ಕರ್ನಾಟಕ

karnataka

ETV Bharat / sports

ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಬೌಲಿಂಗ್ ಆಯ್ಕೆ: ಶೆಫಾಲಿ ವರ್ಮಾ ಪದಾರ್ಪಣೆ - ಏಕದಿನ ಸರಣಿ

ಈಗಾಲೆ ಟಿ20ಯಲ್ಲಿ ನಂಬರ್​ ಒನ್ ಆಗಿರುವ ಶೆಫಾಲಿ ಇದೇ ಪ್ರವಾಸದಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿ ಇಂಗ್ಲೆಂಡ್ ಮಹಿಳೆಯರ ಬೌಲಿಂಗ್ ಪುಡಿಗಟ್ಟಿದ್ದರು. ಇದೀಗ 50 ಓವರ್​ಗಳ ಕ್ರಿಕೆಟ್​ನಲ್ಲೂ ತಮ್ಮ ಪರಾಕ್ರಮ ತೋರುವ ಉತ್ಸಾಹದಲ್ಲಿದ್ದಾರೆ. ಇತ್ತ ಇಂಗ್ಲೆಂಡ್ ಪರ ಸೋಫಿಯಾ ಡಂಕ್ಲೆ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಲಿದ್ದಾರೆ.

ಭಾರತ vs ಇಂಗ್ಲೆಂಡ್ ಏಕದಿನ ಕ್ರಿಕೆಟ್​
ಭಾರತ vs ಇಂಗ್ಲೆಂಡ್ ಏಕದಿನ ಕ್ರಿಕೆಟ್​

By

Published : Jun 27, 2021, 4:00 PM IST

ಬ್ರಿಸ್ಟೋಲ್: ಭಾರತ ಮತ್ತು ಇಂಗ್ಲೆಂಡ್ ಮಹಿಳಾ ತಂಡದ ನಡುವಿನ ಏಕದಿನ ಸರಣಿ ಇಂದಿನಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಟಾಸ್​ ಗೆದ್ದ ಮಹಿಳಾ ತಂಡ ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ. ಸ್ಫೋಟಕ ಬ್ಯಾಟರ್ ಶೆಫಾಲಿ ವರ್ಮಾ ಭಾರತದ ಪರ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದಾರೆ.

ಈಗಾಲೆ ಟಿ20ಯಲ್ಲಿ ನಂಬರ್​ ಒನ್ ಆಗಿರುವ ಶೆಫಾಲಿ ಇದೇ ಪ್ರವಾಸದಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿ ಇಂಗ್ಲೆಂಡ್ ಮಹಿಳೆಯರ ಬೌಲಿಂಗ್ ಪುಡಿಗಟ್ಟಿದ್ದರು. ಇದೀಗ 50 ಓವರ್​ಗಳ ಕ್ರಿಕೆಟ್​ನಲ್ಲೂ ತಮ್ಮ ಪರಾಕ್ರಮ ತೋರುವ ಉತ್ಸಾಹದಲ್ಲಿದ್ದಾರೆ. ಇತ್ತ ಇಂಗ್ಲೆಂಡ್ ಪರ ಸೋಫಿಯಾ ಡಂಕ್ಲೆ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಲಿದ್ದಾರೆ.

ಮುಖಾಮುಖಿ:

ಎರಡು ತಂಡಗಳೂ ಒಟ್ಟು 70 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಭಾರತ 30 ಪಂದ್ಯಗಳಲ್ಲಿ ಜಯಸಿದ್ದರೆ, ಇಂಗ್ಲೆಂಡ್​ 37 ಪಂದ್ಯಗಳಲ್ಲಿ ಜಯ ಸಾಧಿಸಿದೆ

ಭಾರತ ಮಹಿಳೆಯರು : ಸ್ಮೃತಿ ಮಂದಾನ, ಶೆಫಾಲಿ ವರ್ಮಾ, ಪೂನಮ್ ರೌತ್, ಮಿಥಾಲಿ ರಾಜ್ (ನಾಯಕಿ) ಹರ್ಮನ್‌ಪ್ರೀತ್ ಕೌರ್, ದೀಪ್ತಿ ಶರ್ಮಾ, ತಾನಿಯಾ ಭಾಟಿಯಾ (ವಿಕೀ), ಶಿಖಾ ಪಾಂಡೆ, ಜೂಲನ್ ಗೋಸ್ವಾಮಿ, ಪೂಜಾ ವಸ್ತ್ರಾಕರ್, ಏಕ್ತಾ ಬಿಷ್ತ್​

ಇಂಗ್ಲೆಂಡ್ ಮಹಿಳೆಯರು: ಲಾರೆನ್ ವಿನ್ಫೀಲ್ಡ್ ಹಿಲ್, ಟಮ್ಮಿ ಬ್ಯೂಮಾಂಟ್, ಹೀದರ್ ನೈಟ್ (ನಾಯಕಿ), ನಟಾಲಿಯಾ ಸೀವರ್, ಆ್ಯಮಿ ಎಲ್ಲೆನ್ ಜೋನ್ಸ್ (ವಿಕೀ), ಸೋಫಿಯಾ ಡಂಕ್ಲೆ, ಕ್ಯಾಥರೀನ್ ಬ್ರಂಟ್, ಸಾರಾ ಗ್ಲೆನ್, ಸೋಫಿ ಎಕ್ಲೆಸ್ಟೋನ್, ಅನ್ಯಾ ಶ್ರಬ್ಸೋಲ್, ಕೇಟ್ ಕ್ರಾಸ್

ABOUT THE AUTHOR

...view details