ಲಂಡನ್: ಭಾರತದಲ್ಲಿ ನಡೆಯಲಿರುವ ವಿಶ್ವಕಪ್ಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದ್ದು, ಆಂಗ್ಲರ ಪ್ರಮುಖ ವೇಗಿ ಜೋಫ್ರಾ ಆರ್ಚರ್ ಮೀಸಲು ಆಟಗಾರನಾಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಗಾಯದಿಂದಾಗಿ ವರ್ಷಗಳ ಕಾಲ ಹೊರಗಿದ್ದ ಅವರು ವಿಶ್ವಕಪ್ ವೇಳೆ ಕಮ್ಬ್ಯಾಕ್ ಮಾಡುವ ನಿರೀಕ್ಷೆಯಿಂದ ಅವರನ್ನು 15 ಜನರ ತಂಡದ ಬದಲಾಗಿ ಮೀಸಲು ಆಟಗಾರನಾಗಿ ಪ್ರಕಟಿಸಲಾಗಿದೆ.
ಇಂದು (ಸೋಮವಾರ) ಇಂಗ್ಲೆಂಡ್‌ನ ರಾಷ್ಟ್ರೀಯ ತಂಡದ ಆಯ್ಕೆಗಾರ ಲ್ಯೂಕ್ ರೈಟ್ 28 ವರ್ಷದ ವೇಗಿ ಆರ್ಚರ್ ತಂಡದೊಂದಿಗೆ ಮೀಸಲು ಆಟಗಾರನಾಗಿ ಪ್ರಯಾಣಿಸಲಿದ್ದಾರೆ ಎಂದು ದೃಢಪಡಿಸಿದ್ದಾರೆ. "ಜೋಫ್ರಾ ಆರ್ಚರ್ ಭಾರತಕ್ಕೆ ತಂಡದೊಂದಿಗೆ ಪ್ರಯಾಣಿಸಲಿದ್ದಾರೆ. ಅವರು ಮೀಸಲುಗಳಲ್ಲಿ ಒಬ್ಬರು ಆದರೆ ನಾವು ಅವರನ್ನು ನೋಡಿಕೊಳ್ಳಬೇಕು, ಅವರ ಪುನರ್ವಸತಿ ಬಗ್ಗೆ ಗಮನಹರಿಸಬೇಕು" ಎಂದು ಸ್ಪಷ್ಟಪಡಿಸಿದ್ದಾರೆ.
ಆಂಗ್ಲ ಬಳಗದಲ್ಲಿ ಇನ್ನೊಂದು ಪ್ರಮುಖ ಬದಲಾವಣೆ ಎಂದರೆ ಯುವ ಆಟಗಾರ ಹ್ಯಾರಿ ಬ್ರೂಕ್ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವುದು. ವಿಶ್ವಕಪ್ ತಯಾರಿಗಾಗಿ ನ್ಯೂಜಿಲೆಂಡ್ ವಿರುದ್ಧ ನಡೆದ ನಾಲ್ಕು ಪಂದ್ಯಗಳ ಏಕದಿನ ಸರಣಿಯ ವೇಳೆ ಜೇಸನ್ ರಾಯ್ ಬೆನ್ನು ನೋವಿನ ಕಾರಣ ತಂಡದಿಂದ ಹೊರಗುಳಿದಿದ್ದರು. ಈ ವೇಳೆ ಹ್ಯಾರಿ ಬ್ರೂಕ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ನ್ಯೂಜಿಲೆಂಡ್ ವಿರುದ್ಧ ಮೂರು ಇನ್ನಿಂಗ್ಸ್ನಿಂದ ಕೇವಲ 37 ರನ್ ಕಲೆ ಹಾಕಿದ್ದರು. ಆದರು ಅವರ ಹಳೆಯ ಪ್ರದರ್ಶನವನ್ನು ಪರಿಗಣಿಸಿ ತಂಡದಲ್ಲಿ ಸ್ಥಾನ ನೀಡಲಾಗಿದೆ.