ಕರ್ನಾಟಕ

karnataka

ETV Bharat / sports

ವೈಫಲ್ಯದ ಭಯವೇ ನನ್ನನ್ನು ಆಟದ ಕಡೆ ಗಮನ ಹರಿಸಲು ನೆರವಾಗಿದೆ: ಎಬಿಡಿ - ಎಬಿ ಡಿ ವಿಲಿಯರ್ಸ್​

5 ತಿಂಗಳ ನಂತರ ಮತ್ತೆ ಕ್ರಿಕೆಟ್​ಗೆ ಮರಳಿದ ವಿಲಿಯರ್ಸ್​ ಕಳೆದ ಪಂದ್ಯದಲ್ಲಿ ಮುಂಬೈನಂತಹ ಬಲಿಷ್ಠ ತಂಡದ ವಿರುದ್ಧ ಅದ್ಭುತವಾಗಿ ಬ್ಯಾಟಿಂಗ್ ಮಾಡಿ ಆರ್​ಸಿಬಿಗೆ 2 ವಿಕೆಟ್​ಗಳ ರೋಚಕ ಜಯ ಸಾಧಿಸಲು ನೆರವಾಗಿದ್ದರು. ಅವರು 27 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್​ಗಳ ಸಹಿತ 48 ರನ್ ​ಗಳಿಸಿದ್ದರು.

ಎಬಿ ಡಿ ವಿಲಿಯರ್ಸ್​
ಎಬಿ ಡಿ ವಿಲಿಯರ್ಸ್​

By

Published : Apr 14, 2021, 5:52 PM IST

ಚೆನ್ನೈ:ಒತ್ತಡದ ಪಂದ್ಯಗಳಲ್ಲಿ ಆಡುವಾಗ ವಿಫಲನಾಗಬಹುದೆಂಬ ಭಯ ಕಾಡುವುದರಿಂದಲೇ ಟಿ-20 ಮಾದರಿಯಲ್ಲಿ ವಿವಿಧ ಸವಾಲುಗಳನ್ನು ಎದುರಿಸಲು ಮತ್ತಷ್ಟು ಗಮನಹರಿಸಲು ನೆರವಾಗಿ ಎಂದು ಎಬಿಡಿ ತಿಳಿಸಿದ್ದಾರೆ.

5 ತಿಂಗಳ ನಂತರ ಮತ್ತೆ ಕ್ರಿಕೆಟ್​ಗೆ ಮರಳಿದ ವಿಲಿಯರ್ಸ್​ ಕಳೆದ ಪಂದ್ಯದಲ್ಲಿ ಮುಂಬೈನಂತಹ ಬಲಿಷ್ಠ ತಂಡದ ವಿರುದ್ಧ ಅದ್ಭುತವಾಗಿ ಬ್ಯಾಟಿಂಗ್ ಮಾಡಿ ಆರ್​ಸಿಬಿಗೆ 2 ವಿಕೆಟ್​ಗಳ ರೋಚಕ ಜಯ ಸಾಧಿಸಲು ನೆರವಾಗಿದ್ದರು. ಅವರು 27 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್​ಗಳ ಸಹಿತ 48 ರನ್ ​ಗಳಿಸಿದ್ದರು.

ನೀವು ವರ್ಷದಿಂದ ವರ್ಷಕ್ಕೆ ಪಂದ್ಯವನ್ನು ಗೆಲ್ಲಿಸುವಂತಹ ಆಟವನ್ನು ಹೇಗೆ ನಿರ್ವಹಿಸುತ್ತಿದ್ದೀರಿ ಎಂದು ಕೇಳಿದ್ದಕ್ಕೆ ಉತ್ತರಿಸಿದ ಡಿವಿಲಿಯರ್ಸ್, "ಇದು ಯಾವಾಗಲೂ ಆನಂದಕರವಾಗಿರುವುದಿಲ್ಲ. ಆದರೆ ಇದು ತುಂಬಾ ಸರಳ ಸಂಗತಿ. ಏನೆಂದರೆ, ನಾನು ಎದುರಿಸುವ ಸನ್ನಿವೇಶಗಳನ್ನು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಪ್ರಯತ್ನಿಸುತ್ತೇನೆ ಮತ್ತು ಆಡುತ್ತೇನೆ. ಆದರೆ ಇಲ್ಲಿ ಪ್ರಮುಖ ವಿಷಯವೆಂದರೆ, ನೀವು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವಾಗ, ಪರಿಸ್ಥಿತಿ ಪ್ರತಿ ಬಾರಿಯೂ ಬದಲಾಗುತ್ತದೆ. ಇದಕ್ಕೆ ಹೊಂದಿಕೊಳ್ಳಲು ಮತ್ತು ಸಾಧಿಸಲು ಪ್ರಯತ್ನಿಸಬೇಕು" ಎಂದು ಆರ್​ಸಿಬಿಯ ಬೋಲ್ಡ್​ ಡೈರೀಸ್​ನಲ್ಲಿ ಹೇಳಿಕೊಂಡಿದ್ದಾರೆ.

"ಆದರೆ ನೀವು ವಿಫಲಗೊಳ್ಳುವ ಸಾಧ್ಯತೆಯಿದೆ ಎಂಬ ಭಾವನೆ ನಿಮ್ಮನ್ನು ಯಾವಾಗಲೂ ಕಾಡುತ್ತಿರುತ್ತದೆ. ಈ ರೀತಿಯ ಸೋಲಿನ ಭಯವೇ ನನ್ನನ್ನು ಚೆಂಡಿನ ಮೇಲೆ ಹೆಚ್ಚಿನ ಗಮನ ಹರಿಸಲು ಮತ್ತು ಮೂಲ ಅಂಶಗಳನ್ನು ಉತ್ತಮಗೊಳಿಸಿಕೊಳ್ಳಲು ನೆರವಾಗಿದೆ. ಇಲ್ಲಿ ಪ್ರಯತ್ನ ಮತ್ತು ಪ್ರಾರಂಭ ಮುಖ್ಯ. ಹಾಗಾಗಿ ಮೊದಲ 20 ಎಸೆತಗಳನ್ನು ಚೆನ್ನಾಗಿ ಪ್ರಾರಂಭಿಸುವುದು ಪ್ರಮುಖವಾಗಿರುತ್ತದೆ" ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ:ಅಗ್ರಪಟ್ಟದ ಕಿರೀಟ ಕಳೆದುಕೊಂಡ ಕಿಂಗ್​ ಕೊಹ್ಲಿ: ಏಕದಿನ ರ‍್ಯಾಂಕಿಂಗ್ ಮುಡಿಗೇರಿಸಿಕೊಂಡ ಪಾಕ್​ ಆಟಗಾರ

ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿರುವ ಎಬಿ ಡಿ ವಿಲಿಯರ್ಸ್​, ಟಾಪ್​ ಲೆವೆಲ್ ಕ್ರಿಕೆಟ್​ನಲ್ಲಿ ದೊಡ್ಡ ಅಂತರವಿದ್ದಾಗ ಲಯಕ್ಕೆ ಮರಳಲು ಕೆಲವು ಸಮಯ ತೆಗೆದುಕೊಳ್ಳುತ್ತದೆ ಎಂದು ಒಪ್ಪಿಕೊಂಡಿದ್ದಾರೆ.

"ಯೋಗ್ಯವಾದ ಫಾರ್ಮ್​ಗೆ ಮರಳುವ ಕೆಲಸ ಮೊದಲಿಗಿಂತಲೂ ಹೆಚ್ಚು ಕಠಿಣವಾಗಿತ್ತು. ಏಕೆಂದರೆ ನಾನು ಕಳೆದ ಐಪಿಎಲ್​ನಲ್ಲಿ ನನ್ನ ಕೊನೆಯ ಪಂದ್ಯವನ್ನಾಡಿದ್ದೆ. ಇದರರ್ಥ ನಾನು ಕಠಿಣ ಪರಿಶ್ರಮ ಪಟ್ಟಿಲ್ಲ ಎಂದಲ್ಲ, ನಾನು ಎರಡು ತಿಂಗಳ ಹಿಂದೆಯೇ ತಯಾರಿ ಆರಂಭಿಸಿದ್ದೆ. ಅದಕ್ಕೂ ಮೊದಲು 2-3 ತಿಂಗಳು ವಿಶ್ರಾಂತಿಯಲ್ಲಿದ್ದೆ. ಆ ಸಂದರ್ಭದಲ್ಲಿ ಉತ್ತಮವಾಗಿ ಜಿಮ್​ ಮಾಡಿ ಫಿಟ್​ ಆಗಿದ್ದೆ. ಇದು ನನನ್ನು ಉತ್ತಮ ಸ್ಪೇಸ್​ಗೆ ಕರೆದೊಯ್ಯಲು ಸಹಕಾರಿಯಾಯಿತು" ಎಂದು ಅವರು ಹೇಳಿದ್ದಾರೆ.

ಇಂದು ಆರ್​ಸಿಬಿ ತನ್ನ 2ನೇ ಪಂದ್ಯದಲ್ಲಿ ಸನ್ ​ರೈಸರ್ಸ್ ಹೈದರಾಬಾದ್ ವಿರುದ್ಧದ ಸೆಣಸಾಡುತ್ತಿದೆ. ಈ ಬಗ್ಗೆ ಮಾತನಾಡಿದ ಅವರು, "ಎಸ್​ಆರ್​ಹೆಚ್​ ಅತ್ಯುತ್ತಮ ಬೌಲಿಂಗ್ ದಾಳಿಯನ್ನು ಹೊಂದಿದ್ದು, ಅವರ ಸವಾಲು ಅದ್ಭುತವಾಗಿರುತ್ತದೆ. ಸನ್ ​ರೈಸರ್ಸ್​ ವಿರುದ್ಧದ ಪಂದ್ಯವನ್ನು ನಾನು ಸದಾ ಆನಂದಿಸುತ್ತೇನೆ. ಅವರು ತಮ್ಮ ಕೌಶಲ್ಯಗಳಿಂದ ನಿಮಗೆ ಸವಾಲೆಸೆಯಲಿದ್ದಾರೆ ಮತ್ತು ಅವರು ಯಾವಾಗಲೂ ಸ್ಮಾರ್ಟ್​ ಆಗಿರುತ್ತಾರೆ. ಆದರೆ ನಮಗೆ ಆರಂಭಿಕರಿಂದ ಉತ್ತಮ ಜೊತೆಯಾಟ ಸಿಕ್ಕರೆ, ಅವರ ವಿರುದ್ಧ ಪ್ರಾಬಲ್ಯ ಸಾಧಿಸಬಹುದು. ಅವರಲ್ಲಿ ಐಪಿಎಲ್​ನಲ್ಲಿ ಉಳಿದ ತಂಡ ಹೊಂದಿರುವಂತೆ ಆಳವಾದ ಬ್ಯಾಟಿಂಗ್ ಲೈನ್​ ಅಪ್​ ಹೊಂದಿಲ್ಲ. ಹಾಗಾಗಿ ಈ ಪಂದ್ಯದಲ್ಲಿ ಅವರನ್ನು ಕಮ್​ಬ್ಯಾಕ್ ಮಾಡಲು ಬಿಡುವುದಿಲ್ಲ. ಏಕೆಂದರೆ ಅವರು ತುಂಬಾ ಅಪಾಯಕಾರಿ" ಎಂದು ಎಬಿಡಿ ಹೇಳಿದ್ದಾರೆ.

ABOUT THE AUTHOR

...view details