ಕರ್ನಾಟಕ

karnataka

ETV Bharat / sports

ಐತಿಹಾಸಿಕ ನಿರ್ಧಾರ: ನ್ಯೂಜಿಲ್ಯಾಂಡ್ ಕ್ರಿಕೆಟ್ ಬೋರ್ಡ್​ನಿಂದ ಪುರುಷ - ಮಹಿಳಾ ಕ್ರಿಕೆಟರ್ಸ್​​ಗೆ ಸಮಾನ ವೇತನ - ನ್ಯೂಜಿಲ್ಯಾಂಡ್ ಕ್ರಿಕೆಟ್ ಬೋರ್ಡ್​

ನ್ಯೂಜಿಲ್ಯಾಂಡ್ ಕ್ರಿಕೆಟ್ ಬೋರ್ಡ್​​ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದು, ಇನ್ಮುಂದೆ ಪುರುಷ - ಮಹಿಳಾ ಕ್ರಿಕೆಟರ್ಸ್​​ಗೆ ಸಮಾನ ವೇತನ ನೀಡುವುದಾಗಿ ತಿಳಿಸಿದೆ.

New Zealand Cricket
New Zealand Cricket

By

Published : Jul 5, 2022, 3:23 PM IST

ಕ್ರೈಸ್ಟ್​ಚರ್ಚ್​​​(ನ್ಯೂಜಿಲ್ಯಾಂಡ್​):ನ್ಯೂಜಿಲ್ಯಾಂಡ್ ಕ್ರಿಕೆಟ್​ ಬೋರ್ಡ್​ ಮತ್ತು ಆಟಗಾರರ ಒಕ್ಕೂಟದ ನಡುವೆ ಐದು ವರ್ಷಗಳಿಗೋಸ್ಕರ ಐತಿಹಾಸಿಕ ಒಪ್ಪಂದ ಏರ್ಪಟ್ಟಿದೆ. ಈ ಒಪ್ಪಂದದ ಪ್ರಕಾರ ಇನ್ಮುಂದೆ ಮಹಿಳಾ ಹಾಗೂ ಪುರುಷ ಕ್ರಿಕೆಟರ್ಸ್​​ ಸಮಾನವಾದ ವೇತನ ಪಡೆದುಕೊಳ್ಳಲಿದ್ದಾರೆ.

ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್​​ನಲ್ಲಿ ನ್ಯೂಜಿಲ್ಯಾಂಡ್​ ಪ್ರತಿನಿಧಿಸುವ ಮಹಿಳಾ - ಪುರುಷ ಕ್ರಿಕೆಟರ್ಸ್​​ ಸಮಾನ ವೇತನ ಪಡೆದುಕೊಳ್ಳಲಿದ್ದು, ಇದರ ಜೊತೆಗೆ ಮಹಿಳಾ ಪ್ಲೇಯರ್ಸ್​ ಹೆಚ್ಚಿನ ಪಂದ್ಯಗಳಲ್ಲಿ ಭಾಗಿಯಾಗುವ ಅವಕಾಶ ಪಡೆದುಕೊಳ್ಳಲಿದ್ದಾರೆ ಎಂದು ನ್ಯೂಜಿಲ್ಯಾಂಡ್ ಕ್ರಿಕೆಟ್​ ಬೋರ್ಡ್​ನ ಮುಖ್ಯ ಕಾರ್ಯನಿರ್ವಾಹಕ ಡೇವಿಡ್​ ವೈಟ್​ ಹೇಳಿಕೆ ನೀಡಿದ್ದಾರೆ.

ಇಂತಹ ಮಹತ್ವದ ನಿರ್ಧಾರ ಕೈಗೊಳ್ಳುವಲ್ಲಿ ಶ್ರಮಿಸಿರುವ ಆಟಗಾರರು ಮತ್ತು ಪ್ರಮುಖ ಬೋರ್ಡ್​​ಗಳಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ಡೇವಿಡ್​ ವೈಟ್​ ತಿಳಿಸಿದ್ದಾರೆ. ರಾಷ್ಟ್ರೀಯ ಮಹಿಳಾ ತಂಡದ ಪ್ಲೇಯರ್ಸ್​ ಜೊತೆಗೆ ದೇಶೀಯ ಮಟ್ಟದಲ್ಲಿ ಆಡುವ ಆಟಗಾರರು ಸಮಾನವಾದ ಶುಲ್ಕ ಪಡೆದುಕೊಳ್ಳಲಿದ್ದಾರೆ. ಅಗ್ರ ಶ್ರೇಯಾಂಕದ ಬ್ಯಾಟರ್​​ಗಳ ವೇತನದಲ್ಲೂ ಏರಿಕೆ ಮಾಡಲಾಗಿದೆ.

ಇದನ್ನೂ ಓದಿರಿ:ಆಸ್ಟ್ರೇಲಿಯಾ ಬಳಿಕ ಇಂಗ್ಲೆಂಡ್‌ನಲ್ಲೂ ಕೆಟ್ಟ ಚಾಳಿ; ಭಾರತೀಯ ಅಭಿಮಾನಿಗಳ ಮೇಲೆ ಜನಾಂಗೀಯ ನಿಂದನೆ

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸೋಫಿ ಡಿವೈನ್​, ಪುರುಷರಷ್ಟೇ ಒಪ್ಪಂದದೊಂದಿಗೆ ಇದೀಗ ಗುರುತಿಸಿಕೊಳ್ಳುವುದು ಉತ್ತಮ ಬೆಳವಣಿಗೆ ಎಂದಿದ್ದಾರೆ. ಇದೇ ವೇಳೆ ಪುರುಷರ ತಂಡದ ಕ್ಯಾಪ್ಟನ್ ಕೇನ್​ ವಿಲಿಯಮ್ಸನ್ ಮಾತನಾಡಿ, ಇದೊಂದು ದೊಡ್ಡ ಹೆಜ್ಜೆಯಾಗಿದೆ ಎಂದಿದ್ದಾರೆ.

ABOUT THE AUTHOR

...view details