ಬ್ರಿಸ್ಟೋಲ್ :7 ವರ್ಷಗಳ ನಂತರ ಟೆಸ್ಟ್ ಕ್ರಿಕೆಟ್ಗೆ ಮರಳಿರುವ ಭಾರತದ ವನಿತೆಯರ ವಿರುದ್ಧ ಟಾಸ್ ಗೆದ್ದ ಅತಿಥೇಯ ಇಂಗ್ಲೆಂಡ್ ಮಹಿಳಾ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ. ಭಾರತ ತಂಡದ 2014ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಕೊನೆಯ ಟೆಸ್ಟ್ ಪಂದ್ಯವನ್ನಾಡಿತ್ತು. ಇದೀಗ 7 ವರ್ಷಗಳ ಬಳಿಕ ಮತ್ತೆ ಬಿಳಿ ಜರ್ಸಿಯಲ್ಲಿ ಆಡಲಿದೆ.
ಭಾರತ ತಂಡದ ಪರ ಲೇಡಿ ಸೆಹ್ವಾಗ್ ಎಂದೇ ಖ್ಯಾತರಾಗಿರುವ ಯುವ ಆಟಗಾರ್ತಿ ಶೆಫಾಲಿ ವರ್ಮಾ ಸೇರಿದಂತೆ ಆಲ್ರೌಂಡರ್ ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ವಿಕೆಟ್ ಕೀಪರ್ ತಾನಿಯಾ ಭಾಟಿಯಾ ಮತ್ತು ಸ್ನೇಹ್ ರಾಣಾ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಲಿದ್ದಾರೆ. ಇಂಗ್ಲೆಂಡ್ ಪರ ಸೋಫಿಯಾ ಡಂಕ್ಲೆ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಇಂಗ್ಲೆಂಡ್ ಟೆಸ್ಟ್ ತಂಡವನ್ನು ಪ್ರತಿನಿಧಿಸಲಿರುವ ಮೊದಲ ಕಪ್ಪು ವರ್ಣೀಯ ಆಟಗಾರ್ತಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ವನಿತೆಯರ ತಂಡಗಳು ಒಟ್ಟು 13 ಟೆಸ್ಟ್ ಪಂದ್ಯಗಳನ್ನಾಡಿದ್ದು, ಇದರಲ್ಲಿ ಭಾರತ 2ರಲ್ಲಿ ಜಯಸಿಸಿದ್ದರೆ, ಇಂಗ್ಲೆಂಡ್ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದೆ. ವಿಶೇಷವೆಂದರೆ 2 ತಂಡಗಳು ಸೋಲು ಕಂಡಿರುವುದು ತವರಿನಲ್ಲಿ. ಉಳಿದ 10 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ.