2022ರ ಫಿಫಾ ವಿಶ್ವಕಪ್ ಕತಾರ್‌ನಲ್ಲಿ ಯಶಸ್ವಿಯಾಗಿ ನಡೆದಿತ್ತು. 2026ಕ್ಕೆ ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋ ದೇಶಗಳು ಆತಿಥ್ಯ ವಹಿಸಿಕೊಳ್ಳಲಿವೆ. 26ರ ಕಾಲ್ಚೆಂಡಿನ ವಿಶ್ವಕಪ್ನ ಗುಂಪು ಹಂತದ ಪಂದ್ಯಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿರುವ ಬಗ್ಗೆ ಮಂಗಳವಾರ ಫಿಫಾ ಕೌನ್ಸಿಲ್ ತಿಳಿಸಿದೆ. ಹೊಸ ನಿಯಮದಂತೆ ಈ ಹಿಂದೆ ಇದ್ದ 16 ತಂಡಗಳ ಮೂರು ಗುಂಪನ್ನು 12 ತಂಡದ ನಾಲ್ಕು ಗುಂಪಾಗಿ ವಿಭಾಗಿಸಲಾಗಿದೆ. 2022ರ ವಿಶ್ವಕಪ್‌ನಲ್ಲಿ ಒಟ್ಟು 64 ಪಂದ್ಯಗಳನ್ನು ಆಡಿಸಲಾಗಿತ್ತು. ಇದೀಗ ಹೊಸ ಬದಲಾವಣೆಯ ನಂತರ 104 ಪಂದ್ಯಗಳು ನಡೆಯಲಿವೆ.
ರುವಾಂಡಾದ ಕಿಗಾಲಿಯಲ್ಲಿ ನಡೆದ ಫಿಫಾ ಕೌನ್ಸಿಲ್ ಸಭೆ ಈ ಕ್ರಮವನ್ನು ಅನುಮೋದಿಸಿದೆ. ಪರಿಷ್ಕೃತ ಸ್ಪರ್ಧೆಯ ರಚನೆಯು ಭಾರತ ಸೇರಿದಂತೆ ದೇಶಗಳಿಗೆ ವಿಶ್ವಕಪ್ ಆಡುವ ಕನಸು ನನಸಾಗಿಸಲು ಸಹಾಯ ಮಾಡುತ್ತದೆ. 2026ರಲ್ಲಿ, ಯುನೈಟೆಡ್ ಸ್ಟೇಟ್ಸ್, ಮೆಕ್ಸಿಕೊ ಮತ್ತು ಕೆನಡಾ ಜಂಟಿಯಾಗಿ ವಿಶ್ವಕಪ್ ಆಯೋಜಿಸುತ್ತವೆ. ಈ ದೇಶಗಳ 16 ನಗರಗಳಲ್ಲಿ ಪಂದ್ಯಗಳು ನಡೆಯಲಿವೆ. ಇವುಗಳಲ್ಲಿ 11 ನಗರಗಳು ಯುಎಸ್, ಮೂರು ಮೆಕ್ಸಿಕೊ ಹಾಗು ಎರಡು ಕೆನಡಾದಲ್ಲಿವೆ. ವಿಶ್ವಕಪ್ ಇತಿಹಾಸದಲ್ಲಿ ಮೂರು ತಂಡಗಳು ಜಂಟಿಯಾಗಿ ಆತಿಥ್ಯ ವಹಿಸುತ್ತಿರುವುದು ಇದೇ ಮೊದಲು. 48 ತಂಡಗಳನ್ನು ಪ್ರತಿನಿಧಿಸುವ ಮೂಲಕ ಈ ವಿಶ್ವಕಪ್ ಟೂರ್ನಿಯು ಇತಿಹಾಸದಲ್ಲಿ ಅತಿದೊಡ್ಡ ಮತ್ತು ಸುದೀರ್ಘವಾಗಿರುತ್ತದೆ.
ಸ್ಪರ್ಧೆಯನ್ನು ತಲಾ 4 ತಂಡಗಳ 12 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ತಂಡವು ಗುಂಪು ಹಂತದಲ್ಲಿ ಮೂರು ಪಂದ್ಯಗಳನ್ನು ಆಡಲಿದೆ. ಪ್ರತಿ ಗುಂಪಿನಿಂದ ಅಗ್ರ ಎರಡು ಮತ್ತು ಅಗ್ರ 8 ತಂಡಗಳು 32 ರ ಸುತ್ತಿಗೆ ಮುನ್ನಡೆಯುತ್ತವೆ. ಫೈನಲಿಸ್ಟ್‌ಗಳು, ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿರುವ ತಂಡಗಳು ಪ್ರಸ್ತುತ ಏಳು ಪಂದ್ಯಗಳ ಬದಲಿಗೆ ಎಂಟು ಪಂದ್ಯಗಳನ್ನು ಆಡುತ್ತವೆ.
ತಂಡಗಳ ಸಂಖ್ಯೆ ಏರಿಕೆ: 24 ತಂಡಗಳು 32 ಆಗಿರುವ ಕಾರಣ ಗುಂಪು ಮಾಡುವ ಬಗ್ಗೆ ಚರ್ಚೆಗಳು ನಡೆದಿದ್ದವು. 16 ತಂಡದ ಮೂರು ಗುಂಪು ಬಗ್ಗೆ ಪ್ರಸ್ತಾಪಗಳಿದ್ದವು. ಅದನ್ನು ಬದಲಿಸಿ 12 ತಂಡದ 4 ಗುಂಪು ಮಾಡುವ ವಿಚಾರಕ್ಕೆ ಒಪ್ಪಿಗೆ ಸೂಚಿಸಲಾಯಿತು. 2022ರ ಕತಾರ್ ವಿಶ್ವಕಪ್‌ನಲ್ಲಿ 32 ತಂಡಗಳ 64 ಪಂದ್ಯವನ್ನು 29 ದಿನಗಳಲ್ಲಿ ಪೂರ್ಣಗೊಳಿಸಲಾಗಿದೆ.