ಕರ್ನಾಟಕ

karnataka

ETV Bharat / sports

ರಿಂಕು ಸಿಂಗ್​ ಭಾರತದ ಫ್ಯೂಚರ್​ ಫಿನಿಶರ್​: ಸಬಾ ಕರೀಮ್ ವಿಶ್ವಾಸ - Indian Premier League

ಮುಂಬರುವ ವರ್ಷಗಳಲ್ಲಿ ಭಾರತೀಯ ಬ್ಯಾಟಿಂಗ್ ಯೂನಿಟ್‌ನ ಕೆಳ ಕ್ರಮಾಂಕದಲ್ಲಿ ರಿಂಕು ಸಿಂಗ್​ ಅವರನ್ನು ಫಿನಿಶರ್ ಆಗಿ ಪರಿಗಣಿಸುತ್ತಿದೆ ಎಂದು ಮಾಜಿ ಭಾರತೀಯ ಕ್ರಿಕೆಟಿಗ ಸಬಾ ಕರೀಮ್ ಈಟಿವಿ ಭಾರತ್‌ನ ನಿಶಾದ್ ಬಾಪಟ್ ಅವರೊಂದಿಗಿನ ಸಂದರ್ಶನದಲ್ಲಿ ತಿಳಿಸಿದ್ದಾರೆ.

Saba Karim
Saba Karim

By ETV Bharat Karnataka Team

Published : Dec 2, 2023, 10:58 PM IST

ಹೈದರಾಬಾದ್: ಭಾರತ ತಂಡವು ರಿಂಕು ಸಿಂಗ್ ಅವರನ್ನು ರಾಷ್ಟ್ರೀಯ ತಂಡಕ್ಕೆ ಫಿನಿಶರ್ ಆಗಿ ನೋಡುತ್ತಿದೆ ಮತ್ತು ಅವರು ಮೆನ್ ಇನ್ ಬ್ಲೂಗಾಗಿ ತಮ್ಮ ಪಾತ್ರವನ್ನು ಸಾಕಷ್ಟು ಸಮರ್ಥವಾಗಿ ನಿರ್ವಹಿಸುತ್ತಾರೆ ಎಂದು ಭಾರತದ ಮಾಜಿ ವಿಕೆಟ್​ ಕೀಪರ್​ ಸಬಾ ಕರೀಮ್ ಅಭಿಪ್ರಾಯಪಟ್ಟಿದ್ದಾರೆ.

ಭಾರತವು ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ದ್ವಿಪಕ್ಷೀಯ ಸರಣಿಯನ್ನು ಆಡುತ್ತಿದೆ ಮತ್ತು 3-1 ರಿಂದ ಗೆದ್ದುಕೊಂಡಿದೆ. ರಿಂಕು ಸಿಂಗ್ ಅವರು ಭಾರತೀಯ ತಂಡದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ ಮತ್ತು ಸರಣಿಯ ಎರರು ಮತ್ತು 3ನೇ ಪಂದ್ಯದಲ್ಲಿ ಅಗತ್ಯ ಇನ್ನಿಂಗ್ಸ್​ ಆಡಿ ತಂಡಕ್ಕೆ ಒತ್ತಡದ ಸಮಯದಲ್ಲಿ ನೆರವಾಗಿದ್ದಾರೆ.

ದಕ್ಷಿಣ ಆಫ್ರಿಕಾ ಸರಣಿ ರಿಂಕುಗೆ ಸವಾಲು:ರಿಂಕು ಸಿಂಗ್ ಅವರ ಈ ಫಿನಿಶರ್ ಸ್ಥಾನದ ಪ್ರದರ್ಶನದ ಬಗ್ಗೆ ಮಾತನಾಡಿದ ಜಿಯೋಸಿನಿಮಾ ಮತ್ತು ಸ್ಪೋರ್ಟ್ಸ್ 18 ಎಕ್ಸ್‌ಪರ್ಟ್ ಸಬಾ ಕರೀಮ್, ಭಾರತೀಯ ತಂಡವು ರಿಂಕು ಸಿಂಗ್ ಅವರನ್ನು ಫಿನಿಶರ್ ಆಗಿ ನೋಡುತ್ತಿದೆ ಮತ್ತು ಅವರು ಮೊದಲು ಬ್ಯಾಟಿಂಗ್ ಮಾಡುವಾಗ ಮತ್ತು ಸವಾಲಿನ ಮೊತ್ತವನ್ನು ಬೆನ್ನಟ್ಟುವಾಗ ಅವರು ಅದ್ಭುತವಾಗಿದ್ದಾರೆ. ಮುಂದೆ ಕೆಲವು ಕಠಿಣ ಸವಾಲುಗಳಿವೆ. ದಕ್ಷಿಣ ಆಫ್ರಿಕಾ ಸರಣಿ ರಿಂಕುಗೆ ದೊಡ್ಡ ಪರೀಕ್ಷೆಯಾಗಿದೆ. ಏಕೆಂದರೆ ಅಲ್ಲಿನ ಪರಿಸ್ಥಿತಿ ತವರಿನ ಮೈದಾನಕ್ಕಿಂತ ಭಿನ್ನವಾಗಿರುತ್ತದೆ" ಎಂದಿದ್ದಾರೆ.

ಸೂರ್ಯ ಉತ್ತಮ ನಾಯಕ:ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಮುಂಬೈಕರ್ ಸೂರ್ಯಕುಮಾರ್ ಯಾದವ್ ಅವರು ಮಾಡುತ್ತಿರುವ ನಾಯಕತ್ವದ ಬಗ್ಗೆ ಮಾತನಾಡಿದ ಅವರು, "ಸೂರ್ಯಕುಮಾರ್ ಮೈದಾನದಲ್ಲಿ ಶಾಂತವಾಗಿದ್ದಾರೆ. ಅದು ಉದಯೋನ್ಮುಖ ನಾಯಕನ ವಿಶಿಷ್ಟ ಲಕ್ಷಣವಾಗಿದೆ. ನಾಯಕತ್ವ ಒಟ್ಟಾರೆಯಾಗಿ ಹೊಸ ಆಯಾಮವಾಗಿದೆ. ನೀವು ರಾಜ್ಯ ಮಟ್ಟದ ನಾಯಕತ್ವದಿಂದ ಅಂತಾರಾಷ್ಟ್ರೀಯ ನಾಯಕತ್ವಕ್ಕೆ ಬಂದಾಗ ಡೈನಾಮಿಕ್ ಬದಲಾಗುತ್ತದೆ. ಸ್ವಲ್ಪ ಸಮಯ ತೆಗೆದುಕೊಳ್ಳಬೇಕು ಮತ್ತು ಅವರಿಗೆ ತುಂಬಾ ಕಲಿಕೆ ಬೇಕಿದೆ. ಅವರು ಬ್ಯಾಟಿಂಗ್‌ನಲ್ಲೂ ಪ್ರಭಾವಶಾಲಿಯಾಗಿದ್ದಾರೆ ಮತ್ತು ನಾಯಕನು ತನ್ನ ಪ್ರಾಥಮಿಕ ಕೌಶಲ್ಯದೊಂದಿಗೆ ಉತ್ತಮವಾಗಿ ಕಾಣುತ್ತಾರೆ"ಎಂದು ಅಭಿಪ್ರಾಯ ತಿಳಿಸಿದರು.

ಪ್ರಸ್ತುತ ಟಿ20​ ತಂಡ ಆಸ್ಟ್ರೇಲಿಯಾ ವಿರುದ್ಧದ ಬಲಶಾಲಿ: "ಸರಣಿಯ ಆರಂಭದಲ್ಲಿ, ಈ ಯುವ ಭಾರತೀಯ ತಂಡವು ದ್ವಿಪಕ್ಷೀಯ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಅಗ್ರಸ್ಥಾನದಲ್ಲಿದೆ ಎಂದು ನಾನು ಭವಿಷ್ಯ ನುಡಿದಿದ್ದೆ. ನನ್ನ ಅಭಿಪ್ರಾಯವನ್ನು ಇನ್ನಷ್ಟು ಪುಷ್ಟೀಕರಿಸುತ್ತೇನೆ. 3ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಪುಟಿದೇದ್ದರೂ ಭಾರತ ಗೆಲುವು ದಾಖಲಿಸುವ ಮೆಚ್ಚಿನ ತಂಡವಾಗಿದೆ. ಹೊಸ ನಾಯಕನನ್ನು ಹೊಂದಿರುವ ಯುವ ತಂಡ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿದೆ" ಎಂದು ಸಬಾ ಹೇಳುತ್ತಾರೆ.

ಆಯಾ ಭಾಷೆಯಲ್ಲಿ ವೀಕ್ಷಕ ವಿವರಣೆ ಬಗ್ಗೆ ಮಾತನಾಡಿದ ಸಬಾ ಕರೀಮ್, "ಪ್ರತಿಯೊಬ್ಬರೂ ತಮ್ಮ ನೆಚ್ಚಿನ ಕ್ರೀಡೆಯನ್ನು ಮಾತೃಭಾಷೆಯಲ್ಲಿ ವೀಕ್ಷಿಸಲು ಉತ್ಸುಕರಾಗಿದ್ದಾರೆ. ಇದು ಇಂಡಿಯನ್ ಪ್ರೀಮಿಯರ್ ಲೀಗ್ ಋತುವಿನಲ್ಲಿ ಪ್ರಾರಂಭವಾಯಿತು ಮತ್ತು ಪ್ರೇಕ್ಷಕರು ಇದನ್ನು ಮೆಚ್ಚಿಕೊಂಡಿದ್ದಾರೆ. ಎಲ್ಲ ಭಾಷೆಗಳಲ್ಲಿ ಆಟವನ್ನು ವಿವರಿಸಬಹುದಾಗಿದೆ ಅವುಗಳು ವೀಕ್ಷಕರಿಗೆ ಹೆಚ್ಚು ಅರ್ಥವಾಗುತ್ತದೆ. JioCinema ಈ ಎಲ್ಲಾ ಭಾಷೆಗಳನ್ನು ಒಟ್ಟಿಗೆ ತರುತ್ತಿರುವುದು ಸಂತಸದ ವಿಷಯ. ಡಿಜಿಟಲ್ ವೇದಿಕೆಯಲ್ಲಿ ಇದು ಸಾಧ್ಯವಾಗುತ್ತಿದೆ"ಎಂದು ಸಬಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ನಾಳೆ 5ನೇ ಟಿ-20: ಔಪಚಾರಿಕ ಪಂದ್ಯದಲ್ಲಿ ಸುಂದರ್​, ದುಬೆಗೆ ಅವಕಾಶದ ನಿರೀಕ್ಷೆ

ABOUT THE AUTHOR

...view details