ಕರ್ನಾಟಕ

karnataka

ETV Bharat / sports

Exclusive: ಕೊಹ್ಲಿ ತಂಡದ ಸಂಯೋಜನೆ ಅತ್ಯುತ್ತಮವಾಗಿದೆ: ಅಶ್ವಿನ್ ಕೈಬಿಟ್ಟ ನಿರ್ಧಾರ ಸಮರ್ಥಿಸಿಕೊಂಡ ಕೈಫ್​ - India vs England test series

ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಕಾರಣ ಮೊದಲ ಟೆಸ್ಟ್​ನಲ್ಲಿ ರವೀಂದ್ರ ಜಡೇಜಾ ಅವರನ್ನು ಅಶ್ವಿನ್​ ಬದಲಾಗಿ ಆಯ್ಕೆ ಮಾಡಲಾಗಿತ್ತು. ಕೈಫ್​ ಕೂಡ ಈ ವಿಚಾರದಲ್ಲಿ ಕೊಹ್ಲಿ ನಿರ್ಧಾರ ಸರಿಯಾಗಿದೆ ಎಂದು ಭಾರತದ ನಾಯಕನನ್ನು ಪ್ರಶಂಸಿಸಿದ್ದಾರೆ.

Mohammad Kaif
ಕೊಹ್ಲಿ ನಾಯಕತ್ವವನ್ನು ಪ್ರಶಂಸಿಸಿದ ಮೊಹಮ್ಮದ್ ಕೈಫ್

By

Published : Aug 12, 2021, 4:46 PM IST

ಹೈದರಾಬಾದ್​: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಅನುಭವಿ ಸ್ಪಿನ್ನರ್ ರವಿಚಂದ್ರನ್​ ಅಶ್ವಿನ್ ಅವರನ್ನು ತಂಡದಿಂದ ಕೈಬಿಟ್ಟು ತಂಡದ ಆಯ್ಕೆಯ ವಿಚಾರದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್​ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಗಾಯದ ಕಾರಣ ಹೊರತುಪಡಿಸಿ ಯಾವುದೇ ಕಾರಣಕ್ಕೂ ಈ ಸಂಯೋಜನೆಯನ್ನು ಬೇರ್ಪಡಿಸಬಾರದೆಂದು ಸಲಹೆ ನೀಡಿದ್ದಾರೆ.

ನಾಟಿಂಗ್​ಹ್ಯಾಮ್​ನಲ್ಲಿ ನಡೆದಿದ್ದ ಮೊದಲ ಟೆಸ್ಟ್​ನಲ್ಲಿ ಟೀಮ್ ಮ್ಯಾನೇಜ್​ಮೆಂಟ್​ ಅನುಭವಿ ರವಿಚಂದ್ರನ್ ಅಶ್ವಿನ್​ ಅವರನ್ನು ಆಯ್ಕೆ ಮಾಡದಿದ್ದದ್ದು ಚರ್ಚೆಗೀಡು ಮಾಡಿತ್ತು. ಆದರೆ, ಮೊಹಮ್ಮದ್​ ಕೈಫ್​ ಆ ನಿರ್ಧಾರದಿಂದ ಕೊಹ್ಲಿ ಉತ್ತಮ ಸ್ಥಾನದಲ್ಲಿದ್ದಾರೆ ಎಂದು ಹೇಳಿದ್ದಾರೆ.

ಕೊಹ್ಲಿ ತಾವೂ ಉತ್ತಮವಾದ ತಂಡದ ರಚನೆಯನ್ನು ಹೊಂದಿದ್ದೇವೆ ಎಂದು ಹೇಳಿದ್ದಾರೆ. ಅವರು 4 ವೇಗದ ಬೌಲರ್​ ಮತ್ತು ಒಬ್ಬ ಸ್ಪಿನ್ನರ್​ ಜೊತೆಯಾಗಿ ಆಡುವುದಕ್ಕೆ ನಿರ್ಧರಿಸಿದ್ದಾರೆ. ಹಾಗಾಗಿ ಏಕೈಕ ಸ್ಪಿನ್ನರ್​ ಆಗಿ ರವೀಂದ್ರ ಜಡೇಜಾ ಅವರನ್ನು ಆಯ್ಕೆ ಮಾಡಿರುವುದು ನಿಜಕ್ಕೂ ಉತ್ತಮ ನಿರ್ಧಾರ. ಏಕೆಂದರೆ ಆತ ರನ್​ಗಳಿಸಬಲ್ಲ, ಬೌಲಿಂಗ್ ಮಾಡಬಲ್ಲ ಜೊತೆಗೆ ಉತ್ತಮ ಫೀಲ್ಡರ್​. ಹಾಗಾಗಿ ಕೊಹ್ಲಿ ತಮ್ಮ ಆಯ್ಕೆಯ ವಿಚಾರದಲ್ಲಿ ಸಂತೋಷದಿಂದಿದ್ದಾರೆ ಎಂದು ಕೈಫ್​ ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಭಾರತದ ಪರ ಅಶ್ವಿನ್​ 2.80 ಸರಾಸರಿಯಲ್ಲಿ 413 ವಿಕೆಟ್​ ಪಡೆದಿದ್ದಾರೆ. ಅವರು ಪ್ರಸ್ತುತ ಐಸಿಸಿ ಬೌಲಿಂಗ್ ಶ್ರೇಯಾಂಕದಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದಂತಹ ವೇಗಿಗಳಿಗೆ ನೆರವಾಗುವ ಪಿಚ್​ನಲ್ಲಿ ಅವರು ಟೆಸ್ಟ್​ ಸ್ಪೆಷಲಿಸ್ಟ್​ ಸ್ಟಿವ್ ಸ್ಮಿತ್ ವಿಕೆಟ್​ ಪಡೆದಿದ್ದರು. ಇನ್ನು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲೂ 4 ವಿಕೆಟ್ ಪಡೆದಿದ್ದರು. ಅಲ್ಲದೇ ಇಂಗ್ಲೆಂಡ್​ ಟೆಸ್ಟ್​ ಸರಣಿಗೂ ಮುನ್ನ ಕೌಂಟಿ ಪಂದ್ಯವನ್ನಾಡಿ 8 ವಿಕೆಟ್ ಪಡೆದು ಮಿಂಚಿದ್ದರು. ಆದರೆ, ಅವರಿಗೆ ಮೊದಲ ಟೆಸ್ಟ್​ನಲ್ಲಿ ಅವಕಾಶ ನೀಡದಿದ್ದದ್ದೂ ಕ್ರೀಡಾಭಿಮಾನಿಗಳಿಗೆ ಆಶ್ಚರ್ಯ ತಂದಿತ್ತು.​

ಆದರೆ, ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಕಾರಣ ರವೀಂದ್ರ ಜಡೇಜಾರನ್ನು ಅಶ್ವಿನ್​ ಬದಲಾಗಿ ಆಯ್ಕೆ ಮಾಡಲಾಗಿತ್ತು. ಕೈಫ್​ ಕೂಡ ಈ ವಿಚಾರದಲ್ಲಿ ಕೊಹ್ಲಿ ನಿರ್ಧಾರ ಸರಿಯಾಗಿದೆ ಎಂದು ಭಾರತದ ನಾಯಕನನ್ನು ಪ್ರಶಂಸಿಸಿದ್ದಾರೆ.

ಸಾಮಾನ್ಯವಾಗಿ, ಮ್ಯಾನೇಜ್​ಮೆಂಟ್​ ಅತ್ಯುತ್ತಮ ತಂಡವನ್ನು ಆಯ್ಕೆಮಾಡಲು ಪ್ರಯತ್ನಿಸುತ್ತದೆ. ಕಳೆದ ಪಂದ್ಯದಲ್ಲೂ ಕೂಡ ಅದೇ ಆಗಿದೆ. ಎಲ್ಲರೂ ಕೂಡ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ಹಾಗಾಗಿ ಕೊಹ್ಲಿ ಕಳೆದ ಪಂದ್ಯದಲ್ಲಿ ಅತ್ಯುತ್ತಮ ತಂಡವನ್ನು ಆಯ್ಕೆ ಮಾಡಿದ್ದಾರೆ ಎಂದು ಕೈಫ್​ ತಿಳಿಸಿದ್ದಾರೆ.

ಇದನ್ನು ಓದಿ:ಭಾರತ ವಿರುದ್ಧದ ಸೀಮಿತ ಓವರ್​ಗಳ ಸರಣಿ ಆಯೋಜಿಸಿ ಶ್ರೀಲಂಕಾ ಬೋರ್ಡ್​ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ?

ABOUT THE AUTHOR

...view details