ಕರ್ನಾಟಕ

karnataka

ETV Bharat / sports

ICC Mens T20 World Cup: ಇಂಗ್ಲೆಂಡ್ ವಿರುದ್ದ ಆಸ್ಟ್ರೇಲಿಯಾ125ಕ್ಕೆ ಆಲೌಟ್ - ಕ್ರಿಸ್ ವೋಕ್ಸ್

ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಇಂಗ್ಲೆಂಡ್ ಇನ್ನಿಂಗ್ಸ್ ಪೂರ್ತಿ ಪ್ರಾಬಲ್ಯ ಸಾಧಿಸಿತು. ನಾಯಕ ಆ್ಯರೋನ್ ಫಿಂಚ್​ 49 ಎಸೆತಗಳಲ್ಲಿ 4 ಬೌಂಡರಿ ಸಹಿತ 44 ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್​ ಎನಿಸಿಕೊಂಡರು

ಇಂಗ್ಲೆಂಡ್ ವಿರುದ್ದ ಆಸ್ಟ್ರೇಲಿಯಾ125ಕ್ಕೆ ಆಲೌಟ್
ಇಂಗ್ಲೆಂಡ್ ವಿರುದ್ದ ಆಸ್ಟ್ರೇಲಿಯಾ125ಕ್ಕೆ ಆಲೌಟ್

By

Published : Oct 30, 2021, 9:31 PM IST

ದುಬೈ: ಸೂಪರ್​ 12ನ 1ನೆ ಗುಂಪಿನ ಅಗ್ರಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್​ ಬೌಲರ್​​ಗಳು ಸಾಂಪ್ರದಾಯಿಕ ಎದುರಾಳಿ ಆಸ್ಟ್ರೇಲಿಯಾ ತಂಡವನ್ನು ಕೇವಲ 125 ರನ್​ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ.

ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಇಂಗ್ಲೆಂಡ್ ಇನ್ನಿಂಗ್ಸ್ ಪೂರ್ತಿ ಪ್ರಾಬಲ್ಯ ಸಾಧಿಸಿತು. ನಾಯಕ ಆ್ಯರೋನ್ ಫಿಂಚ್​ 49 ಎಸೆತಗಳಲ್ಲಿ 4 ಬೌಂಡರಿ ಸಹಿತ 44 ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ಆಷ್ಟನ್ ಅಗರ್​ 20 ಎಸೆತಗಳಲ್ಲಿ 20, ಪ್ಯಾಟ್​ ಕಮಿನ್ಸ್​ 12, ಮಿಚೆಲ್ ಸ್ಟಾರ್ಕ್​ 13 ರನ್​ಗಳಿಸಿ ತಂಡದ ಮೊತ್ತವನ್ನು 100 ರ ಗಡಿ ದಾಟಿಸಿದರು.

ಸ್ಟಾರ್ ಬ್ಯಾಟರ್​​ಗಳಾದ ಡೇವಿಡ್ ವಾರ್ನರ್​(1), ಸ್ಟೀವನ್ ಸ್ಮಿತ್​(1), ಗ್ಲೇನ್ ಮ್ಯಾಕ್ಸ್​ವೆಲ್(6), ಮಾರ್ಕಸ್​ ಸ್ಟೋಯ್ನಿಸ್​(0) ಮ್ಯಾಥ್ಯೂವೇಡ್​(18) ರನ್​ಗಳಿಗೆ ವಿಕೆಟ್​ ಒಪ್ಪಿಸಿ ನಿರಾಶೆಯನುಭವಿಸಿದರು.

ಇಂಗ್ಲೆಂಡ್​ ಪರ ಕ್ರಿಸ್ ವೋಕ್ಸ್​ 23ಕ್ಕೆ 2, ಆದಿಲ್ ರಶೀದ್​ 19ಕ್ಕೆ1, ಕ್ರಿಸ್ ಜೋರ್ಡನ್​ 17ಕ್ಕೆ3, ಲಿಯಾಮ್​ ಲಿವಿಂಗ್​ಸ್ಟೋನ್​ 15ಕ್ಕೆ1, ತೈಮಲ್ ಮಿಲ್ಸ್​ 45ಕ್ಕೆ 2 ವಿಕೆಟ್ ಪಡೆದು ಮಿಂಚಿದರು.

ಇದನ್ನು ಓದಿ:ಶ್ರೀಲಂಕಾ ಪಾಲಿಗೆ ಕಿಲ್ಲರ್​ ಆದ ಮಿಲ್ಲರ್.. ದಕ್ಷಿಣ ಆಫ್ರಿಕಾಗೆ 4 ವಿಕೆಟ್​ಗಳ ರೋಚಕ ಜಯ..

ABOUT THE AUTHOR

...view details