ್ ರಾಣಾ ಮತ್ತು ಭುವನೇಶ್ವರ್ ಕುಮಾರ್ ನೋಯ್ಡಾ ಸೂಪರ್ ಕಿಂಗ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಶಿವಂ ಮಾವಿ ಕಾಶಿ ರುದ್ರಾಸ್​​, ಪ್ರಿಯಂ ಗಾರ್ಗ್ ಲಖನೌದಲ್ಲಿ ಭಾಗಿಯಾಗಿದ್ದಾರೆ.

ಇದನ್ನೂ ಓದಿ:Nitish Rana: ದೆಹಲಿ ತೊರೆದು ಉತ್ತರ ಪ್ರದೇಶ ಸೇರಿದ ನಿತೀಶ್​ ರಾಣಾ.. ಇದೇ 30 ರಿಂದ ಯುಪಿಟಿ -20 ಲೀಗ್​

ABOUT THE AUTHOR

...view details