ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಯುವಿಕೆನ್ ಫೌಂಡೇಶನ್‌ನಿಂದ ನಿಜಾಮಾಬಾದ್‌ನ ಸರ್ಕಾರಿ ಆಸ್ಪತ್ರೆಗೆ 120 ಹಾಸಿಗೆಗಳ ತೀವ್ರ ನಿಗಾ ಘಟಕವನ್ನು (ಐಸಿಯು) ಸ್ಥಾಪಿಸಿದ್ದಾರೆ. ಮಾಜಿ ಕ್ರಿಕೆಟಿಗ ಯುವಿ ಹಾಗೂ ನಿಜಾಮಾಬಾದ್ ಜಿಲ್ಲಾಧಿಕಾರಿ ಆದಿನಾರಾಯಣ ಅವರು 120 ಹಾಸಿಗೆಗಳ ಐಸಿಯು ಬೆಡ್‌ಗಳನ್ನು ವರ್ಚುವಲ್ ಮೂಲಕ ಉದ್ಘಾಟಿಸಿದರು.
ಮಿಡಿದ ಮನ: ಸರ್ಕಾರಿ ಆಸ್ಪತ್ರೆಗೆ 120 ICU ಬೆಡ್ ವ್ಯವಸ್ಥೆ ಕಲ್ಪಿಸಿದ ಯುವರಾಜ್ ಸಿಂಗ್
ಸರ್ಕಾರದ ಕೋವಿಡ್ ಹೋರಾಟದಲ್ಲಿ ಕೈ ಜೋಡಿಸಿರುವ ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ನಿಜಾಮಾಬಾದ್ ಸರ್ಕಾರಿ ಆಸ್ಪತ್ರೆಯಲ್ಲಿ 120 ಹಾಸಿಗೆಗಳ ಐಸಿಯು ಸ್ಥಾಪಿಸಿದ್ದು, ಇಂದು ವರ್ಚುವಲ್ ಮೂಲಕ ಉದ್ಘಾಟಿಸಿದ್ದಾರೆ.
ಮಿಡಿದ ಮಾಜಿ ಕ್ರಿಕೆಟರ್ ಮನ; ನಿಜಾಬಾದ್‌ನ ಸರ್ಕಾರಿ ಆಸ್ಪತ್ರೆಗೆ 120 ICU ಬೆಡ್‌ಗಳ ನೆರವು ನೀಡಿದ ಯುವಿ
ಈ ವೇಳೆ ಮಾತನಾಡಿದ ಯುವಿ, ಕೋವಿಡ್ -19 ಗೆ ಸಹಕಾರವನ್ನು ವಿಸ್ತರಿಸುವುದರ ಜೊತೆಗೆ, 2.5 ಕೋಟಿ ರೂ. ಖರ್ಚಿನ ಮೂಲಕ ಸರ್ಕಾರಿ ಆಸ್ಪತ್ರೆಗಳಲ್ಲಿ 1000 ಐಸಿಯು ಹಾಸಿಗೆಗಳನ್ನು ಸ್ಥಾಪಿಸುವ ಉದ್ದೇಶವನ್ನು ಪ್ರತಿಷ್ಠಾನ ಹೊಂದಿದೆ ಎಂದು ಹೇಳಿದರು.
ಇದರ ಭಾಗವಾಗಿ ನಿಜಾಮಾಬಾದ್ ಸರ್ಕಾರಿ ಆಸ್ಪತ್ರೆಯಲ್ಲಿ 120 ಹಾಸಿಗೆಗಳ ಐಸಿಯು ಸ್ಥಾಪಿಸಲಾಗಿದೆ ಎಂದರು. ತೆಲಂಗಾಣ ಗೃಹ ಸಚಿವ ಮೊಹಮ್ಮದ್ ಮಹಮೂದ್ ಅಲಿ, ಯುವಿಕೆನ್ ಫೌಂಡೇಶನ್ ಮೂಲಕ ಯುವರಾಜ್ ಸಿಂಗ್ ಅವರ ಸೇವೆಗಳನ್ನು ಶ್ಲಾಘಿಸಿದರು.