ಕರ್ನಾಟಕ

karnataka

ETV Bharat / sports

ಸಿಎಸ್​ಕೆ ನಾಯಕತ್ವ ಬಿಟ್ಟುಕೊಟ್ಟ ಧೋನಿಗೆ ಅಭಿಮಾನಿಗಳ 'ಸೆಲ್ಯೂಟ್'!

ಚೆನ್ನೈ ಸೂಪರ್ ಕಿಂಗ್ಸ್​ ತಂಡದ ನಾಯಕತ್ವದಿಂದ ಮಹೇಂದ್ರ ಸಿಂಗ್ ಧೋನಿ ಕೆಳಗಿಳಿದಿದ್ದು, ಕೂಲ್ ಕ್ಯಾಪ್ಟನ್ ನಿರ್ಧಾರಕ್ಕೆ ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದಾರೆ.

Fans Salute MS Dhoni
Fans Salute MS Dhoni

By

Published : Mar 24, 2022, 4:11 PM IST

ಹೈದರಾಬಾದ್​:ಪ್ರಸಕ್ತ ಸಾಲಿನಇಂಡಿಯನ್​ ಪ್ರೀಮಿಯರ್ ಲೀಗ್​ ಆರಂಭಗೊಳ್ಳಲು ಕೇವಲ ಎರಡು ದಿನ ಮಾತ್ರ ಬಾಕಿ ಇದೆ. ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್​​ ತಂಡ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಸೆಣಸಾಟ ನಡೆಸಲಿದೆ. ಇದರ ಮಧ್ಯೆ ಸಿಎಸ್​ಕೆ ತಂಡದ ನಾಯಕತ್ವದಿಂದ ಕೆಳಗಿಳಿಯುವ ಬಗ್ಗೆ ಮಹೇಂದ್ರ ಸಿಂಗ್ ಧೋನಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

2008ರಿಂದಲೂ ತಂಡದ ಭಾಗವಾಗಿರುವ ಧೋನಿ ಇದೀಗ ಆಟಗಾರನಾಗಿ ತಂಡದಲ್ಲಿ ಉಳಿದುಕೊಂಡು ಮಾರ್ಗದರ್ಶನ ನೀಡಲು ಮುಂದಾಗಿದ್ದಾರೆ. ನಾಯಕತ್ವದ ಜವಾಬ್ದಾರಿ ಆಲ್​ರೌಂಡರ್ ರವೀಂದ್ರ ಜಡೇಜಾಗೆ ವಹಿಸಲಾಗಿದೆ. 2022ರಲ್ಲಿ ತಂಡದ ನಾಯಕನಾಗಿ ಜಡೇಜಾ ಇನ್ಮುಂದೆ ಸಿಎಸ್​ಕೆ ಟೀಂ ಮುನ್ನಡೆಸಲಿದ್ದಾರೆ.

ಅಭಿಮಾನಿಗಳ ಸೆಲ್ಯೂಟ್​: ಧೋನಿ ತೆಗೆದುಕೊಂಡಿರುವ ನಿರ್ಧಾರಕ್ಕೆ ಕ್ರಿಕೆಟ್ ಪ್ರೇಮಿಗಳು ಫಿದಾ ಆಗಿದ್ದು, ನಿಮ್ಮ ನಿರ್ಧಾರಕ್ಕೊಂದು ಸೆಲ್ಯೂಟ್​ ಎಂದಿದ್ದಾರೆ. ಐಪಿಎಲ್​​ ನಾಯಕನಾಗಿ ಮೊದಲ ಆವೃತ್ತಿಯಲ್ಲೇ ಫೈನಲ್ ತಲುಪಿ, ಕೊನೆಯ ಋತುವಿನಲ್ಲಿ ಚಾಂಪಿಯನ್​ ಆಗಿದ್ದೀರಿ. ಈ ಶ್ರೀಮಂತ ಪರಂಪರೆ ಬಿಟ್ಟು ಹೊರನಡೆದಿರುವ ನಿಮ್ಮ ನಿರ್ಧಾರ ಶ್ಲಾಘನೀಯ ಎಂದು ಕೊಂಡಾಡಿದ್ದಾರೆ.

ಇದನ್ನೂ ಓದಿ:ಸಿಎಸ್​ಕೆ ನಾಯಕತ್ವ ತೊರೆದ 'ಕ್ಯಾಪ್ಟನ್ ಕೂಲ್' ಧೋನಿ: 'ಸರ್​​.ಜಡೇಜಾ' ಹೆಗಲಿಗೆ ಮಹತ್ವದ ಜವಾಬ್ದಾರಿ!

ಟೀಂ ಇಂಡಿಯಾದಲ್ಲೂ ತಾವು ಕ್ಯಾಪ್ಟನ್ಸಿ ಬಿಟ್ಟ ಸಂದರ್ಭದಲ್ಲಿ ಅಂದಿನ ನಾಯಕ ವಿರಾಟ್‌ ಕೊಹ್ಲಿಗೆ ನಾಯಕತ್ವದ ಮಾರ್ಗದರ್ಶನ ನೀಡಿದ್ದೀರಿ. ಈಗ ಸಿಎಸ್‌ಕೆ ತಂಡದಲ್ಲೂ ಇದೇ ತಂತ್ರ ಅನುಸರಿಸಲು ಮುಂದಾಗಿದ್ದೀರಿ. ತಂಡದಲ್ಲಿ ವಿಕೆಟ್‌ಕೀಪರ್‌ ಬ್ಯಾಟರ್ ಆಗಿ ಮುಂದುವರಿಯುವ ಮೂಲಕ ಹೊಸ ಕ್ಯಾಪ್ಟನ್‌ ರವೀಂದ್ರ ಜಡೇಜಾಗೆ ನಾಯಕತ್ವದ ಪಾಠ ಹೇಳಿಕೊಡಲಿರುವ ನಿಮ್ಮ ನಿರ್ಧಾರ ಮೆಚ್ಚುವಂತಹದ್ದು ಎಂದು ಅನೇಕರು ಟ್ವೀಟ್ ಮಾಡಿದ್ದಾರೆ.

ಧೋನಿ ನಾಯಕತ್ವದಲ್ಲಿ ಚೆನ್ನೈ ತಂಡ 2010, 2011, 2018 ಹಾಗೂ 2021ರಲ್ಲಿ ಚಾಂಪಿಯನ್​​ ಆಗಿ ಹೊರಹೊಮ್ಮಿದೆ. ಟೀಂ ಇಂಡಿಯಾದ ನಾಯಕನಾಗಿದ್ದ ಸಂದರ್ಭದಲ್ಲೂ ಧೋನಿ ಸಾರಥ್ಯದಲ್ಲಿ 2007ರ ಟಿ20 ವಿಶ್ವಕಪ್​, 2011ರ ಏಕದಿನ ವಿಶ್ವಕಪ್​ ಹಾಗೂ 2013ರ ಚಾಂಪಿಯನ್ ಟ್ರೋಫಿ ಗೆದ್ದಿದೆ.

ABOUT THE AUTHOR

...view details