ಕರ್ನಾಟಕ

karnataka

ETV Bharat / sports

ಹಾರ್ದಿಕ್​ ಪಾಂಡ್ಯ ಮಧ್ಯಮ ಕ್ರಮಾಂಕದಲ್ಲಿ ಅಪಾಯಕಾರಿ ಆಟಗಾರ : ರಸಲ್​​ ಅರ್ನಾಲ್ಡ್ - ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಹಾಗೂ ಟಿ20 ಸರಣಿ

ಕಳೆದ ಎರಡು ವರ್ಷಗಳಿಂದ ಗಾಯದ ಸಮಸ್ಯೆಯಿಂದಾಗಿ ಪಾಂಡ್ಯಗೆ ಟೀಮ್​ ಇಂಡಿಯಾದಲ್ಲಿ ಸ್ಥಾನ ಅಷ್ಟೊಂದು ಭದ್ರವಾಗಿಲ್ಲ. ಗಾಯದ ಸಮಸ್ಯೆಯಿಂದಾಗಿ ಅವರಿಗೆ ಸೂಕ್ತ ಸ್ಥಾನವನ್ನೂ ನೀಡಲು ಸಾಧ್ಯವಾಗಿಲ್ಲ. ತಂಡದಲ್ಲಿ ಆಲ್​ ರೌಂಡರ್​ ಆಗಿ ಗುರುತಿಸಿಕೊಂಡಿರುವ ಅವರು ಗಾಯದ ಸಮಸ್ಯೆಯಿಂದಾಗಿ ಬೌಲಿಂಗ್​ ಮಾಡಲು ಸಾಧ್ಯವಾಗಿಲ್ಲ.

ರುಸ್ಸೇಲ್ ಅರ್ನಾಲ್ಡ್
ರುಸ್ಸೇಲ್ ಅರ್ನಾಲ್ಡ್

By

Published : Jul 17, 2021, 4:34 PM IST

ಕೊಲಂಬೊ: ನಾಳೆಯಿಂದ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಹಾಗೂ ಟಿ-20 ಸರಣಿ ನಡೆಯಲಿದ್ದು, ಈ ಸರಣಿಗಳಿಗಾಗಿ ಭಾರತ ಮತ್ತು ಶ್ರೀಲಂಕಾ ತಂಡಗಳು ಭರ್ಜರಿ ತಯಾರಿ ನಡೆಸಿವೆ. ಭಾರತದ ಬಿ ತಂಡ ಎಂದೆ ಕರೆಯಲಾಗುತ್ತಿರುವ ಧವನ್​​ ನಾಯಕತ್ವದ ಟೀಮ್​ ಇಂಡಿಯಾದಲ್ಲಿ ಯುವ ಆಟಗಾರರಿಗೆ ಹೆಚ್ಚಿನ ಮಣೆ ಹಾಕಲಾಗಿದೆ.

ಸರಣಿಗೂ ಮುನ್ನ ವರ್ಚುಯಲ್ ಪತ್ರಿಕಾಗೋಷ್ಠಿಯಲ್ಲಿ ಶ್ರೀಲಂಕಾದ ಮಾಜಿ ಕ್ರಿಕೆಟಿಗ ರಸೆಲ್​ ಅರ್ನಾಲ್ಡ್ ಮಾತನಾಡಿದ್ದು, ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್​ ಪಾಂಡ್ಯ ಅತ್ಯುತ್ತಮ ಆಟಗಾರ. ಮಿಡಲ್​ ಆರ್ಡರ್​ನಲ್ಲಿ ಆಡಲು ಅವಕಾಶ ನೀಡಿದರೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

ಕಳೆದ ಎರಡು ವರ್ಷಗಳಿಂದ ಗಾಯದ ಸಮಸ್ಯೆಯಿಂದಾಗಿ ಪಾಂಡ್ಯಗೆ ಟೀಮ್​ ಇಂಡಿಯಾದಲ್ಲಿ ಸ್ಥಾನ ಅಷ್ಟೊಂದು ಭದ್ರವಾಗಿಲ್ಲ. ಗಾಯದ ಸಮಸ್ಯೆಯಿಂದಾಗಿ ಅವರಿಗೆ ಸೂಕ್ತ ಸ್ಥಾನವನ್ನೂ ನೀಡಲು ಸಾಧ್ಯವಾಗಿಲ್ಲ. ತಂಡದಲ್ಲಿ ಆಲ್​ ರೌಂಡರ್​ ಆಗಿ ಗುರುತಿಸಿಕೊಂಡಿರುವ ಅವರು ಗಾಯದ ಸಮಸ್ಯೆಯಿಂದಾಗಿ ಬೌಲಿಂಗ್​ ಮಾಡಲು ಸಾಧ್ಯವಾಗಿಲ್ಲ.

ಈ ಬಗ್ಗೆ ಮಾತನಾಡಿರುವ ರಸೆಲ್​ ಅರ್ನಾಲ್ಡ್, ಬೆನ್ನಿನ ಶಸ್ತ್ರಚಿಕಿತ್ಸೆಯ ನಂತರ ಅವರ ಸ್ಥಾನ ತುಸು ಅನಿಶ್ಚಿತವಾಗಿದೆ. ಆದರೆ, ಅವರು ಬ್ಯಾಟಿಂಗ್​ನಲ್ಲಿ ಅಪಾಯಕಾರಿ. ಹಾಗಾಗಿ ತಂಡದ ಕ್ಯಾಪ್ಟನ್ ಮತ್ತು ಮ್ಯಾನೇಜ್‌ಮೆಂಟ್ ಅವರಿಗೆ ಬ್ಯಾಟಿಂಗ್​ನಲ್ಲಿಯೇ ಹೆಚ್ಚಿನ ಜವಾಬ್ದಾರಿ ನೀಡುವುದು ಉತ್ತಮ ಎಂದು ಅವರು ಸಲಹೆ ನೀಡಿದ್ದಾರೆ.

ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಬೌಲಿಂಗ್ ಮಾಡಲಿಲ್ಲ, ಆದರೂ ಅವರು ತಂಡದ ಪ್ರಮುಖ ಆಟಗಾರಾಗಿದ್ದರು. ಇಂಗ್ಲೆಂಡ್ ವಿರುದ್ಧ, ಅವರು ಕೆಲವು ಓವರ್ಗಳನ್ನು ಬೌಲ್ ಮಾಡಿದರು. ಅಲ್ಲಿ ಅವರಿಂದ ನಿರೀಕ್ಷೆಯ ಆಟ ಹೊರಬರಲಿಲ್ಲ, ಆದರೂ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿತ್ತು.

ಮುಂಬರುವ ಟಿ- 20 ವಿಶ್ವಕಪ್​ನಲ್ಲಿ ಹಾರ್ದಿಕ್​ ಪಾಂಡ್ಯರಿಂದ ಉತ್ತಮ ಪ್ರದರ್ಶನ ಬರುತ್ತದೆ ಎನ್ನುವ ನಂಬಿಕೆ ವಿರಾಟ್​ ಕೊಹ್ಲಿಯಲ್ಲಿದೆ. ಹಾಗೇಯೆ ಈ ಸರಣಿಯಲ್ಲಿ ಶಿಖರ್ ಧವನ್ ಕೂಡಾ ಅದೇ ನಂಬಿಕೆಯನ್ನ ಇಟ್ಟಿಕೊಂಡಿದ್ದಾರೆ ಎಂದರು.

ಇದನ್ನೂ ಓದಿ : ಧವನ್ ಅಲ್ಲ, ಹಾರ್ದಿಕ್ ಪಾಂಡ್ಯ ಭಾರತ ತಂಡದ ನಾಯಕನಾಗಬೇಕಿತ್ತು: ಪಾಂಡ್ಯ ಕೋಚ್

ABOUT THE AUTHOR

...view details