ಕರ್ನಾಟಕ

karnataka

ETV Bharat / sports

"Honeymoon Period Is Over..": ಕೋಚ್​ ದ್ರಾವಿಡ್​, ಟೀಂ ಇಂಡಿಯಾ ವಿರುದ್ಧ ಮಾಜಿ ಕ್ರಿಕೆಟರ್ ಆಕ್ರೋಶ - ಕೋಚ್​​ ರಾಹುಲ್​ ದ್ರಾವಿಡ್​ ಅವರ ಹನಿಮೂನ್​ ಅವಧಿ

ಏಷ್ಯಾಕಪ್​​ನಲ್ಲಿ ಭಾರತದ ಸೋಲುಂಡಿರುವ ವಿಚಾರವಾಗಿ ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಸಬಾ ಕರೀಂ ಮಾತನಾಡಿದ್ದು, ಕೋಚ್ ದ್ರಾವಿಡ್ ಹಾಗೂ ತಂಡದ ವಿರುದ್ಧ ಹರಿಹಾಯ್ದಿದ್ದಾರೆ.

Ex BCCI Selector Saba Karim
Ex BCCI Selector Saba Karim

By

Published : Sep 10, 2022, 9:42 AM IST

ನವದೆಹಲಿ:ಏಷ್ಯಾಕಪ್​ ಟೂರ್ನಾಮೆಂಟ್​​​ನಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನ ನೀಡಿ, ಟೂರ್ನಿಯಿಂದ ಹೊರಬಿದ್ದಿದೆ. ಈ ವಿಚಾರವಾಗಿ ಕೋಚ್​ ರಾಹುಲ್​ ದ್ರಾವಿಡ್ ಹಾಗೂ ಕ್ಯಾಪ್ಟನ್​ ರೋಹಿತ್ ಶರ್ಮಾ ಸೇರಿದಂತೆ ಅನೇಕರ ವಿರುದ್ಧ ಟೀಕೆ ವ್ಯಕ್ತವಾಗುತ್ತಿದೆ. ಇದೇ ವಿಚಾರವಾಗಿ ಮಾತನಾಡಿರುವ ಟೀಂ ಇಂಡಿಯಾ ಮಾಜಿ ಆಟಗಾರ, ಬಿಸಿಸಿಐ ಆಯ್ಕೆ ಸಮಿತಿ ಮಾಜಿ ಸದಸ್ಯ ಸಬಾ ಕರೀಮ್​​ ಕೋಚ್ ರಾಹುಲ್ ದ್ರಾವಿಡ್​ ಹಾಗೂ ತಂಡದ 'ಹನಿಮೂನ್​ ಅವಧಿ' ಮುಗಿದಿದೆ ಎಂದು ಟೀಕಿಸಿದ್ದಾರೆ.

ತಂಡದಲ್ಲಿ ಸಾಕಷ್ಟು ಆತ್ಮಾವಲೋಕನದ ಅಗತ್ಯವಿದೆ. ಕೋಚ್​​ ರಾಹುಲ್​ ದ್ರಾವಿಡ್​ ಅವರ ಹನಿಮೂನ್​ ಅವಧಿ ಮುಕ್ತಾಯಗೊಂಡಿದೆ. ಇದೀಗ ಆಟಗಾರರಿಗೆ ಎಚ್ಚರಿಕೆಯ ಕರೆ ನೀಡಬೇಕಾಗಿದೆ ಎಂದಿದ್ದಾರೆ.

ಇದನ್ನೂ ಓದಿ:ಪಾಕ್​ ದಹನ ಮಾಡಿದ ಲಂಕಾ.. ಫೈನಲ್​​​ಗೂ ಮುನ್ನ ಹೆಚ್ಚಿದ ಆತ್ಮವಿಶ್ವಾಸ

ಅಕ್ಟೋಬರ್​ ಮಧ್ಯದಲ್ಲಿ ಕಾಂಗರೂ ನಾಡಲ್ಲಿ ಮಹತ್ವದ ಟಿ-20 ವಿಶ್ವಕಪ್ ಟೂರ್ನಿ ನಡೆಯಲಿದೆ. ಇದಕ್ಕೂ ಮುಂಚಿತವಾಗಿ ಟಿ20 ಮಾದರಿಯಲ್ಲಿ ನಡೆದ ಏಷ್ಯಾಕಪ್​​​ನಲ್ಲಿ ಭಾರತ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಲೀಗ್​ ಹಂತದಲ್ಲಿ ತಾನು ಆಡಿದ್ದ ಎಲ್ಲ ಪಂದ್ಯದಲ್ಲೂ ಗೆದ್ದಿದ್ದ ರೋಹಿತ್ ಬಳಗ ಸೂಪರ್ ಫೋರ್ ಹಂತದಲ್ಲಿ ಪಾಕ್​ ಹಾಗೂ ಶ್ರೀಲಂಕಾ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿದೆ.

ಇದೇ ವಿಚಾರವನ್ನಿಟ್ಟುಕೊಂಡು ಮಾತನಾಡಿರುವ ಸಬಾ ಕರೀಂ, ದ್ರಾವಿಡ್​​ ಹಾಗೂ ತಂಡದ ಹನಿಮೂನ್​ ಅವಧಿ ಮುಕ್ತಾಯಗೊಂಡಿದೆ. ದ್ರಾವಿಡ್​ ಅವರ ಬಳಿ ತುಂಬಾ ಕಡಿಮೆ ಸಮಯವಿದ್ದು, ಅವರಿಗೆ ಇದೊಂದು ಸಂಕಷ್ಟದ ಸಮಯವಾಗಿದೆ ಎಂದಿದ್ದಾರೆ. ಟಿ-20 ವಿಶ್ವಕಪ್​ ಹಾಗೂ ಮುಂದಿನ ವರ್ಷ ಏಕದಿನ ವಿಶ್ವಕಪ್ ನಡೆಯಲಿದೆ. ಈ ಎರಡು ಮಹತ್ವದ ಈವೆಂಟ್​​​​​ಗಳಲ್ಲಿ ಭಾರತ ಚಾಂಪಿಯನ್​​ ಆಗದಿದ್ದರೆ, ರಾಹುಲ್​ ದ್ರಾವಿಡ್​ ಅವರ ನೇಮಕ ವ್ಯರ್ಥವಾಗುತ್ತದೆ. ಜೊತೆಗೆ ಅವರು ನೀಡಿರುವ ಸಲಹೆಗಳಿಂದ ತೃಪ್ತರಾಗಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

ಸಬಾ ಕರೀಂ ಟೀಂ ಇಂಡಿಯಾ ಪರ ಒಂದು ಟೆಸ್ಟ್ ಹಾಗೂ 34 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಜೊತೆಗೆ ಈ ಹಿಂದೆ ಭಾರತೀಯ ಕ್ರಿಕೆಟ್ ಮಂಡಳಿ ಆಯ್ಕೆ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ABOUT THE AUTHOR

...view details