ಮುಂಬೈ: ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸೇರಿದಂತೆ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಭಾರತೀಯ ಮಹಿಳಾ ಮತ್ತು ಪುರುಷ ಕ್ರಿಕೆಟಿಗರ ಮೊದಲ ಬ್ಯಾಚ್ನಲ್ಲಿ ವಿಶೇಷ ವಿಮಾನದ ಮೂಲಕ ಮುಂಬೈಗೆ ಬಂದಿಳಿದಿದೆ.
ಭಾರತ ಮಹಿಳಾ ಮತ್ತು ಪುರುವಷರ ತಂಡ ಜೂನ್ 2ರಂದು ಇಂಗ್ಲೆಂಡ್ಗೆ ವಿಶೇಷ ವಿಮಾನದ ಮೂಲಕ ತೆರಳಲಿದೆ. ಅದಕ್ಕೂ ಮೊದಲು ಮುಂಬೈನಲ್ಲಿ ಎರಡು ವಾರಗಳ ಕ್ವಾರಂಟೈನ್ ಮುಗಿಸಬೇಕಿದೆ. ಈ ಅವಧಿಯಲ್ಲಿ 3 ಆರ್ಟಿಪಿಸಿಆರ್ ಟೆಸ್ಟ್ನಲ್ಲಿ ನೆಗೆಟಿವ್ ವರದಿ ಪಡೆಯಬೇಕಿದೆ.
ಇದೀಗ ಮೊದಲ ಬ್ಯಾಚ್ನಲ್ಲಿ ಅಶ್ವಿನ್ ಜೊತೆಗೆ ವಾಷಿಂಗ್ಟನ್ ಸುಂದರ್, ಮಯಾಂಕ್ ಅಗರ್ವಾಲ್, ಮೊಹಮ್ಮದ್ ಸಿರಾಜ್, ಮಿಥಾಲಿ ರಾಜ್ ಇಂದು ಮುಂಬೈಗೆ ಧಾವಿಸಿದ್ದಾರೆ.