ಮುಂಬೈ: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 3 ವಿಕೆಟ್ಗಳ ಅಂತರದ ಗೆಲುವು ದಾಖಲಿಸಿದೆ. ಈ ಮೂಲಕ 15ನೇ ಆವೃತ್ತಿ ಐಪಿಎಲ್ನಲ್ಲಿ ಶುಭಾರಂಭ ಮಾಡಿದೆ. ತಂಡ ಒತ್ತಡಕ್ಕೊಳಗಾಗಿ ವಿಕೆಟ್ ಕಳೆದುಕೊಳ್ಳುತ್ತಿದ್ದ ಸಂದರ್ಭದಲ್ಲೂ ದಿನೇಶ್ ಕಾರ್ತಿಕ್ ಅವರನ್ನ ಬ್ಯಾಟ್ ಮಾಡಲು ಕಳುಹಿಸುವ ಬದಲಾಗಿ ಕೊನೆ ಕ್ಷಣದಲ್ಲಿ ಮೈದಾನಕ್ಕೆ ಕಳುಹಿಸಿರುವ ಹಿಂದಿನ ರಹಸ್ಯವನ್ನ ಕ್ಯಾಪ್ಟನ್ ಡುಪ್ಲೆಸಿಸ್ ಹೊರಹಾಕಿದ್ದಾರೆ.
ಧೋನಿಯಷ್ಟೇ ಕೂಲ್ ದಿನೇಶ್ ಕಾರ್ತಿಕ್: ಕೊನೆ ಕ್ಷಣದಲ್ಲಿ ಬ್ಯಾಟ್ ಮಾಡಲು ಕಳುಹಿಸಿದ ರಹಸ್ಯವೇನು? - ರಾಯಲ್ ಚಾಲೆಂಜರ್ಸ್ ಬೆಂಗಳೂರು
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೋಲ್ಕತ್ತಾ ವಿರುದ್ಧ 3 ವಿಕೆಟ್ಗಳ ಗೆಲುವು ದಾಖಲು ಮಾಡಿದೆ. ಕೊನೆ ಕ್ಷಣದಲ್ಲಿ 7 ಎಸೆತಗಳಲ್ಲಿ 14ರನ್ಗಳಿಕೆ ಮಾಡಿರುವ ದಿನೇಶ್ ಕಾರ್ತಿಕ್ ಬಗ್ಗೆ ಡುಪ್ಲೆಸಿಸ್ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
ಪಂದ್ಯದ ಕೊನೆಯಲ್ಲಿ ದಿನೇಶ್ ಕಾರ್ತಿಕ್ ಅವರ ಅನುಭವ ನಮಗೆ ಸಹಾಯ ಮಾಡಿತು. ತಾಳ್ಮೆಯಿಂದ ಇನ್ನಿಂಗ್ಸ್ ಕಟ್ಟಿದ ಅವರು, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆಂದು ತಿಳಿಸಿದ್ದಾರೆ. ರನ್ ಹಾಗೂ ಎಸೆತಗಳ ನಡುವೆ ಹೆಚ್ಚಿನ ಅಂತರವಿರಲಿಲ್ಲ. ಮೇಲಿಂದ ಮೇಲೆ ವಿಕೆಟ್ ಕಳೆದುಕೊಳ್ಳುತ್ತಿದ್ದ ಕಾರಣ, ದಿನೇಶ್ ಕಾರ್ತಿಕ್ ಅವರ ಅನುಭವ ಕೊನೆ ಕ್ಷಣದಲ್ಲಿ ಸಹಾಯಕ್ಕೆ ಬರುತ್ತದೆ ಎಂಬ ಕಾರಣಕ್ಕಾಗಿ ಅವರನ್ನ ಬ್ಯಾಟ್ ಮಾಡಲು ಕಳುಹಿಸಿರಲಿಲ್ಲ ಎಂದಿದ್ದಾರೆ.
ಧೋನಿ ಜೊತೆ ಕಾರ್ತಿಕ್ ಹೋಲಿಕೆ: ದಿನೇಶ್ ಕಾರ್ತಿಕ್ ಯಾವಾಗಲೂ ಶಾಂತರಾಗಿರುತ್ತಾರೆ. ತಾಳ್ಮೆಯಿಂದಲೇ ಇನ್ನಿಂಗ್ಸ್ ಕಟ್ಟುವ ಅವರು, ಕೊನೆಯ ಐದು ಓವರ್ಗಳಲ್ಲಿ ಧೋನಿಯಷ್ಟೇ ಕೂಲ್ ಆಗಿರುತ್ತಾರೆ ಎಂದು ತಿಳಿಸಿದ್ದಾರೆ. 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿದ್ದ ದಿನೇಶ್ ಕಾರ್ತಿಕ್ ನಿನ್ನೆಯ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಕಣಕ್ಕಿಳಿದು 7 ಎಸೆತಗಳಲ್ಲಿ ಅಜೇಯ 14ರನ್ಗಳಿಕೆ ಮಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.