ಜಮೈಕಾ:ಪಾಕಿಸ್ತಾನ ತಂಡದ ಆಪತ್ಪಾಂಧವ ಎನಿಸಿಕೊಂಡಿರುವ ಫವಾದ್ ಆಲಮ್ ವೆಸ್ಟ್ ಇಂಡೀಸ್ ವಿರುದ್ಧ ಆಕರ್ಷಕ ಶತಕ ಸಿಡಿಸುವ ಮೂಲಕ ವೇಗವಾಗಿ 5 ಶತಕ ಸಿಡಿಸಿದ ಏಷ್ಯಾದ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ಜಮೈಕಾದಲ್ಲಿ ವಿಂಡೀಸ್ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಫವಾದ್ ಅಜೇಯ 124 ರನ್ ಗಳಿಸಿದ್ದರು. 76 ರನ್ ಗಳಿಸಿದ್ದ ವೇಳೆ ಕಾಲಿನ ನೋವಿನ ಕಾರಣ ವಿಶ್ರಾಂತಿ ತೆಗೆದುಕೊಂಡಿದ್ದ ಫವಾದ್, 3ನೇ ದಿನ ಕಣಕ್ಕಿಳಿದು ಶತಕ ಪೂರ್ಣಗೊಳಿಸಿದರು. 35 ವರ್ಷದ ಕ್ರಿಕೆಟಿಗನ ಅದ್ಭುತ ಪ್ರಯತ್ನದಿಂದ ಪಾಕಿಸ್ತಾನ ತಂಡ 302-9 ರನ್ಗಳಿಗೆ ಡಿಕ್ಲೇರ್ ಘೋಷಿಸಿತು.