ನ್ಯೂಜಿಲ್ಯಾಂಡ್ ವಿರುದ್ಧದ 5 ಏಕದಿನ ಪಂದ್ಯಗಳ ಸರಣಿಯಲ್ಲಿ ಮೊದಲ ಮೂರು ಪಂದ್ಯ ಗೆದ್ದು ಸರಣಿ ವಶಪಡಿಸಿಕೊಂಡಿದ್ದ ಟೀಂ ಇಂಡಿಯಾ, ಕಳೆದ ಪಂದ್ಯದಲ್ಲಿ ಮಾತ್ರ ಹೀನಾಯ ಸೋಲು ಅನುಭವಿಸಿತ್ತು. ಸ್ಟಾರ್ ಆಟಗಾರರಿಲ್ಲದೇ ಕಣಕ್ಕಿಳಿಯುತ್ತಿರುವ ಭಾರತಕ್ಕೆ ಕೊನೇ ಏಕದಿನ ಪಂದ್ಯ ಸಾಕಷ್ಟು ಮಹತ್ವದ್ದಾಗಿದ್ದು, ಯುವ ಆಟಗಾರರು ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ಹುಮ್ಮಸ್ಸಿನಲ್ಲಿದ್ದಾರೆ.
ಭಾರತ-ನ್ಯೂಜಿಲ್ಯಾಂಡ್ 5ನೇ ಏಕದಿನ ಪಂದ್ಯ... ಸ್ಟಾರ್ ಆಟಗಾರ ತಂಡದಿಂದ ಔಟ್! - ತಂಡದಿಂದ ಔಟ್
ಮುಂಬೈ: ಭಾರತ, ನ್ಯೂಜಿಲ್ಯಾಂಡ್ ಏಕದಿನ ಸರಣಿಯ ಕೊನೇ ಪಂದ್ಯ ಭಾನುವಾರ ನಡೆಯಲಿದ್ದು, ಅದಕ್ಕಾಗಿ ಎರಡೂ ತಂಡಗಳು ಅಭ್ಯಾಸದಲ್ಲಿ ತೊಡಗಿವೆ. ಆದರೆ ಅಭ್ಯಾಸದ ವೇಳೆ ಬೆನ್ನು ನೋವಿಗೆ ತುತ್ತಾದ ಆಟಗಾರನೊಬ್ಬ ಕೊನೇ ಪಂದ್ಯದಿಂದ ಹೊರ ಬಿದ್ದಿದ್ದಾರೆ.
ಮತ್ತೊಂದು ಕಡೆ ನಾಲ್ಕನೇ ಪಂದ್ಯದ ಸೋಲಿನ ಕಹಿ ಮರೆಯಲು ರೋಹಿತ್ ಶರ್ಮಾಗೂ ಈ ಪಂದ್ಯ ಗೆಲ್ಲುವ ಅವಶ್ಯಕತೆ ಇದ್ದು, ಆ ನಿಟ್ಟಿನಲ್ಲಿ ಟೀಂ ಇಂಡಿಯಾ ಕಸರತ್ತು ನಡೆಸುತ್ತಿದೆ. ಇನ್ನೂ ಕಳೆದ ಪಂದ್ಯದಲ್ಲಿ ಎಲ್ಲಾ ಆಟಗಾರರು ಕಳಪೆ ಬ್ಯಾಟಿಂಗ್ ಮಾಡಿದ್ದು, ಧೋನಿ ಅನುಪಸ್ಥಿತಿಯನ್ನು ನೆನಪಿಸಿತ್ತು, ಸತತ ಅರ್ಧಶತಕ ಬಾರಿಸಿ ಉತ್ತಮ ಫಾರ್ಮ್ನಲ್ಲಿರುವ ಧೋನಿ 5ನೇ ಪಂದ್ಯದಲ್ಲಿ ಮತ್ತೆ ಕಣಕ್ಕಿಳಿಯುವ ಸಾಧ್ಯತೆ ಇದೆ.
ಇನ್ನೂ ಈಗಾಗಲೇ ಸರಣಿ ಸೋತಿರುವ ನ್ಯೂಜಿಲೆಂಡ್ ತಂಡ ಕಳೆದ ಪಂದ್ಯದಲ್ಲಿ ಟೀಂ ಇಂಡಿಯಾವನ್ನು 8 ವಿಕೆಟ್ಗಳಿಂದ ಸೋಲಿಸಿ ಭರ್ಜರಿ ಕಮ್ಬ್ಯಾಕ್ ಮಾಡಿತ್ತು, ಅದೇ ಜೋಶ್ನಲ್ಲಿ ಮತ್ತೊಂದು ಪಂದ್ಯ ಆಡಲು ಸಿದ್ದವಾಗಿದ್ದ ನ್ಯೂಜಿಲ್ಯಾಂಡ್ಗೆ ಅಘಾತ ಉಂಟಾಗಿದೆ, ತಂಡದ ಪ್ರಮುಖ ಆಟಗಾರ ಮಾರ್ಟಿನ್ ಗಪ್ಟಿಲ್ ಅಭ್ಯಾಸದ ವೇಳೆ ಬೆನ್ನು ನೋವಿಗೆ ತುತ್ತಾಗಿ ತಂಡದಿಂದ ಹೊರ ಬಿದ್ದಿದ್ದಾರೆ. ಸದ್ಯ ಇವರ ಸ್ಥಾನಕ್ಕೆ ಕಾಲಿನ್ ಮನ್ರೋರನ್ನ ಮತ್ತೊಮ್ಮೆ ಕರೆಸಿಕೊಳ್ಳಲಾಗುತ್ತಿದೆ.