ಲಂಡನ್: ಕೊರೊನಾ ಕಾರಣದಿಂದ ಅರ್ಧಕ್ಕೆ ಮುಂದೂಡಲ್ಪಟ್ಟಿರುವ ಐಪಿಎಲ್ ಭಾರತದಲ್ಲಿ ಆಯೋಜಿಸಲು ಅನಿಶ್ಚಿತತೆ ಇರುವುದರಿಂದ ಸೆಪ್ಟೆಂಬರ್ ತಿಂಗಳಲ್ಲಿ ತಾವು ನಡೆಸಿಕೊಡುವುದಾಗಿ ಇಂಗ್ಲೀಷ್ ಕೌಂಟಿ ಕ್ಲಬ್ಗಳು ಬಿಸಿಸಿಐಗೆ ಆಫರ್ ನೀಡಿವೆ ಎಂದು ತಿಳಿದುಬಂದಿದೆ.
ಇಎಸ್ಪಿಎನ್ ಕ್ರಿಕ್ಇನ್ಫೋ ವರದಿಯ ಪ್ರಕಾರ ಇಂಗ್ಲೀಷ್ ಕೌಂಟಿ ಕ್ಲಬ್ಗಳು ದ್ವಿತೀಯ ಹಂತದ ಐಪಿಎಲ್ಗೆ ಸೆಪ್ಟೆಂಬರ್ನಲ್ಲಿ ಆತಿಥ್ಯವಹಿಸಲು ತಾವು ಸಿದ್ಧವಿದ್ದೇವೆ ಎಂದು ಇಸಿಬಿಗೆ ಪತ್ರದ ಮೂಲಕ ತಿಳಿಸಿವೆ.
ದ ಕಿಯಾ ಓವೆಲ್ (ಲಂಡನ್), ಎಡ್ಬಸ್ಟನ್ (ಬರ್ಮಿಂಗ್ಹ್ಯಾಮ್) ಮತ್ತು ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ಮತ್ತು ಎಂಸಿಸಿ, ಸರ್ರೆ, ವಾರ್ವಿಕ್ಷೈರ್ ಮತ್ತು ಲ್ಯಾಂಕಾಶೈರ್ ಕ್ಲಬ್ಗಳು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್(ಇಸಿಬಿ)ಗೆ ಪತ್ರ ಬರೆದಿದ್ದು, ಉಳಿದ ಐಪಿಎಲ್ಗೆ ಆತಿಥ್ಯ ನೀಡುವುದಕ್ಕೆ ಬಿಸಿಸಿಐಗೆ ಆಹ್ವಾನ ನೀಡಲು ತಿಳಿಸಿವೆ ಎಂದು ತಿಳಿದುಬಂದಿದೆ.