ಕರ್ನಾಟಕ

karnataka

ETV Bharat / sports

Rahul Dravid: ಏಷ್ಯಾಕಪ್​ ವೇಳೆ ಕೆಲವು ಆಟಗಾರರು ಭಾರತ ತಂಡ ಸೇರುವ ಭರವಸೆ ಇದೆ- ರಾಹುಲ್​ ದ್ರಾವಿಡ್ - ರಾಷ್ಟ್ರೀಯ ಕ್ರಿಕೆಟ್​ ಆಕಾಡೆಮಿ

Team India: ಏಕದಿನ ಕ್ರಿಕೆಟ್‌ ವಿಶ್ವಕಪ್​ಗೂ ಮುನ್ನ ಭಾರತ ತಂಡ ಏಕದಿನ ಮಾದರಿಯ ಏಷ್ಯಾಕಪ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಆಡಲಿದೆ.

K L Rahul, Shreyas Iyer
ಕೆ ಎಲ್​ ರಾಹುಲ್​ ಹಾಗೂ ಶ್ರೇಯಸ್​ ಅಯ್ಯರ್

By

Published : Aug 14, 2023, 5:08 PM IST

ಹೈದರಾಬಾದ್​: ವಿಶ್ವಕಪ್​ಗೆ ಇನ್ನು ಒಂದೂವರೆ ತಿಂಗಳಿದೆ. ಈ ನಡುವೆ ಭಾರತ ತನ್ನ ತಂಡವನ್ನು ಸಿದ್ಧಗೊಳಿಸಬೇಕಿದೆ. ಮುಂದಿನ ತಿಂಗಳ 5ರೊಳಗೆ ತಾತ್ಕಾಲಿಕ ತಂಡವನ್ನು ಪ್ರಕಟಿಸಬೇಕು. ಕೆ.ಎಲ್.​ ರಾಹುಲ್​ ಮತ್ತು ಶ್ರೇಯಸ್​ ಅಯ್ಯರ್​ ಗಾಯದಿಂದ ಗುಣಮುಖರಾಗಿದ್ದು ತಂಡಕ್ಕಾಗಿ ಆಡಲು ಎದುರು ನೋಡುತ್ತಿದ್ದಾರೆ. ಆದರೆ ವಿಶ್ವಕಪ್​ಗೂ ಮುನ್ನ ಏಷ್ಯಾಕಪ್​ ಒಂದೇ ಇಬ್ಬರಿಗೂ ಅವಕಾಶದ ಬಾಗಿಲಾಗಿದೆ.

ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಆಕಾಡೆಮಿಯಲ್ಲಿ (ಎನ್‌ಸಿಎ) ಇಬ್ಬರು ಬ್ಯಾಟರ್​ಗಳು ಅಭ್ಯಾಸದಲ್ಲಿ ತೊಡಗಿದ್ದು ಕಮ್​ಬ್ಯಾಕ್​ಗಾಗಿ ಶತಾಯಗತಾಯ ಪ್ರಯತ್ನದಲ್ಲಿದ್ದಾರೆ. ಐರ್ಲೆಂಡ್​ ಪ್ರವಾಸದ ನಾಯತ್ವದಲ್ಲಿರುವ ಬುಮ್ರಾ ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತ ಎಂದೇ ಹೇಳಬಹುದು. ಆದರೆ ಅವರು ಮತ್ತೆ ಗಾಯಕ್ಕೆ ತುತ್ತಾಗಬಾರದು. ಸಪ್ಟೆಂಬರ್​ 28ರೊಳಗೆ ವಿಶ್ವಕಪ್​ನ ತಂಡ ಪ್ರಕಟಿಸಬೇಕಿದ್ದು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಆಡಿದ ಆಟಗಾರರನ್ನು ಪರಿಗಣನೆಗೆ ತೆಗೆದುಕೊಳ್ಳುವುದು ಕಷ್ಟವಾಗಲಿದೆ.

ವೆಸ್ಟ್​ ಇಂಡೀಸ್​ ಟಿ20 ಸರಣಿ ಸೋಲಿನ ನಂತರ ಮಾತನಾಡಿದ ಕೋಚ್​ ರಾಹುಲ್​ ದ್ರಾವಿಡ್​, "ನಮ್ಮಲ್ಲಿ ಯಾವುದೇ ಸಂದರ್ಭದಲ್ಲಿ ಗಾಯದಿಂದ ಹಿಂತಿರುಗುವ ಕೆಲವು ಹುಡುಗರಿದ್ದಾರೆ. ನಾವು ಅವರಿಗೆ ಏಷ್ಯಾ ಕಪ್‌ನಲ್ಲಿ ಆಡಲು ಅವಕಾಶ ನೀಡಬೇಕು. ನಾವು ಏಷ್ಯಾ ಕಪ್‌ಗಾಗಿ ಆಗಸ್ಟ್ 23ರಿಂದ ಬೆಂಗಳೂರಿನಲ್ಲಿ ಒಂದು ವಾರ ಶಿಬಿರ ಮಾಡಲಿದ್ದೇವೆ. ಈ ಆಧಾರದಲ್ಲಿ ಆಯ್ಕೆ ನಡೆಯಲಿದೆ" ಎಂದರು

ದ್ರಾವಿಡ್​ ಅವರ ಈ ಮಾತು ಏಷ್ಯಾಕಪ್​ನಲ್ಲಿ ರಾಹುಲ್​ ಹಾಗೂ ಶ್ರೇಯಸ್​ ಅಯ್ಯರ್​ ಅವರ ಕಮ್​ಬ್ಯಾಕ್​ ಸೂಚನೆ ನೀಡಿದೆ. ಬುಮ್ರಾ ಈಗಾಗಲೇ ಐರ್ಲೆಂಡ್​ ಪ್ರವಾಸದ ಮೂಲಕ ಟೀಂ​ ಇಂಡಿಯಾಕ್ಕೆ ಮರಳಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟರ್​ನ ಕೊರತೆ ನೀಗಿಸಲು ಇಬ್ಬರ ಮೇಲೂ ಭರವಸೆ ಹೆಚ್ಚಿದೆ.

ತಿಲಕ್​ ವರ್ಮಾ ಅಚ್ಚರಿ ಆಯ್ಕೆ?: ವೆಸ್ಟ್​ ಇಂಡೀಸ್​ ವಿರುದ್ಧ ಟಿ20ಗೆ ಪಾದಾರ್ಪಣೆ ಮಾಡಿ ಮಧ್ಯಮ ಕ್ರಮಾಂಕದಲ್ಲಿ ಉತ್ತಮವಾಗಿ ಬ್ಯಾಟ್​ ಬೀಸಿದ ತಿಲಕ್​ ವರ್ಮಾ ವಿಶ್ವಕಪ್​ನ ಅಚ್ಚರಿಯ ಆಯ್ಕೆ ಆಗಬಹುದು ಎಂದು ಕ್ರಿಕೆಟ್ ವಲಯದಲ್ಲಿ ಚರ್ಚೆ ಆಗುತ್ತಿದೆ. ಇದಕ್ಕೆ ಅವರ ಬ್ಯಾಟಿಂಗ್​ನ ಶೈಲಿ ಮತ್ತು ಲಯ ಕಾರಣವಾಗಿದೆ. ವಿಂಡೀಸ್​ ವಿರುದ್ಧದ ಐದು ಇನ್ನಿಂಗ್ಸ್​​ನಲ್ಲಿ 173 ರನ್​ ಗಳಿಸಿದ್ದಾರೆ. ಇದರಲ್ಲಿ ಒಂದು ಅರ್ಧಶತಕವೂ ಇದೆ. 57.67 ರ ಸರಾಸರಿಯಲ್ಲಿ ರನ್​ ಕಲೆಹಾಕಿದ್ದು, ಸ್ಟ್ರೈಕ್​ರೇಟ್​ 140.65 ಇದೆ. 51 ಬೆಸ್ಟ್​ ಸ್ಕೋರ್​ ಆಗಿದೆ.

ಅಭ್ಯಾಸದಲ್ಲಿ ಅಯ್ಯರ್,​ ರಾಹುಲ್​ : ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿ ಶ್ರೇಯಸ್​ ಅಯ್ಯರ್​ ಮತ್ತು ರಾಹುಲ್ ಅಭ್ಯಾಸ ಪಂದ್ಯ ಆಡುತ್ತಿದ್ದಾರೆ. ರಿಷಬ್​ ಪಂತ್​ ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಈ ಇಬ್ಬರು ಆಡುತ್ತಿರುವ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:​India vs Ireland: ಐರ್ಲೆಂಡ್​ ಪ್ರವಾಸ: 'ಯಂಗ್‌ ಇಂಡಿಯಾ'ಗೆ ಬುಮ್ರಾ ಕ್ಯಾಪ್ಟನ್‌

ABOUT THE AUTHOR

...view details