ಕರ್ನಾಟಕ

karnataka

ETV Bharat / sports

ಮೈದಾನಕ್ಕೆ ನುಗ್ಗಿ ರೋಹಿತ್ ಕಾಲಿಗೆ ಬಿದ್ದ ಅಭಿಮಾನಿ : ವಿಡಿಯೋ ವೈರಲ್ - ಭಾರತ vs ನ್ಯೂಜಿಲ್ಯಾಂಡ್ 2ನೇ ಟಿ 20

ಈ ಘಟನೆಯಿಂದ ವಿಚಲಿತರಾದ ಭದ್ರತಾ ಸಿಬ್ಬಂದಿ ಆತನನ್ನು ಹಿಡಿಯಲು ತಕ್ಷಣ ಮೈದಾನಕ್ಕೆ ನುಗ್ಗಿದ್ದಾರೆ. ಈ ಘಟನೆ ಪಂದ್ಯವನ್ನು ನೋಡುತ್ತಿದ್ದ ವೀಕ್ಷಕರ ಮೊಬೈಲ್​ನಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲೂ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ..

Fan tries to touch Rohit Sharma's feet during 2nd T20I in Ranchi
ರೋಹಿತ್ ಕಾಲಿಗೆ ಬಿದ್ದ ಅಭಿಮಾನಿ

By

Published : Nov 20, 2021, 4:09 PM IST

ರಾಂಚಿ : ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ 2ನೇ ಟಿ20 ಪಂದ್ಯದ ವೇಳೆ ರೋಹಿತ್ ಶರ್ಮಾ ಅಭಿಮಾನಿಯೊಬ್ಬ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಮೈದಾನಕ್ಕೆ ನುಗ್ಗಿದ ಘಟನೆ ನಡೆದಿದೆ.

ಶುಕ್ರವಾರ ರಾಂಚಿಯಲ್ಲಿ ನಡೆದ 2ನೇ ಟಿ20 ಪಂದ್ಯದ ವೇಳೆ ಈ ಘಟನೆ ನಡೆದಿದೆ. ನ್ಯೂಜಿಲ್ಯಾಂಡ್​ ಬ್ಯಾಟಿಂಗ್ ವೇಳೆ ಅಭಿಮಾನಿ ಮೈದಾನಕ್ಕೆ ಓಡಿ ಬಂದು ರೋಹಿತ್​ ಕಾಲಿಗೆ ಬೀಳಲು ಪ್ರಯತ್ನಸಿದ್ದಾನೆ. ಆದರೆ, ಕೋವಿಡ್​-19 ನಿಯಮಾವಳಿಗಳಿರುವುದರಿಂದ ರೋಹಿತ್ ಅಭಿಮಾನಿಯಿಂದ ದೂರ ಸರಿದಿದ್ದಾರೆ. ಸ್ವಲ್ಪ ದೂರದಿಂದಲೇ ನಮಸ್ಕರಿಸಿದ್ದಾನೆ.

ಈ ಘಟನೆಯಿಂದ ವಿಚಲಿತರಾದ ಭದ್ರತಾ ಸಿಬ್ಬಂದಿ ಆತನನ್ನು ಹಿಡಿಯಲು ತಕ್ಷಣ ಮೈದಾನಕ್ಕೆ ನುಗ್ಗಿದ್ದಾರೆ. ಈ ಘಟನೆ ಪಂದ್ಯವನ್ನು ನೋಡುತ್ತಿದ್ದ ವೀಕ್ಷಕರ ಮೊಬೈಲ್​ನಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಈ ಹಿಂದೆ ಧೋನಿ, ವೀರೇಂದ್ರ ಸೆಹ್ವಾಗ್​ ಹಾಗೂ ಸಚಿನ್ ಬ್ಯಾಟಿಂಗ್ ಮಾಡುವಾಗಲೂ ಈ ತರಹದ ಘಟನೆ ನಡೆದಿವೆ. ಈ ಹಿಂದೆಯೂ ರೋಹಿತ್ ಅಭಿಮಾನಿಗಳು ಹಲವು ಬಾರಿ ಮೈದಾನಕ್ಕೆ ನುಗ್ಗಿ ಕೈಕುಲುಕಿದ ಮತ್ತು ಕಾಲಿಗೆ ಬಿದ್ದ ಹಲವು ಪ್ರಸಂಗ ನಡೆದಿದೆ. ಆದರೆ, ಕೋವಿಡ್ ಪ್ರೋಟೋಕಾಲ್​ಗಳಿದ್ದರೂ ಮೈದಾನಕ್ಕೆ ನುಗ್ಗಿದ್ದರಿಂದ ಆ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡಿದಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ:ಕಿವೀಸ್​ ವಿರುದ್ಧ ಕ್ಲೀನ್​ ಸ್ವೀಪ್ ಸಾಧಿಸುವ ಗುರಿಯಲ್ಲಿ ರೋಹಿತ್ ಪಡೆ: ಬೆಂಚ್​ ಕಾಯ್ದಿರುವ ಆಟಗಾರರಿಗೆ ಅವಕಾಶ ಸಾಧ್ಯತೆ

ABOUT THE AUTHOR

...view details