ಇಂಗ್ಲೆಂಡ್:ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಟಿ-20 ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ಪಡೆ 8 ವಿಕೆಟ್ಗಳ ಸೋಲು ಕಂಡಿದ್ದು, ಈ ಮೂಲಕ ಸರಣಿಯಲ್ಲಿ 2-1 ಅಂತರದಿಂದ ಸರಣಿ ಕೈಚೆಲ್ಲಿದೆ.
ಬ್ಯಾಟಿಂಗ್ನಲ್ಲಿ ಅಬ್ಬರಿಸಿದ ಡೇನಿಯಲ್ ವ್ಯಾಟ್ ಮೊದಲ ಟಿ-20 ಪಂದ್ಯದಲ್ಲಿ ಸೋಲು ಕಂಡಿದ್ದ ಭಾರತ, ಎರಡನೇ ಪಂದ್ಯದಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡಿ ಜಯ ಸಾಧಿಸಿತ್ತು. ಹೀಗಾಗಿ ಕೊನೆಯ ಪಂದ್ಯ ಎರಡು ತಂಡಗಳಿಗೆ ಮಾಡು ಇಲ್ಲವೆ ಮಡಿ ಆಗಿತ್ತು. ಈ ಪಂದ್ಯದಲ್ಲಿ ಆಂಗ್ಲರ ಪಡೆ ಸುಲಭ ಗೆಲುವು ದಾಖಲು ಮಾಡಿ ಸರಣಿ ಕೈವಶ ಮಾಡಿಕೊಂಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಮುಂದಾದ ಭಾರತ ತಂಡ ಆರಂಭದಲ್ಲೇ ಆಘಾತಕ್ಕೊಳಗಾಯಿತು. ಸ್ಫೋಟಕ ಬ್ಯಾಟ್ಸಮನ್ ಶೆಫಾಲಿ ವರ್ಮಾ(0)ರನ್ಗಳಿಕೆ ಮಾಡುವ ಮೊದಲೇ ಪೆವಿಲಿಯನ್ ಸೇರಿಕೊಂಡರು. ಇದಾದ ಬಳಿಕ ಬಂದ ಡಿಯೊಲ್ ಕೂಡ(6) ನಿರಾಸೆ ಮೂಡಿಸಿದರು.
ಸರಣಿ ಗೆದ್ದ ಇಂಗ್ಲೆಂಡ್ ಮಹಿಳಾ ತಂಡದ ಸಂಭ್ರಮ 13ರನ್ಗಳಿಸುವಷ್ಟರಲ್ಲಿ ಪ್ರಮುಖ 2 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನಾ ಹಾಗೂ ಕ್ಯಾಪ್ಟನ್ ಹರ್ಮನ್ಪ್ರೀತ್ ಕೌರ್ ಉತ್ತಮ ಜೊತೆಯಾಟ ನೀಡಿದರು. ಆದರೆ 36ರನ್ಗಳಿಕೆ ಮಾಡಿದ್ದ ವೇಳೆ ಕ್ಯಾಪ್ಟನ್ ಕೌರ್ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಸ್ನೇಹ ರಾಣಾ ಕೂಡ(4) ವಿಕೆಟ್ ಕಳೆದುಕೊಂಡರು. ಅರ್ಧಶತಕ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಸ್ಮೃತಿ ಮಂದಾನಾ(70)ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರೆ, ವಿಕೆಟ್ ಕೀಪರ್ ರಿಚಾ ಘೋಸ್(20)ರನ್ಗಳಿಕೆ ಮಾಡಿದರು. ಕೊನೆಯದಾಗಿ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ನಷ್ಟಕ್ಕೆ 153ರನ್ಗಳಿಕೆ ಮಾಡಿತು.
ಇದನ್ನೂ ಓದಿರಿ 'BJP ಅಧಿಕಾರಕ್ಕೆ ತರುವುದೇ ಗುರಿ': ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಮುನ್ನ ಅಣ್ಣಾಮಲೈ ಪ್ರತಿಜ್ಞೆ
154ರನ್ಗಳ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ ತಂಡ ಆರಂಭದಲ್ಲೇ ಟಮ್ಮಿ ಬ್ಯೂಮಾಂಟ್(11) ವಿಕೆಟ್ ಕಳೆದುಕೊಂಡಿತು. ಆದರೆ ಈ ವೇಳೆ ಒಂದಾದ ಡೇನಿಯಲ್ ವ್ಯಾಟ್ ಅಜೇಯ(89), ನಟಾಲಿಯಾ ಸೈವರ್(42) ಮುರಿಯದ ಜೊತೆಯಾಟವಾಡಿ ತಂಡಕ್ಕೆ ಸುಲಭ ಗೆಲುವು ತಂದಿಟ್ಟರು. ಕೊನೆಯದಾಗಿ ತಂಡ 18.4 ಓವರ್ಗಳಲ್ಲಿ 2ವಿಕೆಟ್ನಷ್ಟಕ್ಕೆ 154ರನ್ಗಳಿಕೆ ಮಾಡಿ ಗೆಲುವು ದಾಖಲು ಮಾಡಿತು. ಭಾರತದ ಪರ ದೀಪ್ತಿ ಶರ್ಮಾ ಹಾಗೂ ಸ್ನೇಹಾ ರಾಣಾ ಮಾತ್ರ ತಲಾ 1ವಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರೆ, ಉಳಿದೆಲ್ಲ ಬೌಲರ್ಸ್ ದುಬಾರಿಯಾದರು.